Bengaluru: ಕಬ್ಬನ್ ಪಾರ್ಕ್‌ನಲ್ಲಿ‌ ಕೂರುವ ಪ್ರೇಮಿಗಳಿಗೆ ಶಾಕ್: ಇನ್ಮುಂದೆ ಲವರ್ಸ್‌ಗಳಿಗೆ ನೋ ಎಂಟ್ರಿ!

Published : Apr 09, 2023, 09:40 AM IST
Bengaluru: ಕಬ್ಬನ್ ಪಾರ್ಕ್‌ನಲ್ಲಿ‌ ಕೂರುವ ಪ್ರೇಮಿಗಳಿಗೆ ಶಾಕ್: ಇನ್ಮುಂದೆ ಲವರ್ಸ್‌ಗಳಿಗೆ ನೋ ಎಂಟ್ರಿ!

ಸಾರಾಂಶ

ಸಿಲಿಕಾನ್ ಸಿಟಿಯ ವಾಯು ವಿಹಾರಿಗಳ ಪಾಲಿನ ಸ್ವರ್ಗ ಕಬ್ಬನ್ ಪಾರ್ಕ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಅಸಭ್ಯ ವರ್ತನೆ ನಡೆಯುತ್ತಿದೆ ಎನ್ನುವ ಆರೋಪ ಹೆಚ್ಚಾಗಿದ್ದು,ಇದನ್ನು ತಪ್ಪಿಸಲು ತೋಟಗಾರಿಕಾ ಇಲಾಖೆ ಮಹತ್ತರ ಹೆಜ್ಜೆ ಇಟ್ಟಿದೆ.

ಬೆಂಗಳೂರು (ಏ.09): ಸಿಲಿಕಾನ್ ಸಿಟಿಯ ವಾಯು ವಿಹಾರಿಗಳ ಪಾಲಿನ ಸ್ವರ್ಗ ಕಬ್ಬನ್ ಪಾರ್ಕ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಅಸಭ್ಯ ವರ್ತನೆ ನಡೆಯುತ್ತಿದೆ ಎನ್ನುವ ಆರೋಪ ಹೆಚ್ಚಾಗಿದ್ದು,ಇದನ್ನು ತಪ್ಪಿಸಲು ತೋಟಗಾರಿಕಾ ಇಲಾಖೆ ಮಹತ್ತರ ಹೆಜ್ಜೆ ಇಟ್ಟಿದೆ. ಹೌದು! ಇನ್ಮುಂದೆ ಕಬ್ಬನ್ ಪಾರ್ಕ್‌ನಲ್ಲಿ‌ ಕೂರುವ ಪ್ರೇಮಿಗಳಿಗೆ ಶಾಕ್ ನೀಡಿದ್ದು, ಮನಸ್ಸಿಗೆ ಬಂದಂತೆ ವರ್ತಿಸುವಂತಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ. 

ಪ್ರೇಮಿಗಳ ವಿಹಾರ ತಾಣವಾಗಿದ್ದ ಕಬ್ಬನ್ ಪಾರ್ಕ್‌ಗೆ ಇನ್ಮುಂದೆ ಪ್ರೇಮಿಗಳಿಗೆ ನೋ ಎಂಟ್ರಿ ನೀಡಲಾಗಿದ್ದು, ಇಷ್ಟು ದಿನ ಮರದ ಬುಡದಲ್ಲಿ, ಮರದ ಮೇಲೆ ಸರಸ ಸಲ್ಲಾಪ ನಡೆಸುತ್ತಿದ್ದ ಪ್ರೇಮಿಗಳಿಗೆ ಶಾಕ್ಅನ್ನು ತೋಟಗಾರಿಕಾ ಇಲಾಖೆ ಕೊಟ್ಟಿದೆ.  ಸದ್ಯ ಕಬ್ಬನ್ ಪಾರ್ಕ್‌ನಲ್ಲಿ ಅಸಭ್ಯವಾಗಿ ವರ್ತಿಸುವ ಜೋಡಿಗಳ ಮೇಲೆ ಕಣ್ಣಿಟ್ಟಿರುವ ಆಡಳಿತ ಮಂಡಳಿ, ಅಸಭ್ಯವಾಗಿ ವರ್ತಿಸದಂತೆ ಮೈಕ್‌ನಲ್ಲಿ ಅನೌನ್ಸ್ ಮಾಡಲಿದೆ. ಜೊತೆಗೆ ಪಾರ್ಕ್‌ನಲ್ಲಿ ಪ್ರೇಮಿಗಳು ಕುಳಿತರೂ ದೂರ ದೂರ ಕುಳಿತು ಮಾತನಾಡಬೇಕು. 

ಪಾಕಿಸ್ತಾನದ ಮಕ್ಕಳಿಗೆ ಭಾರತ ಪೌರತ್ವ ಸದ್ಯಕ್ಕಿಲ್ಲ: ಹೈಕೋರ್ಟ್‌

ಇನ್ನು ಪ್ರೇಮಿಗಳು ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಅಂತ ಕಬ್ಬನ್ ಪಾರ್ಕ್‌ಗೆ ಬರುವ ಕುಟುಂಬದವರಿಂದ ದೂರು ಬಂದಿದ್ದು, ಈ ಬೆನ್ನಲ್ಲೇ ಪಾರ್ಕ್‌ನಲ್ಲಿ ಪ್ರೇಮಿಗಳ ಸರಸ ಸಲ್ಲಾಪಕ್ಕೆ ಬ್ರೇಕ್ ಹಾಕಲಾಗಿದೆ. ಪ್ರತಿ ದಿನ ಮೈಕ್‌ನಲ್ಲಿ ಸೆಕ್ಯುರಿಟಿ ಮಂಜುನಾಥ್ ಅನೌನ್ಸ್ ಮಾಡುತ್ತಿದ್ದು, ಅನಂತರವೂ ಯಾರಾದ್ರೂ ಅಸಭ್ಯವಾಗಿ ವರ್ತಿಸಲು ಮುಂದಾದ್ರೆ ಅಂತವರನ್ನ ಕಬ್ಬನ್ ಪಾರ್ಕ್‌ನಿಂದ ಸೆಕ್ಯುರಿಟಿಗಳು ಹೊರಗಡೆ ಕಳಿಸುತ್ತಿದ್ದಾರೆ

