ಗರ್ಲ್ಸ್ ಕಾಲೇಜ್ ಓಪನ್ ಮಾಡಪ್ಪ ದೇವ್ರೇ..!

Suvarna News   | Asianet News
Published : Jun 24, 2020, 06:47 PM IST
ಗರ್ಲ್ಸ್ ಕಾಲೇಜ್ ಓಪನ್ ಮಾಡಪ್ಪ ದೇವ್ರೇ..!

ಸಾರಾಂಶ

ಕಾಲೇಜ್ ಪ್ರೇಮಿಗಳ ಪಾಲಿಗೆ ಲಾಕ್‌ಡೌನ್ ಮಹಾಶಿಕ್ಷೆಯನ್ನುವಂತೆ ಬಾಸವಾಗುತ್ತಿದೆ. ಕಾಲೇಜ್‌ಗಳು ಕೂಡಾ ಬಂದ್ ಆಗಿದ್ದು, ದೇವ್ರೇ ಆದಷ್ಟು ಬೇಗ ಹುಡುಗಿಯರ ಕಾಲೇಜ್ ಓಪನ್ ಮಾಡ್ಸಪ್ಪ ಅಂತ ಪ್ರಾರ್ಥನೆ ಮಾಡುತ್ತಿದ್ದಾರೆ. ಅಂತಹದ್ದೇ ಒಂದು ವಿಡಿಯೋವೀಗ ವೈರಲ್ ಆಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ದಾವಣಗೆರೆ(ಜೂ.24): 'ದೇವ್ರೇ ಬಾರನ್ನೂ ಓಪನ್ ಮಾಡ್ದೆ.. ಬ್ಯೂಟಿ ಪಾರ್ಲರ್‌ನೂ ಓಪನ್ ಮಾಡ್ದೆ... ಗರ್ಲ್ಸ್ ಕಾಲೇಜೊಂದನ್ನು ಓಪನ್ ಮಾಡಪ್ಪ...! ನಮ್ ಹುಡುಗೀಗೆ ನೋಡಿ ಬಹಳ ದಿನವಾಯ್ತು..!' ಅಂತ ಇಲ್ಲಿನ ಪ್ರತಿಷ್ಟಿತ ಕಾಲೇಜಿನ ಮುಖ್ಯ ಗೇಟ್‌ ಬಳಿ ನೆಲ ಮುಟ್ಟಿ ನಮಸ್ಕಾರ ಮಾಡುತ್ತಾ ಕಾಲೇಜನ್ನೇ ದಿಟ್ಟಿಸಿ ನೋಡುತ್ತಾ ನಿಲ್ಲುವ 18 ಸೆಕೆಂಡ್‌ನ ವಿಡಿಯೋವೊಂದು ದಾವಣಗೆರೆ ಟ್ರೋಲ್ಸ್ ಹೆಸರಿನಲ್ಲಿ ಈಗ ಸಾಕಷ್ಟು ವೈರಲ್ ಆಗಿದೆ,

"

ಇಲ್ಲಿನ ಅಕ್ಕಮಹದೇವಿ ರಸ್ತೆಯ ಎವಿಕೆ ಕಾಲೇಜು ಮುಂಬಾಗದ ರಸ್ತೆಯಿಂದ ಕಾಲೇಜಿನತ್ತ ಮೊಣಕಾಲುವರೆಗಿನ ಚಡ್ಡಿ ಧರಿಸಿದ ಯುವಕನೊಬ್ಬ ಗಾಂಭೀರ್ಯದಿಂದ ಹೆಜ್ಜೆಹಾಕುತ್ತಾ ಬಂದು, ಕಾಲೇಜಿನ ಗೇಟ್ ಬಳಿ ಬಗ್ಗಿ ನೆಲಕ್ಕೆ ನಮಸ್ಕರಿಸುತ್ತಾ ನಿಲ್ಲುತ್ತಾನೆ. ಕಾಲೇಜಿನತ್ತ ಮುಖಮಾಡಿ ಹೇಳುವ ದೃಶ್ಯ, ಅದಕ್ಕೆ ಫ್ರೆಂಡ್ಸ್ ಚಿತ್ರದ 'ತಿರುಪತಿ, ತಿರುಮಲ ವೆಂಕಟೇಶ... ಸ್ವಲ್ಪ ಕಿವಿಗೊಟ್ಟು ಕೇಳು ಒಂದು ನಿಮಿಷ' ಎಂಬ ಹಾಡನ್ನು ಹಿನ್ನೆಲೆಯಾಗಿ ಬಳಸಿಕೊಳ್ಳಲಾಗಿದೆ.

ಕೇವಲ ಹಾಸ್ಯದ ಉದ್ದೇಶದಿಂದ ಮಾಡಿರುವ ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈಗ ತಾನೆ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದಿದ್ದು, ಮೌಲ್ಯಮಾಪನ ಬಾಕಿ ಇದೆ. ಡಿಗ್ರಿ ಕಾಲೇಜ್ ಓಪನ್ ಆಗಲು ಕೆಲವು ದಿನಗಳಂತೂ ಹುಡುಗ-ಹುಡುಗಿಯರು ಕಾಯಲೇಬೇಕು. ಕಾಲೇಜಿಗೆ ಬಂದ ಮೇಲೆ ಸಾಮಾಜಿಕ ಅಂತರವನ್ನು ದೇವರೇ ಕಾಪಾಡಬೇಕು. 
 

PREV
click me!

Recommended Stories

ಕರಾವಳಿಗೆ ಕೇಂದ್ರದ ಬಲ, ಹಂಗಾರಕಟ್ಟೆ ಸೇರಿ ಕರಾವಳಿಯ ಹಲವು ಬಂದರುಗಳ ಅಭಿವೃದ್ಧಿಗೆ ನೂರಾರು ಕೋಟಿ ಮಂಜೂರು
ಶಾಕಿಂಗ್: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಧಗಧಗನೆ ಹೊತ್ತಿ ಉರಿದ 40 ಎಕರೆ ಕಬ್ಬಿನ ಗದ್ದೆ!