ರೈಲ್ವೆಯ ವ್ಹೀಲ್ ಆಂಡ್ ಆಕ್ಸಲ್ ಗ್ಯಾರೇಜ್ ಸ್ಥಾಪನೆಗೆ ಕ್ರಮ: ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್ ಭರವಸೆ|ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳನ್ನು ಶೇ. 50ರ ಸಹಭಾಗಿತ್ವದಲ್ಲಿ ರಾಜ್ಯ ಸರ್ಕಾರವೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತದೆ|ವಿಮಾನ ನಿಲ್ದಾಣ ಅಭಿವೃದ್ಧಿಗೆ ಸಾಥ್|
ಬೀದರ್[ಜ.31]: ಬೀದರ್‌ನಲ್ಲಿ ಭಾರತ ಸರ್ಕಾರದ ಸಹಭಾಗಿತ್ವದಲ್ಲಿ ರೈಲ್ವೆಯ ವ್ಹೀಲ್ ಆಂಡ್ ಆಕ್ಸಲ್ ಗ್ಯಾರೇಜ್ ಸ್ಥಾಪಿಸುವ ಕುರಿತು ಕ್ರಮವಹಿಸಲಾಗುತ್ತದೆ ಎಂದು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಕಪಿಲ್ ಮೋಹನ್ ತಿಳಿಸಿದ್ದಾರೆ.
ಬೀದರ್ ಏರ್‌ಪೋರ್ಟ್ ಟರ್ಮಿನಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಅವರು ರೈಲ್ವೆಯ ವ್ಹೀಲ್ ಆಂಡ್ ಆಕ್ಸಲ್ ಗ್ಯಾರೇಜ್ ಸ್ಥಾಪಿಸುವ ಕುರಿತು ಮನವಿಸಿದ್ದಕ್ಕೆ ಸ್ಪಂದಿಸಿ ಭರವಸೆ ನೀಡಿದರು.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕರ್ನಾಟಕ ರೈಲ್ವೆ ಇನ್ಫಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಎಂಟರ್‌ಪ್ರೈಸ್ ಎಂದು ನಿಗಮ ಸ್ಥಾಪಿಸಿದ್ದು ಆ ಮೂಲಕ ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳನ್ನು ಶೇ. 50ರ ಸಹಭಾಗಿತ್ವದಲ್ಲಿ ರಾಜ್ಯ ಸರ್ಕಾರವೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತದೆ. ಬಹುತೇಕ ಅಧಿಕಾರಿಗಳು ರೈಲ್ವೆ ಇಲಾಖೆಯಿಂದ ಇರುತ್ತಾರೆ. ಆದರೆ ಅದರ ಅಧ್ಯಕ್ಷತೆ ರಾಜ್ಯ ಸರ್ಕಾರದ ಅಧಿಕಾರಿಗಳು ವಹಿಸಿಕೊಳ್ಳುತ್ತಾರೆ. ಬೀದರ್‌ನಲ್ಲಿ ರೈಲ್ವೆ ಮೇಲ್ಸೆತುವೆಗಳು ಹಾಗೂ ಕೆಳ ಸೇತುವೆಗಳ ಅಗತ್ಯವಿದ್ದಲ್ಲಿ ಅವುಗಳನ್ನೂ ನಾವು ಮಂಜೂರಿ ಮಾಡಿಕೊಡುತ್ತೇವೆ ಎಂದು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಕಪಿಲ್ ಮೋಹನ್ ತಿಳಿಸಿದರು.
ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ಪ್ರಧಾನ ಕಾರ್ಯದರ್ಶಿಗಳಾದ ಕಪಿಲ್ ಮೋಹನ್ ಮುತುವರ್ಜಿ ವಹಿಸಿದ್ದಕ್ಕೆ ಇಲ್ಲಿ ವಿಮಾನಯಾನ ಆರಂಭವಾಗಲು ಕಾರಣವಾಗಿದೆ. ಜಿಲ್ಲಾಧಿಕಾರಿಗಳ ಶ್ರಮ ಅತ್ಯಂತ ಶ್ಲಾಘನೀಯವಾಗಿದೆ ಎಂದರು. ರೈಲ್ವೆಯ ವ್ಹೀಲ್ ಆಂಡ್ ಆಕ್ಸಲ್ ಗ್ಯಾರೇಜ್ ಸ್ಥಾಪಿಸಿದ್ದೆಯಾದಲ್ಲಿ ಇಲ್ಲಿ ಸುಮಾರು 600 ಜನರಿಗೆ ಉದ್ಯೋಗಾವಕಾಶಗಳು ಒದಗಿ ಬರುತ್ತವೆ. ಹಾಗೆಯೇ ಇಲ್ಲಿನ ಐಟಿಐ ವಿದ್ಯಾರ್ಥಿಗಳಿಗೂ ತರಬೇತಿಗೆ ಅನುಕೂಲವಾಗುತ್ತದೆ. ಇದೊಂದು ರೈಲ್ವೆಯ ಮಹತ್ತರ ಕಾರ್ಯವಾಗಿದೆ ಎಂದು ಸೂರ್ಯಕಾಂತ ನಾಗಮಾರಪಳ್ಳಿ ತಿಳಿಸಿದರು.
