ಉಡುಪಿ (ನ.26) : ನಗರದ ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ತೆರಳುವ ಅಗಲ ಕಿರಿದಾದ ಜಾಜ್‌ರ್ ಫರ್ನಾಂಡಿಸ್ ರಸ್ತೆಯ ಅವ್ಯವಸ್ಥೆ, ಹೊಂಡಗುಂಡಿಗಳಿಂದ ಜನ - ವಾಹನ ಸಂಚಾರಕ್ಕೆ ಆಗುತ್ತಿರುವ ತೊಂದರೆಗಳ ಬಗ್ಗೆ ಉಡುಪಿ ಜಿಲ್ಲಾ ನಾಗರಿಕ ವೇದಿಕೆ ಶುಕ್ರವಾರ ವಿಶಿಷ್ಟರೀತಿಯಲ್ಲಿ ಪ್ರತಿಭಟನೆ ನಡೆಸಿತು.
ಈ ರಸ್ತೆಯಲ್ಲಿ ಹಠಾತ್ತನೇ ಆಂಬುಲೆನ್ಸೊಂದು ಸೈರನ್ ಹಾಕುತ್ತಾ ಧಾವಿಸಿ ಬಂತು, ಅದರಲ್ಲಿ ತುಂಬು ಗರ್ಭಿಣಿಯೊಬ್ಬರಿದ್ದರು, ಸೇತುವೆ ಬಳಿ ಆಂಬುಲೆ®್ಸ… ಹೊಂಡಗುಂಡಿಗಳಲ್ಲಿ ಎದ್ದುಬಿದ್ದು ಸಾಗುವಾಗ ಒಳಗಿಂದ ಮಗು ಕೂಗುವ ಶಬ್ಧ ಕೇಳಿತು, ನೋಡಿದರೆ ಮಹಿಳೆ 5 ಮಕ್ಕಳಿಗೆ ಆಂಬುಲೆ®್ಸ…ನಲ್ಲಿಯೇ ಜನ್ಮ ನೀಡಿದ್ದರು. ಅಷ್ಟರಲ್ಲಿ ಈ ರಸ್ತೆಯಲ್ಲಿ ಅಪಘಾತ ನಡೆದು ವ್ಯಕ್ತಿಯೊಬ್ಬರು ರಸ್ತೆ ಮಧ್ಯೆ ಬಿದ್ದು ಜೋರಾಗಿ ಅಳತೊಡಗಿದರು...
undefined
ಈ ರೀತಿ ನಾಗರಿಕ ವೇದಿಕೆಯ ನಿತ್ಯಾನಂದ ಒಳಕಾಡು ಅವರು ರಸ್ತೆಯ ಅವ್ಯವಸ್ಥೆ, ಅದರಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಅಣಕು ಪ್ರದರ್ಶನ ನಡೆಸಿ ಜಿಲ್ಲಾಡಳಿತದ ಗಮನ ಸೆಳೆಯುವ ಪ್ರಯತ್ನ ನಡೆಸಿದರು. ಅವರಿಗೆ ಇಂದ್ರಾಳಿ ರೈಲು ನಿಲ್ದಾಣದ ಆಟೋ ಚಾಲಕರು ಬೆಂಬಲ ನೀಡಿದರು. ರಾಜು ಮತ್ತು ಹರೀಶ್ ಅಣಕು ಪ್ರದರ್ಶನದಲ್ಲಿ ನಟಿಸಿದರು.
ಅರೆ, ಇದ್ಹೇಗ್ ಸಾಧ್ಯ ! ಯುವತಿ ಜನ್ಮ ನೀಡಿದ ಅವಳಿ ಮಕ್ಕಳ ತಂದೆ ಒಬ್ಬರೇ ಅಲ್ಲ..!