Vijayapura: ಬಾಗಪ್ಪ ಹತನಾದ ಮೇಲೆ ಭೀಮಾತೀರದಲ್ಲಿ ಬಾಡಿಗೆ ಗೂಂಡಾಗಳ ಹಾವಳಿ!

Published : Feb 22, 2025, 05:02 PM ISTUpdated : Feb 22, 2025, 05:04 PM IST
Vijayapura: ಬಾಗಪ್ಪ ಹತನಾದ ಮೇಲೆ ಭೀಮಾತೀರದಲ್ಲಿ ಬಾಡಿಗೆ ಗೂಂಡಾಗಳ ಹಾವಳಿ!

ಸಾರಾಂಶ

ಭೀಮಾತೀರದ ಹಂತಕ ಬಾಗಪ್ಪ ಸತ್ತ ಬೆನ್ನಲ್ಲೆ ಬಾಡಿಗೆ ಗೂಂಡಾಗಳ ಹಾವಳಿ ಶುರುವಾಗಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವವರಿಗೆ ಭೀಮಾತೀರದ ಹಂತಕರ ಹೆಸ್ರಲ್ಲಿ ಹೆದರಿಸಲಾಗ್ತಿದೆ. ಟ್ರಕ್‌ ಹರಿಸಿ ಕೊಂದು ಹಾಕೋ ಧಮ್ಕಿ ಹಾಕಲಾಗ್ತಿದೆ. 

ವರದಿ: ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಫೆ.22): ಭೀಮಾತೀರದ ಹಂತಕ ಬಾಗಪ್ಪ ಸತ್ತ ಬೆನ್ನಲ್ಲೆ ಬಾಡಿಗೆ ಗೂಂಡಾಗಳ ಹಾವಳಿ ಶುರುವಾಗಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವವರಿಗೆ ಭೀಮಾತೀರದ ಹಂತಕರ ಹೆಸ್ರಲ್ಲಿ ಹೆದರಿಸಲಾಗ್ತಿದೆ. ಟ್ರಕ್‌ ಹರಿಸಿ ಕೊಂದು ಹಾಕೋ ಧಮ್ಕಿ ಹಾಕಲಾಗ್ತಿದೆ. ಸಿಡಿಪಿಓ ಕಚೇರಿಯಲ್ಲಿ ಮಾಹಿತಿ ಕೇಳಿದ ಕೆಆರ್‌ಎಸ್ ಪಕ್ಷದ ಮುಖಂಡರಿಗೆ ಭೀಮಾತೀರದ ಬಾಡಿಗೆ ಗೂಂಡಾ ಧಮ್ಕಿ ಹಾಕಿದ್ದು, ಪ್ರಕರಣ ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲೇರಿದೆ..

ಭೀಮಾತೀರದ ಹೆಸ್ರಲ್ಲಿ ಧಮ್ಕಿ: ಈತನ ಹೆಸ್ರು ಸೋಮಶೇಖರ್‌ ಪಟ್ಟಣಶೆಟ್ಟಿ ಅಂತಾ. ಚಡಚಣ ಪಟ್ಟಣ ನಿವಾಸಿ. ಮಾಹಿತಿ ಕೇಳಲು ಶಿಶು ಅಭಿವೃದ್ಧಿ ಇಲಾಖೆ ಕಚೇರಿಗೆ ಹೋದ ಕೆಆರ್‌ಎಸ್‌ ಪಕ್ಷದ ಕಾರ್ಯಕರ್ತರಿಗೆ ಜೀವ ಬೆದರಿಕೆ ಹಾಕಿದ್ದಾನೆ. ಭೀಮಾತೀರದ ನಟೋರಿಯಸ್‌ ಹಂತಕರ ಹೆಸ್ರಲ್ಲಿ ಹೆದರಿಸೋ ಪ್ರಯತ್ನ ಮಾಡಿದ್ದಾನೆ. 

