ತುಳುನಾಡಿನ ಹಾಸ್ಯ ಕಲಾವಿದ ಅರವಿಂದ ಬೋಳಾರ್ ಅವರು ಹೋಗುತ್ತಿದ್ದ ಬೈಕ್ ಮಂಗಳೂರು ನಗರದಲ್ಲಿ ಸ್ಕಿಡ್ ಆಗಿ ಬಿದ್ದಿದ್ದಾರೆ. ಆದರೆ, ಅವರು ಇಲ್ಲಿ ಬಕ್ ಸ್ಕಿಡ್ ಆಗಿ ಬೀಳದಿದ್ದರೆ ಜೀವಕ್ಕೇ ಅಪಾಯ ಉಂಟಾಗುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ಮಂಗಳೂರು (ಜ.30): ತುಳುನಾಡಿನ ಹಾಸ್ಯ ಕಲಾವಿದ ಅರವಿಂದ ಬೋಳಾರ್ ಅವರು ಹೋಗುತ್ತಿದ್ದ ಬೈಕ್ ಮಂಗಳೂರು ನಗರದಲ್ಲಿ ಸ್ಕಿಡ್ ಆಗಿ ಬಿದ್ದಿದ್ದಾರೆ. ಆದರೆ, ಅವರು ಇಲ್ಲಿ ಬಕ್ ಸ್ಕಿಡ್ ಆಗಿ ಬೀಳದಿದ್ದರೆ ಜೀವಕ್ಕೇ ಅಪಾಯ ಉಂಟಾಗುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ಮಂಗಳೂರು ನಗರದ ಪಂಪ್‌ವೆಲ್ ಬಳಿ ಇಂದು ಹಾಸ್ಯ ನಟ ಅರವಿಂದ ಬೋಳಾರ್ (Aravind Bolar) ಅವರು ಅಪಘಾತಕ್ಕೆ ಉಂಟಾಗಿ ಬಿದ್ದು ಗಾಯಗೊಂಡಿದ್ದಾರೆ. ಆದರೆ, ಅವರ ಎದುರುಗಡೆಯಿಂದ ಅತೀ ವೇಗವಾಗಿ ಚಲಿಸಿಕೊಂಡು ಬರುತ್ತಿದ್ದ ಮತ್ತೊಂದು ವಾಹನಕ್ಕೆ ತಾವು ಹೋಗಿ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಉದ್ದೇಶದಿಂದ ಬೈಕ್ ಅನ್ನು ಸಡನ್ ಆಗಿ ಬ್ರೇಕ್ ಹಾಕಿದ್ದಾರೆ. ಈ ವೇಳೆ ಬೈಕ್ ಸ್ಕಿಡ್ ಆಗಿ ಬಿದ್ದಿದೆ. ಒಂದು ವೇಳೆ ಅರವಿಂದ್ ಬೋಳಾರ್ ತಾನು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದ ಬ್ರೇಕ್ ಹಾಕದಿದ್ದರೆ ವೇಗವಾಗಿ ಬರುತ್ತಿದ್ದ ವಾಹನ ತನ್ನ ಮೇಲೆಯೇ ಹರಿದು ಪ್ರಾಣಕ್ಕೆ ಸಮಸ್ಯೆ ಆಗುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
Mangaluru: ಅಪಘಾತಕ್ಕೆ ಓರ್ವ ಬಲಿ: ಟೋಲ್ ಅಂಬ್ಯುಲೆನ್ಸ್, ಪೊಲೀಸರ ವಿಳಂಬಕ್ಕೆ ಸಾರ್ವಜನಿಕರ ಆಕ್ರೋಶ!
ಕೈ-ಕಾಲಿಗೆ ಸಣ್ಣಪುಟ್ಟ ಗಾಯ: ಹಾಸ್ಯನಟನ ಬೈಕ್ ಸ್ಕಿಡಾಗಿ ಬಿದ್ದ ಪರಿಣಾಮ ಅರವಿಂದ ಬೋಳಾರ್‌ಗೆ ಗಾಯವಾಗಿದೆ. ಅವರ ಕೈ- ಕಾಲುಗಳಿಗೆ ಸಣ್ಣಪುಟ್ಟ ಗಾಯವಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಅರವಿಂದ್ ಬೋಳಾರ್‌ರ ಕಾಲಿನ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ನಟನ ಸಂಬಂಧಿಕರು ತಿಳಿಸಿದ್ದಾರೆ.
ಶಿವಮೊಗ್ಗದ ಕುಂಸಿ ಬಳಿ ಅಪಘಾತ: ಶಿವಮೊಗ್ಗ (ಜ.30): ಶಿವಮೊಗ್ಗ ತಾಲೂಕಿನ ಕುಂಸಿ ಬಳಿ ಖಾಸಗಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿಯಾಗಿದ್ದು, ಅಪಘಾತದಿಂದ ಬೈಕ್‌ನಲ್ಲಿ ಹೋಗುತ್ತಿದ್ದ ಇಬ್ಬರು ಯುವಕರಿಗೆ ಗಂಭೀರ ಗಾಯಗಳಾಗಿವೆ. ಶಿವಮೊಗ್ಗದ ಗುರುಪುರ ಮೂಲದ ಬೈಕ್ ಸವಾರರಾದ ರಂಜಿತ್ ಮತ್ತು ಅನಿಲ್ ಎಂಬ ಯುವಕರಿಗೆ ಗಂಭೀರ ಗಾಯವಾಗಿದೆ. ಇನ್ನು ಶಿವಮೊಗ್ಗ ತಾಲೂಕಿನ ಕುಂಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.