ಉತ್ತರಕನ್ನಡ: ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ, ಓರ್ವನ ಬಂಧನ

By Girish Goudar  |  First Published Sep 23, 2023, 2:00 AM IST

ಶಿವಾಜಿ ಮೂರ್ತಿಗೆ ಸ್ವಲ್ಪ ಪ್ರಮಾಣದ ಹಾನಿಯಾಗಿದೆ. ಮೂರ್ತಿಗೆ ಹಾನಿಗೊಳಿಸಿದ ವಿಚಾರ ತಿಳಿದ ಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷರ ವಿಶ್ವನಾಥ್ ಜಾಧವ್ ಹಾಗೂ ಇತರ   ಪದಾಧಿಕಾರಿಗಳು ಮತ್ತು ಸದಸ್ಯರು ಸೇರಿ ಪ್ಯಾರಸಿಂಗ್ ರಜಪೂತ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
 


ಉತ್ತರಕನ್ನಡ(ಸೆ.23):  ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಗರದ ಸೋಮಾನಿ ವೃತ್ತದ ಹತ್ತಿರದಲ್ಲಿರುವ ಛತ್ರಪತಿ ಶಿವಾಜಿ ಮೂರ್ತಿಯ ಕಾಲಿಗೆ ಹಾನಿಗೊಳಿಸಿದ ಘಟನೆ ನಡೆದಿದೆ.

ಛತ್ರಪತಿ ಶಿವಾಜಿ ಮೂರ್ತಿ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀ ಗಣೇಶ ಮೂರ್ತಿಗೆ ಪೂಜೆ ನಡೆಯುತ್ತಿದ್ದ ಸಂದರ್ಭದಲ್ಲಿ ಸ್ಥಳೀಯ ಟೌನ್‌ಶಿಪ್ ನಿವಾಸಿ ಪ್ಯಾರಸಿಂಗ್ ರಜಪೂತ್ ಎಂಬಾತ ಕುಡಿದ ಮತ್ತಿನಲ್ಲಿ ಛತ್ರಪತಿ ಶಿವಾಜಿ ಮೂರ್ತಿಯಿರುವಲ್ಲಿಗೆ ಹೋಗಿ, ಮೂರ್ತಿಯ ಕಾಲಿಗೆ ತೊಡಿಸಲಾಗಿರುವ ಬಂಗಾರದ ಬಣ್ಣದ ಪಾದರಕ್ಷೆಯನ್ನು ಕೀಳಲು ಪ್ರಯತ್ನಿಸಿದ್ದಾನೆ. ಕೈಯಲ್ಲಿ ಕೀಳಲು ಆಗದೇ ಇದ್ದಾಗ, ಅಲ್ಲೇ ಇದ್ದಂತಹ ಕಬ್ಬಿಣದ ರಾಡ್ ನಲ್ಲಿ ಹೊಡೆದು ಪಾದರಕ್ಷೆಯನ್ನು ಕೀಳಲು ಪ್ರಯತ್ನಿಸಿದ್ದಾನೆ. 

Tap to resize

Latest Videos

undefined

ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಬಿಟ್ಟು ರಾಜ್ಯದ ಜನತೆಯ ನೆರವಿಗೆ ಧಾವಿಸಬೇಕು: ದೇಶಪಾಂಡೆ

ಈ ಸಂದರ್ಭದಲ್ಲಿ ಶಿವಾಜಿ ಮೂರ್ತಿಗೆ ಸ್ವಲ್ಪ ಪ್ರಮಾಣದ ಹಾನಿಯಾಗಿದೆ. ಮೂರ್ತಿಗೆ ಹಾನಿಗೊಳಿಸಿದ ವಿಚಾರ ತಿಳಿದ ಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷರ ವಿಶ್ವನಾಥ್ ಜಾಧವ್ ಹಾಗೂ ಇತರ   ಪದಾಧಿಕಾರಿಗಳು ಮತ್ತು ಸದಸ್ಯರು ಸೇರಿ ಪ್ಯಾರಸಿಂಗ್ ರಜಪೂತ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆ ನಡೆದ ತಕ್ಷಣ ಛತ್ರಪತಿ ಶಿವಾಜಿ ಮೂರ್ತಿ ಹತ್ತಿರ ಜನರು ಕೂಡಾ ಜಮಾಯಿಸಿದ್ದರು. ಕುಡಿದ ಮತ್ತಿನಲ್ಲಿ ಆರೋಪಿಯಿಂದ ಕೃತ್ಯ ನಡೆದಿದ್ದು, ಶಿವಾಜಿ ಮೂರ್ತಿಯ ಕಾಲಿನಲ್ಲಿದ್ದ ಬಂಗಾರದ ಬಣ್ಣದ ಪಾದರಕ್ಷೆಯನ್ನು ಬಂಗಾರದ್ದೇ ಎಂದೆನಿಸಿಕೊಂಡು ಪಾದರಕ್ಷೆಯನ್ನು ಕೀಳಲು ಪ್ರಯತ್ನ ಪಟ್ಟಿರಬಹುದೆಂದು ಅಂದಾಜಿಸಲಾಗಿದೆ.

click me!