ಕೊರೋನಾ ಭೀತಿ: ‘ಅಭಿ ಬಸ್‌'ನಿಂದ ಗ್ರಾಹಕರಿಗೆ ಫ್ರೀ ಮಾಸ್ಕ್‌ ವಿತರಣೆ!

By Kannadaprabha News  |  First Published Mar 10, 2020, 8:23 AM IST

ಮುಂಗಡ ಟಿಕೆಟ್‌ ಬುಕ್ಕಿಂಗ್‌ ಮಾಡುವವರಿಗೆ ಮಾಸ್ಕ್‌ ವಿತರಣೆ| 'ಅಭಿ ಬಸ್‌’ ನಿಂದ ಕೊರೊನಾ ವೈರಸ್‌ ಬಗ್ಗೆ ಜಾಗೃತಿ|


ಬೆಂಗಳೂರು(ಮಾ.10): ಬಸ್‌ ಹಾಗೂ ಹೊಟೇಲ್‌ಗಳಲ್ಲಿ ಮುಂಗಡ ಬುಕ್ಕಿಂಗ್‌ ಮಾಡುವ ದೇಶದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ‘ಅಭಿ ಬಸ್‌’ ಮೂಲಕ ಟಿಕೆಟ್‌ ಬುಕ್ಕಿಂಗ್‌ ಮಾಡುವವರಿಗೆ ಕೊರೊನಾ ವೈರಸ್‌ ಕುರಿತಂತೆ ಜಾಗೃತಿ ಮೂಡಿಸುವುದರೊಂದಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಯಾಣಿಕರಿಗೆ ಮಾಸ್ಕ್‌ ವಿತರಿಸಲಿದೆ. 

ಬಸ್‌ಗಳಲ್ಲಿ ಸ್ಯಾನಿಟೆಜರ್‌ ನೀಡುವ ಜೊತೆಗೆ ಸ್ವಚ್ಛತೆ ಕಾಪಾಡಿಕೊಳ್ಳುವ ಹಾಗೂ ಸೋಂಕು ಹರಡದಂತೆ ಹೇಗೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ಬಸ್‌ಗಳಲ್ಲಿ ಭಿತ್ತಿಪತ್ರ ಅಂಟಿಸಲಾಗಿದೆ. 

Tap to resize

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಬಸ್‌ ನಿರ್ವಾಹಕರಿಗೆ ಜಾಗೃತಿ ಮೂಡಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
 

click me!