ಬೀದರ್, ಕಲಬುರಗಿ ಭಾಗದ ಅಭಿವೃದ್ಧಿಗೆ ವಿಮಾನಯಾನ ಪೂರಕ
ಬೀದರ್ ಮತ್ತು ಕಲಬುರಗಿ ವಿಮಾನಯಾನದ ಮೂಲಕ ಈ ಭಾಗದಲ್ಲಿ ಕೈಗಾರಿಕೋದ್ಯಮ, ಶೈಕ್ಷಣಿಕ, ಪ್ರವಾಸೋದ್ಯಮದ ಹಾಗೂ ಮತ್ತಿತರ ಕ್ಷೇತ್ರಗಳ ಅಭಿವೃದ್ಧಿಗಾಗಿನ ಯೋಜನೆಗಳ ಸಮಗ್ರ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಕಳುಹಿಸಿಕೊಡಲು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಸೂಚಿಸಲಾಗಿದೆ ಎಂದು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಕಪಿಲ್ ಮೋಹನ್ ತಿಳಿಸಿದರು.
ವಿಮಾನ ನಿಲ್ದಾಣ ಅಭಿವೃದ್ಧಿಗೆ ಸಾಥ್ ನೀಡುವಂತಿದೆ. ಕೈಗಾರಿಕೋದ್ಯಮ, ಪ್ರವಾಸೋದ್ಯಮ ಅಷ್ಟೇ ಅಲ್ಲ, ಜನರ ಏಳ್ಗೆಗೆ ಪೂರಕವಾಗುವ ಪ್ರತಿ ಹಂತದ ವ್ಯವಸ್ಥೆಯೂ ಸುಧಾರಿಸುವಂತಿದೆ ಎಂದರು. ಜಿಎಂಆರ್ ಸಂಸ್ಥೆಯ ಒಪ್ಪಿಗೆ ಇಲ್ಲದೆ ಬೀದರ್ ನಾಗರಿಕ ವಿಮಾನಯಾನ ಅಸಾಧ್ಯದ ಮಾತಾಗಿತ್ತಾದರೆ ಗುರುವಾರ ಇಲ್ಲಿ ನಡೆದ ಒಪ್ಪಂದ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕುವ ಸಂದರ್ಭ ಅತ್ಯಂತ ಮಹತ್ವದ್ದಾಗಿತ್ತು. ಅಲ್ಲದೆ ಭಾರತೀಯ ವಾಯು ಸೇನೆಯ ಸಹಕಾರದಿಂದಾಗಿ ಇಲ್ಲಿ ನಾಗರಿಕ ವಿಮಾನಯಾನ ಹಾರಾಟ ಸಾಧ್ಯವಾಯಿತು ಎಂದರು.
ಬೀದರ್ ವಿಮಾನ ನಿಲ್ದಾಣದಿಂದ ಒಂದು ನಯಾಪೈಸೆ ಜಿಎಂಆರ್‌ಗೆ ಲಾಭವಿಲ್ಲ. ಆದರೆ ನಷ್ಟವಂತೂ ಇದೆ. ಹಿಂದಿನ 6 ತಿಂಗಳಿಂದ ಸತತವಾಗಿ ಭಾರತ ಸರ್ಕಾರ, ಜಿಎಂಆರ್ ಮತ್ತಿತರೊಂದಿಗೆ ರಾಜ್ಯ ಸರ್ಕಾರ ಸಂಪರ್ಕದಲ್ಲಿದ್ದದ್ದು ಇದು ಆದಷ್ಟು ಬೇಗ ನಾಗರಿಕ ವಿಮಾನಯಾನ ಆರಂಭ ಸಾಧ್ಯವಾಯಿತು. ಇನ್ನು ಲೋಕೋಪಯೋಗಿ ಇಲಾಖೆಯಿಂದ ನಡೆದಿರುವ ಕಾಮಗಾರಿ ವೇಗದಿಂದ ನಡೆದಿದೆ ಎಂದು ತಿಳಿಸಿದ್ದಾರೆ.