ಪ್ರಧಾನಿ ಮೋದಿ, ಬಿಜೆಪಿಯಿಂದ ಕಾಂಗ್ರೆಸ್ ಗ್ಯಾರಂಟಿ ನಕಲು: ಸಚಿವ ಎಂ.ಬಿ.ಪಾಟೀಲ್

ಚಡಚಣದಲ್ಲಿ ಆಕಳು ಕಡಿತಾರೆ ; ಅಲ್ಲಿ ಹೋದ್ರೆ ಕೊಂದೆ ಹಾಕ್ತಾರೆ: ಇನ್ನೂ ಮುಂದುವರೆದು ಭೀಮಾತೀರದ ಚಡಚಣದಲ್ಲಿ ದಿನಕ್ಕೆ ನಾಲ್ಕು ಆಕಳು ಕಡೆಯುತ್ತಾರೆ, ಬೈಕ್ ಮೇಲೆ ಹೊರಟಾಗ ಲಾರಿ ಹಾಯಿಸಿ ಸಾಯಿಸ್ತಾರೆ, ಅಧಿಕಾರಿಗಳಾರೂ ಸಾಚಾ ಅಲ್ವ, ಐದು ಲಕ್ಷ ಕೊಟ್ಟರೆ ಪೊಲೀಸರೂ ಸುಮ್ಮನಿರುತ್ತಾರೆ ಎಂದು ಕೆಆರ್‌ಎಸ್‌ ಪಕ್ಷದ ಮುಖಂಡರನ್ನ ಬೆದರಿಸಿದ್ದಾನೆ. ಸರ್ಕಾರಿ ಕಚೇರಿಯಲ್ಲಿ ಕೂತೆ ಇದೆಲ್ಲವನ್ನ ಮಾತನಾಡಿ ಜೀವ ಬೆದರಿಕೆ ಹಾಕಿದ ಆಸಾಮಿ ವಿರುದ್ಧ ಕ್ರಮಕ್ಕೆ ಕೆಆರ್‌ಎಸ್‌ ಪಕ್ಷದ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಮೊಟ್ಟೆ ವಿತರಣೆಯಲ್ಲಿ ಭಾರೀ ಗೋಲ್ಮಾಲ್ ಆರೋಪ: ಚಡಚಣ ತಾಲೂಕಿನ ಅಂಗನವಾಡಿಗಳಿಗೆ ಸಪ್ಲೈ ಆಗುವ ಮೊಟ್ಟೆ ಕಳ್ಳತನವಾಗ್ತಿವೆ. ಮಕ್ಕಳ ಆಹಾರದಲ್ಲು ಅಧಿಕಾರಿಗಳು ತಿಂದು ತೇಗ್ತಿದ್ದಾರೆ ಎಂದು ಕೆಆರ್‌ಎಸ್‌ ಪಕ್ಷದ ಆರೋಪವಾಗಿತ್ತು. ಈ ಬಗ್ಗೆ ಖುದ್ದು ಅಧಿಕಾರಿಗಳಿಂದ ದಾಖಲೆ ಪಡೆಯಬೇಕು ಅಂತಾ ಪಕ್ಷದ ಕಾರ್ಯಕರ್ತರು ಸಿಡಿಪಿಓ ಕಚೇರಿಗೆ ಹೋಗಿದ್ದಾರೆ. ಅಲ್ಲಿ ಅಧಿಕಾರಿ ಇಲ್ಲದೆ ಇರೋವಾಗ ಮಧ್ಯಪ್ರವೇಶಿಸಿದ ಇದೆ ಸೋಮಶೇಖರ್‌ ಮನಬಂದಂತೆ ಆವಾಜ್‌ ಹಾಕಿದ್ದಾನೆ. 

ಬಾಗಪ್ಪನನ್ನೆ ಕೊಂದ್ರೆ ನೀವ್ ಯಾವ ಲೆಕ್ಕಾ ; ಜೀವ ಬೆದರಿಕೆ: ಅತ್ತ ಮೊಟ್ಟೆ ಗೋಲ್ಮಾಲ್‌ ಬಗ್ಗೆ ಮಾಹಿತಿ ಪಡೆಯೋಕೆ ಹೋದ KRS ಪಕ್ಷದವರನ್ನೆ ಬೆದರಿಸಿದ್ದಾನೆ. ಹಣ ಬೇಕಾದರೆ ತಗೊಳ್ಳಿ, ಅಂಗನವಾಡಿಗೆ ಕಿರಿಕಿರಿ ಮಾಡುವಂಗಿಲ್. ಅಲ್ಲದೇ, ಬಾಗಪ್ಪ ಹರಿಜನನ್ನೇ ಬಿಟ್ಟಿಲ್ಲ...ಇಲ್ಲಿ ಜನ ಸರಿಯಿಲ್ಲ ಎನ್ನುತ್ತಾನಲ್ಲದೇ ಬೈಕ್ ಮೇಲೆ ಹೊರಟಾಗ ಲಾರಿ ಹಾಯಿಸಿದರೆ ಮುಗೀತು ಎಂದು ಜೀವಕ್ಕೆ ಆಪತ್ತು ತರೋ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ..

ಸಚಿವ ರಾಜಣ್ಣಗೆ ಹೈಕಮಾಂಡ್ ಇಂಜೆಕ್ಷನ್ ಕೊಡುತ್ತೆ: ಶಾಸಕ ಎಚ್.ಸಿ.ಬಾಲಕೃಷ್ಣ

ಚಡಚಣ ಸಿಡಿಪಿಓ, ಬಾಡಿಗೆ ಗೂಂಡಾ ವಿರುದ್ಧ ಕ್ರಮಕ್ಕೆ ಆಗ್ರಹ: ಇನ್ನೂ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ವಿಡಿಯೋ ಮಾಡಿದ್ದಲ್ಲದೇ ಸಂಬಂಧಿಸಿದ ಹಿರಿಯ ಅಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಜಿಲ್ಲಾಧಿಕಾರಿ ಟಿ ಭೂಬಾಲನ್‌ ರಿಗೆ ದೂರು ಸಹ ನೀಡಿದ್ದಾರೆ. ಸಿಡಿಪಿಓ ಸೇರಿ ಬಾಡಿಗೆ ಗೂಂಡಾನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

PREV
click me!

Recommended Stories

Bhatkal: ಮರ ಏರಿ ಹರಕೆ ತೀರಿಸುವ ವಿಶಿಷ್ಟ ಆಚರಣೆಗೆ ಸಾಕ್ಷಿಯಾದ ಶೇಡಬರಿ ಜಾತ್ರೆ
'ನಾಯಿ-ನರಿಗಳು ಕರವೇ ಬಗ್ಗೆ ಮಾತಾಡಿದ್ರೆ ಏನ್‌ ಹೇಳೋಕೆ ಆಗುತ್ತೆ..' ಸುದೀಪ್‌ ಭೇಟಿ ಕುರಿತ ವಿವಾದದ ಬಗ್ಗೆ ನಾರಾಯಣ ಗೌಡ ತಿರುಗೇಟು