ಕಬ್ಬನ್‌ಪಾರ್ಕ್‌ನಲ್ಲಿ ಆಹಾರ ತಿನ್ನೋ ಹಾಗಿಲ್ಲ: ಕಬ್ಬನ್‌ಪಾರ್ಕ್‌ನಲ್ಲಿ ಶ್ವಾನ, ಇಲಿ, ಹೆಗ್ಗಣಗಳ ಕಾಟ ನಿಯಂತ್ರಣಕ್ಕೆ ಮುಂದಾಗಿರುವ ತೋಟಗಾರಿಕೆ ಇಲಾಖೆ ಉದ್ಯಾನದಲ್ಲಿ ಸಾರ್ವಜನಿಕರು, ಪ್ರವಾಸಿಗರ ಆಹಾರ ಸೇವನೆಗೆ ನಿಷೇಧ ಹೇರಿರುವ ಕುರಿತು ಫಲಕಗಳನ್ನು ಪ್ರವೇಶ ದ್ವಾರಗಳಲ್ಲಿ ತೂಗು ಹಾಕಿದೆ. ಕಬ್ಬನ್‌ಪಾರ್ಕ್‌ನಲ್ಲಿ ಆಹಾರ ಸೇವನೆ ನಿಷೇಧಿಸಿ ಐದಾರು ವರ್ಷಗಳು ಕಳೆದಿವೆ. ಆರಂಭದಲ್ಲಿ ಈ ನಿಯಮವನ್ನು ಕಟ್ಟುನಿಟ್ಟಿನಿಂದ ಪಾಲನೆ ಮಾಡಲಾಗಿತ್ತು. ಆದರೆ ಕ್ರಮೇಣ ಮತ್ತೆ ಯಥಾಸ್ಥಿತಿಯಂತೆ ಉದ್ಯಾನದ ಸುತ್ತಮುತ್ತಲ ಕಚೇರಿಗಳ ನೌಕರ, ಸಿಬ್ಬಂದಿಗಳು, ಸಾರ್ವಜನಿಕರು ಉದ್ಯಾನದಲ್ಲೇ ಊಟ, ತಿಂಡಿ ಮಾಡುವುದನ್ನು ಮುಂದುವರೆಸಿದ್ದರು. 

ಬಿಬಿಎಂಪಿಗೆ ಹಲವು ಹಳ್ಳಿ ಸೇರಿಸಿದ್ದಕ್ಕೆ ಈಗ ಡಾಂಬರೀಕರಣ: ಎಚ್‌.ಡಿ.ಕುಮಾರಸ್ವಾಮಿ

ಊಟ, ತಿಂಡಿ ತಿಂದು ಅಳಿದು ಉಳಿದಿದ್ದನ್ನು ಉದ್ಯಾನದಲ್ಲಿ ಚೆಲ್ಲುತ್ತಿದ್ದರಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿತ್ತು. ಜೊತೆಗೆ ಇಲಿ, ಹೆಗ್ಗಣಗಳ ಕಾಟವೂ ಜಾಸ್ತಿಯಾಗಿದೆ. ಊಟ, ತಿಂಡಿ ತಂದು ತಿಂದ ನಂತರ ಪ್ಲಾಸ್ಟಿಕ್‌ ಕವರ್‌ಗಳು, ಪೇಪರ್‌ಗಳು, ಮೂಳೆಗಳನ್ನು ಹುಲ್ಲು ಹಾಸಿನ ಮೇಲೆಯೇ ಎಸೆದು ಹೋಗುತ್ತಿದ್ದರು. ಇದರಿಂದ ಪರಿಸರಕ್ಕೂ ಧಕ್ಕೆಯಾಗುತ್ತಿತ್ತು. ಹುಲ್ಲು ಹಾಸಿನ ಮೇಲೆ ಚೆಲ್ಲುವ ತ್ಯಾಜ್ಯವನ್ನು ಸ್ವಚ್ಛಗೊಳಿಸುವವರು ಯಾರು? ಇತರರಿಗೂ ಕೂಡ ಇಂತಹ ಸ್ಥಳಗಳಲ್ಲಿ ಕುಳಿತುಕೊಳ್ಳಲು ಹೇಸಿಗೆ ಪಡುವಂತ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಹಾಗೆಯೇ ಶ್ವಾನಗಳ ಹಾವಳಿಯಿಂದ ಮಕ್ಕಳು, ಮಹಿಳೆಯರು ಓಡಾಡುವುದಕ್ಕೂ ಭಯಪಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಹಾಗಾಗಿ ಹುಲ್ಲು ಹಾಸಿನ ಮೇಲೆ ಆಹಾರ ಸೇವನೆಯನ್ನು 2015ರಲ್ಲೇ ನಿಷೇಧಿಸಲಾಗಿತ್ತು ಎಂದು ತೋಟಗಾರಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