35 ವರ್ಷಗಳ‌ ಬಳಿಕ ಶಾಲೆಗೆ ಬಂದ 3 ಸಾವಿರ ವಿದ್ಯಾರ್ಥಿಗಳು: ಗುರುಗಳನ್ನ ಹೆಗಲ ಮೇಲೆ ಹೊತ್ತು ಮೆರವಣಿಗೆ!

By Govindaraj SFirst Published Feb 5, 2024, 8:35 PM IST
Highlights

ಒಂದು ಶಾಲೆ ಮುಗಿಸಿ ಅಲ್ಲಿಂದ ಮೆಟ್ಟಿಲು ಇಳಿದು ಹೊರಟು ಬಿಟ್ಟರೆ ಮುಗಿದುಹೊಯ್ತು. ವಾಪಸ್ ಕಲಿತ ಶಾಲೆಯ ಕಡೆಗೆ ಹಾಯುವವರು ಕಡಿಮೆ. ಶಾಲೆಯಲ್ಲಿ ಒಟ್ಟಿಗೆ ಕಲಿತ ಗೆಳೆಯರು ಮತ್ತೆ ಭೇಟಿಯಾಗೋದು ಅಪರೂಪ. 

ಮುಸ್ತಾಕ್ ಪೀರಜಾದೆ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಳಗಾವಿ

ಬೆಳಗಾವಿ (ಫೆ.05): ಒಂದು ಶಾಲೆ ಮುಗಿಸಿ ಅಲ್ಲಿಂದ ಮೆಟ್ಟಿಲು ಇಳಿದು ಹೊರಟು ಬಿಟ್ಟರೆ ಮುಗಿದುಹೊಯ್ತು. ವಾಪಸ್ ಕಲಿತ ಶಾಲೆಯ ಕಡೆಗೆ ಹಾಯುವವರು ಕಡಿಮೆ. ಶಾಲೆಯಲ್ಲಿ ಒಟ್ಟಿಗೆ ಕಲಿತ ಗೆಳೆಯರು ಮತ್ತೆ ಭೇಟಿಯಾಗೋದು ಅಪರೂಪ. ಅದ್ರಲ್ಲು ಇಡೀ ಶಾಲೆಯ ಹಳೆ ವಿದ್ಯಾರ್ಥಿಗಳು ಒಂದೆ ಕಡೆಗೆ ಮತ್ತೆ ಸೇರೋದು ಅಂದ್ರೆ ಅದು ಕನಸಿನ ಮಾತು. ಆದ್ರೆ ಆ ಶಾಲೆಯಲ್ಲಿ ಕಲಿತ ಮೂರು ಸಾವಿರಕ್ಕು ಅಧಿಕ ಹಳೆ ವಿದ್ಯಾರ್ಥಿ ಮತ್ತೆ ಒಟ್ಟಿಗೆ ಸೇರಿದ್ದಾರೆ. ಅಷ್ಟೇ ಅಲ್ಲದೆ ತಮಗೆ ವಿದ್ಯೆ ಕೊಟ್ಟ ಗುರುಗಳನ್ನ ಹೊತ್ತು ಊರ ತುಂಬೆಲ್ಲ ಹೂಮಳೆ ಸುರಿಸಿ ಮೆರವಣಿಗೆ ಮಾಡಿದ್ದಾರೆ.. 

ಅಥಣಿ ತಾಲೂಕಿನಲ್ಲಿ ಅಪರೂಪದ ಗುರು ಶಿಷ್ಯರ ಸಮಾಗಮ: ಹೌದು. ಮೂವತ್ತು ವರ್ಗಳ ಹಿಂದೆ ಶಾಲೆ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಹಳೆ ವಿದ್ಯಾರ್ಥಿಗಳೆಲ್ಲ ಒಂದೆಡೆ ಸೇರಿ ಸಂಭ್ರಮಿಸಿದ ಅಪರೂಪದ ಘಟನೆಗೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ವರ್ಧಮಾನ ಶಿಕ್ಷಣ ಸಂಸ್ಥೆಯ ಹೈಸ್ಕೂಲಿನಲ್ಲಿ 1985 ರಿಂದ 2023 ರ ವೆರೆಗೆ ಕಲಿತ ಎಲ್ಲ ವಿದ್ಯಾರ್ಥಿಗಳು ಮತ್ತೆ ಶಾಲೆಯಲ್ಲಿ ಒಟ್ಟಿಗೆ ಸೇರುವ ಮೂಲಕ ದಾಖಲೆ ಮಾಡಿದ್ದಾರೆ. 3 ಸಾವಿರಕ್ಕು ಅಧಿಕ ಹಳೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಒಂದೆಡೆ ಸೇರಿ ತಮಗೆ ವಿದ್ಯೆ ನೀಡಿದ ಗುರುಗಳಿಗೆ ಗುರುವಂದನೆ ಸಲ್ಲಿಸಿದ್ದಾರೆ.. ಇದಕ್ಕೆ ಅವಕಾಶ ಮಾಡಿಕೊಟ್ಟಿದ್ದು ವರ್ಧಮಾನ ಶಿಕ್ಷಣ ಸಂಸ್ಥೆ. ಶಿಕ್ಷಣ ರಜತ ಮಹೋತ್ಸವ ಹಿನ್ನೆಲೆ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಇದೆ ಶಿಕ್ಷಣ ಸಂಸ್ಥೆಯಲ್ಲಿ 1985 ರಿಂದ 2023ರ ವರೆಗೆ ