Puneeth Rajkumar: ಯಲಬುರ್ಗಾ ತಾಲೂಕು ಕ್ರೀಡಾಂಗಣಕ್ಕೆ ಪುನೀತ್‌ ಹೆಸರು

By Kannadaprabha News  |  First Published Dec 28, 2021, 9:50 AM IST

ಪಟ್ಟಣ ತಾಲೂಕು ಕ್ರೀಡಾಂಗಣಕ್ಕೆ ನಟ ಪುನೀತ್ ರಾಜಕುಮಾರ  ಹೆಸರಿಡಲು ಬಗ್ಗೆ ಶೀಘ್ರದಲ್ಲಿ ಪಟ್ಟಣ ಪಂಚಾಯಿತಿಯಲ್ಲಿ ನಿರ್ಧರಿಸಲಾಗುವುದು ಎಂದು ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಕ್ರೀಡಾಪುಟುಗಳಿಗೆ ಭರವಸೆ ನೀಡಿದರು.


ಯಲಬುರ್ಗಾ (ಡಿ.28): ಪಟ್ಟಣ ತಾಲೂಕು ಕ್ರೀಡಾಂಗಣಕ್ಕೆ ನಟ ಪುನೀತ್‌ ರಾಜಕುಮಾರ್‌ (Puneeth Rajkumar) ಹೆಸರಿಡಲು ಬಗ್ಗೆ ಶೀಘ್ರದಲ್ಲಿ ಪಟ್ಟಣ ಪಂಚಾಯಿತಿಯಲ್ಲಿ ನಿರ್ಧರಿಸಲಾಗುವುದು ಎಂದು ಅಧ್ಯಕ್ಷ ಅಮರೇಶ (Amaresha) ಹುಬ್ಬಳ್ಳಿ ಕ್ರೀಡಾಪುಟುಗಳಿಗೆ ಭರವಸೆ ನೀಡಿದರು.

ಸ್ಥಳೀಯ ತಾಲೂಕು ಕ್ರೀಡಾಂಗಣದಲ್ಲಿಪುನೀತ್‌ ರಾಜಕುಮಾರ್‌ ಸ್ಮರಣಾರ್ಥ 'ಅಪ್ಪು ಟೆಸ್ಟ್‌' (Appu Test) ಸೀಜನ್‌ 3ರ ಕ್ರಿಕೆಟ್‌ ಪಂದ್ಯದ ಪ್ರಶಸ್ತಿ ವಿರತಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ರೀಡಾಭಿಮಾನಿಗಳ ಒತ್ತಾಯದ ಮೇರೆಗೆ ಪಟ್ಟಣದಲ್ಲಿ ಪುನೀತ ವೃತ್ತ ನಿರ್ಮಾಣ ಜತೆಗೆ ಕ್ರೀಡಾಂಗಣಕ್ಕೆ ಅವರ ಹೆಸರು ಮರು ನಾಮಕರಣ ಮಾಡಲು ಸದಸ್ಯರ ಜತೆಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು. 

Tap to resize

Latest Videos

ಕ್ರೀಡಾಂಗಣದ ಅಭಿವೃದ್ಧಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು. ಸಂಗಪ್ಪ ಬಂಡಿ, ಗದ್ದೆಯ್ಯ ಮ್ಯಾಗಳಮಠ, ಮಹಾಂತೇಶ ಹಿರೇಮಠ, ಮಹ್ಮದ್‌ಯೂಸಫ್‌, ಮಹಾಂತೇಶ ಛಲವಾದಿ, ಯಲ್ಲಪ್ಪ ಹಂದ್ರಾಳ, ಕಲ್ಲಪ್ಪ ಕರಮುಡಿ ಮಾತನಾಡಿದರು. ಫೇಮಸ್‌ ಕ್ರಿಕೆಟ್‌ ಕ್ಲಬ್‌ ಅಧ್ಯಕ್ಷ ಮಲ್ಲಿಕಾರ್ಜನ ಜಕ್ಕಲಿ ಅಧ್ಯಕ್ಷ ವಹಿಸಿದ್ದರು.

