ಹೊಸಪೇಟೆ: ಎತ್ತರದ ಧ್ವಜಸ್ತಂಭದಲ್ಲಿ ಹರಿದ ರಾಷ್ಟ್ರಧ್ವಜ ಹಾರಾಟ!

By Kannadaprabha News  |  First Published Mar 4, 2023, 9:41 AM IST

ನೂತನ ವಿಜಯನಗರ ಜಿಲ್ಲಾಡಳಿತವು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವುದು ಬೆಳಕಿಗೆ ಬಂದಿದೆ. ದೇಶದಲ್ಲೇ ಅತಿ ಎತ್ತರದ (405 ಅಡಿ) ಧ್ವಜಸ್ತಂಭದಲ್ಲಿ ಹರಿದ ಧ್ವಜ ಹಾರಾಟ ನಡೆದರೂ ಜಿಲ್ಲಾಡಳಿತ ಮೌನಕ್ಕೆ ಶರಣಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದ ಧ್ವಜ ಫೋಟೋಗಳು ವೈರಲ್‌ ಆದ ಬಳಿಕ ಎಚ್ಚೆತ್ತು ಧ್ವಜ ಇಳಿಸಲಾಗಿದೆ.


ಹೊಸಪೇಟೆ (ಮಾ.4) : ನೂತನ ವಿಜಯನಗರ ಜಿಲ್ಲಾಡಳಿತವು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವುದು ಬೆಳಕಿಗೆ ಬಂದಿದೆ. ದೇಶದಲ್ಲೇ ಅತಿ ಎತ್ತರದ (405 ಅಡಿ) ಧ್ವಜಸ್ತಂಭದಲ್ಲಿ ಹರಿದ ಧ್ವಜ ಹಾರಾಟ ನಡೆದರೂ ಜಿಲ್ಲಾಡಳಿತ ಮೌನಕ್ಕೆ ಶರಣಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದ ಧ್ವಜ ಫೋಟೋಗಳು ವೈರಲ್‌ ಆದ ಬಳಿಕ ಎಚ್ಚೆತ್ತು ಧ್ವಜ ಇಳಿಸಲಾಗಿದೆ.

ಪ್ರವಾಸೋದ್ಯಮ ಇಲಾಖೆ(Karnataka tourism depertment) ವತಿಯಿಂದ .5.18 ಕೋಟಿ ವೆಚ್ಚದಲ್ಲಿ ನಗರದ ಪುನೀತ್‌ ರಾಜಕುಮಾರ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಸ್ತಂಭ ನಿರ್ಮಿಸಲಾಗಿದೆ. ಬೆಳಗಾವಿ ಬಳಿಕ ದೇಶದಲ್ಲೇ ಅತಿ ಎತ್ತರದ ಧ್ವಜಸ್ತಂಭ ಎಂಬ ಹೆಗ್ಗಳಿಕೆಗೆ ಹೊಸಪೇಟೆ ಪಾತ್ರವಾಗಿದೆ. ಕಳೆದ ಜ. 26ರಂದು ಧ್ವಜ ಹಾರಾಟ ನಡೆಸಲಾಗಿದೆ. ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಧ್ವಜಾರೋಹಣ ನೆರವೇರಿಸಿದ್ದರು. ಆ ಬಳಿಕ ಧ್ವಜ ಇಳಿಸಿರಲಿಲ್ಲ. ಭಾರಿ ಗಾಳಿಗೆ ಈ ಧ್ವಜ ಹರಿದರೂ ಅತ್ತ ಕಡೆ ಜಿಲ್ಲಾಡಳಿತ ಚಿತ್ತ ಹರಿಸಿಲ್ಲ.

Tap to resize

Latest Videos

undefined

ಹೊಸಪೇಟೆಯಲ್ಲಿ ದೇಶದ ಅತಿ ಎತ್ತರದ ಧ್ವಜಸ್ತಂಭ ನಿರ್ಮಾಣ

ಧ್ವಜಸ್ತಂಭ ನಿರ್ಮಾಣದ ವೇಳೆಯೇ ಸಮಿತಿ ರಚನೆ ಮಾಡಿ, ನಿರ್ವಹಣೆ ಮಾಡಬೇಕಿತ್ತು. ಈಗ ಹರಿದ ಧ್ವಜ ಹಾರಾಟ ನಡೆಸಿದರೂ ಜಿಲ್ಲಾಡಳಿತಕ್ಕೆ ಪುರುಸೊತ್ತು ಇಲ್ಲದಂತಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ವಿಜಯನಗರ ಜಿಲ್ಲಾ ಬಾಬಾಸಾಹೇಬ್‌ ಡಾ. ಬಿ.ಆರ್‌. ಅಂಬೇಡ್ಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ಬಣ್ಣದಮನೆ ಹರಿದ ಬಾವುಟ ಹಾರಾಟ ನಡೆಸಿರುವುದಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಸಚಿವರು, ಶಾಸಕರು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ಇಲ್ಲವೇ, ಈ ಕೂಡಲೇ ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

click me!