ಉದ್ಯಮಭಾಗದಿಂದ ನೆಹರುನಗರ ಕಡೆಗೆ ಹೊರಟ್ಟಿದ ಕಾರ್ ನಲ್ಲಿ ಏಕಾಏಕಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾದ ದುರ್ಘಟನೆ ಸೋಮವಾರ ಕೊಲ್ಲಾಪುರ ವೃತ್ತದ ಬಳಿ ನಡೆದಿದೆ.
ಬೆಳಗಾವಿ (ಮಾ.7): ಉದ್ಯಮಭಾಗದಿಂದ ನೆಹರುನಗರ ಕಡೆಗೆ ಹೊರಟ್ಟಿದ ಕಾರ್ ನಲ್ಲಿ ಏಕಾಏಕಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾದ ದುರ್ಘಟನೆ ಸೋಮವಾರ ಕೊಲ್ಲಾಪುರ ವೃತ್ತದ ಬಳಿ ನಡೆದಿದೆ.
ಗೋವಾ ಪಾಸಿಂಗ್ ಕಾರು ಜಿಲ್ಲೆಯ ಉದ್ಯಮಭಾಗ(Udyamabhaga)ದಿಂದ ನೆಹರುನಗರ(Neharunagara)ದ ಕಡೆಗೆ ಹೊರಟಿದ್ದ ವೇಳೆ ಕೊಲ್ಲಾಪುರ ವೃತ್ತ(Kolhapur Circle)ದ ಬಳಿ ಬರುತ್ತಿದ್ದಂತೆ ಕಾರಿನೊಳಗೆ ಏಕಾಏಕಿಬೆಂಕಿ(Suddenly fire) ಹೊತ್ತಿಕೊಂಡು ಈ ಘಟನೆ ಸಂಭವಿಸಿದೆ.
undefined
ಕಾರ್ ನಲ್ಲಿ ಚಾಲಕ ಸೇರಿ ಮೂವರು ಪ್ರಯಾಣ ಬೆಳೆಸಿದ್ದರು. ಕೊಲ್ಲಾಪುರ ವೃತ್ತದ ಬಳಿ ಇರುವ ಟ್ರಾಫಿಕ್ ಸಿಗ್ನಲ್ ಬಳಿ ಕಾರ್ ನಿಂತಾಗ ಹೊತ್ತಿಕೊಂಡ ಬೆಂಕಿ. ಕಾರ್ ಗೆ ಬೆಂಕಿ ತಗುಲಿದ್ದನ್ನು ಕಂಡ ಅಕ್ಕಪಕ್ಕದವರು ಚಾಲಕನಿಗೆ ತಿಳಿಸಿದಾಗ ಕಾರ್ ನಲ್ಲಿದ್ದ ಮೂವರು ಹೊರಗಡೆ ಬಂದಿದ್ದಾರೆ. ಬಳಿಕ ಸ್ಥಳದಲ್ಲಿದ್ದ ಸಂಚಾರ ಪೊಲೀಸರು ಅಗ್ನಿ ಶಾಮಕದಳದ ಸಿಬ್ಬಂದಿಗೆ ತಿಳಿಸಿದ್ದಾರೆ. ಆದರೆ ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿ ತಗುಲಿದ ಕಾರ್ ನಂದಿಸಲು ಯಶಸ್ವಿಯಾದರೂ ಸಹ ಕಾರ್ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಈ ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ.
ಆಕಸ್ಮಿಕ ಬೆಂಕಿ ಅವಘಡ: ಪೊಲೀಸರು ಜಪ್ತಿ ಮಾಡಿದ್ದ 58 ಬೈಕ್ ಸುಟ್ಟು ಭಸ್ಮ
ಆಕಸ್ಮಿಕ ಬೆಂಕಿ ತಗುಲಿ ಆಕಳು ಸಾವು
ಹನುಮಸಾಗರ : ಜಾನುವಾರುಗಳನ್ನು ಕಟ್ಟಿಹಾಕಲು ನಿರ್ಮಾಣ ಮಾಡಲಾಗಿದ್ದ ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿ ಎರಡು ಆಕಳು ಸಾವನ್ನಪ್ಪಿದ ಘಟನೆ ಸಮೀಪದ ಹನುಮನಾಳ ಗ್ರಾಮದಲ್ಲಿ ಸೋಮವಾರ ನಡೆದಿದೆ.
ರಾಮಪ್ಪ ಶೇಖಪ್ಪ ಕುರಿ ಜಾನುವಾರು ಕಳೆದುಕೊಂಡ ರೈತ.ತಮ್ಮ ಜಮೀನಿನಲ್ಲಿ ಜಾನುವಾರು ಕಟ್ಟಲು ನಿರ್ಮಿಸಿದ್ದ ಗುಡಿಸಲಿನಲ್ಲಿ ವಿವಿಧ ಕೃಷಿ ಪರಿಕರಗಳನ್ನು ಇಟ್ಟಿದ್ದರು.ಗುಡಿಸಲಿಗೆ ಬೆಂಕಿ ತಗುಲು ಕೃಷಿ ಪರಿಕರಗಳು ಸುಟ್ಟಿದ್ದರಿಂದ ಅಲ್ಲಿಯೇ ಕಟ್ಟಿದ್ದ ಎರಡು ಆಕಳು ಸಜೀವ ದಹನವಾಗಿದ್ದು, ಇನ್ನೂ ನಾಲ್ಕು ಜಾನುವಾರುಗಳು ಗಂಭೀರವಾಗಿ ಗಾಯಗೊಂಡಿವೆ.
ಸಸ್ಯಕಾಶಿ ಕಪ್ಪತ್ತಗುಡ್ಡಕ್ಕೆ ಮತ್ತೆ ಬೆಂಕಿ; 10 ಹೇಕ್ಟರ್ ಪ್ರದೇಶದ ಗಿಡಮೂಲಿಕೆ ಸುಟ್ಟು ಕರಕಲು!