Puneeth Rajkumar Statue: ಮನೆಯ ಅಂಗಳದಲ್ಲಿ ಅಪ್ಪು ಪುತ್ಥಳಿ ಸ್ಥಾಪಿಸಿದ ರೈತ ದಂಪತಿ

ಫೈನಲ್‌ ಪಂದ್ಯದಲ್ಲಿ ರಿಕಿ ಬಾಯ್ಸ್ ತಂಡ ಚಾಂಪಿಯನ್‌ ಪಟ್ಟಮುಡಿಗೆರಿಸಿಕೊಂಡಿತು. ಇಂಡಿಯನ್‌ ವಾಲ್‌ ತಂಡ ರನ್ನಅಪ್‌ ಚಾಂಪಿಯನ್‌ ಸ್ಥಾನ ಪಡೆಯಿತು. ಪಪಂ ಸದಸ್ಯ ಕಳಕಪ್ಪ ತಳವಾರ, ಶಿಕ್ಷಕ ಲಕ್ಷ್ಮಣ ಛಲವಾದಿ, ನ್ಯೂಪಿಸಿಸಿ ಕ್ಲಬ್‌ ಅಧ್ಯಕ್ಷ ಅಮೀನ್‌ಸಾಬ್‌ ಕೆಳಗಿನಮನಿ, ವಿಜಯ ಜಕ್ಕಲಿ, ಪ್ರಕಾಶ ಛಲವಾದಿ, ಮುತ್ತಣ ಪುರ್ತಗೇರಿ, ನಾಗರಾಜ ಬಿನ್ನಾಳ, ಶಂಕರ್‌ ಟೆಂಗಿನಕಾಯಿ, ಶಿವುಕುಮಾರ ಭಾವಿಮನಿ ಇದ್ದರು.

ನಟ ಪುನೀತ್‌ ಅವರಿಂದ ಪ್ರೇರಣೆಗೊಂಡ ನೇತ್ರದಾನ ದೊಡ್ಡ ಪ್ರಮಾಣದಲ್ಲಿ ನಡೆಯಲು ಆರಂಭವಾಗಿದೆ. ಅವರ ನಿಧನದ ನಂತರ 400 ಕಣ್ಣುಗಳನ್ನು ದಾನ ಕೊಡಲಾಗಿದ್ದು, 10 ಸಾವಿರ ಮಂದಿ ನೇತ್ರದಾನಕ್ಕೆ(Eye Donation) ನೋಂದಣಿ ಮಾಡಿಸಿದ್ದಾರೆ ಎಂದು ನಾರಾಯಣ ನೇತ್ರಾಲಯ (Narayana Nethralaya) ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಭುಜಂಗ ಶೆಟ್ಟಿ (Dr.K Bhujang Shetty) ಹೇಳಿದರು.

ಡಾ.ವೇಮಗಲ್‌ ನಾರಾಯಣಸ್ವಾಮಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಕಾಡುಮಲ್ಲೇಶ್ವರ ಗೆಳೆಯರ ಬಳಗ ಜಂಟಿಯಾಗಿ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ನಟ 'ಪುನೀತ್‌ ರಾಜಕುಮಾರ್‌ ಸ್ಮರಣೆ, ಸಂಸ್ಕೃತಿ ಸಿರಿ' ಪ್ರಶಸ್ತಿ ಪ್ರದಾನ ಹಾಗೂ ಡಾ.ರಾಜ್‌ಕುಮಾರ್‌-ಪುನೀತ್‌ ರಾಜ್‌ಕುಮಾರ್‌ ಗೀತನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

Puneeth Rajkumar Layout : ಪುನೀತ್ ಹೆಸರಿಟ್ಟಿದ್ದ ಬಡಾವಣೆ ನಾಮಫಲಕ ತೆರವು : ಆಕ್ರೋಶ

ಡಾ.ರಾಜ್‌ಕುಮಾರ್‌ (Dr Rajkumar), ಪಾರ್ವತಮ್ಮ ರಾಜಕುಮಾರ್‌ (Parvathamma Rajkumar) ಹಾಗೂ ಪುನೀತ್‌ ರಾಜಕುಮಾರ್‌ ಕಣ್ಣುಗಳನ್ನು ನೀಡಿ ಮಾದರಿಯಾಗಿದ್ದಾರೆ. ಅಪ್ಪು ಕಣ್ಣುಗಳು ನಾಲ್ವರಿಗೆ ಉಪಯೋಗವಾದ ಬೆನ್ನಲ್ಲೆ ಕಳೆದ ಒಂದೂವರೆ ತಿಂಗಳಲ್ಲಿ 400 ಕಣ್ಣುಗಳು ದಾನವಾಗಿ ಲಭಿಸಿವೆ. 10 ಸಾವಿರ ಮಂದಿ ನೇತ್ರದಾನಕ್ಕೆ ನೋಂದಣಿ ಮಾಡಿಸಿದ್ದಾರೆ. ಅಲ್ಲದೇ ಕಣ್ಣುಗಳ ಸಂಗ್ರಹದ ಕೊರತೆ ನೀಗಿಸಲು ಮೃತ ವ್ಯಕ್ತಿಗಳ ನೇತ್ರ ದಾನವಾಗಿ ಪಡೆಯಲು ಎಲ್ಲರೂ ರಾಯಭಾರಿಯಂತೆ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.

click me!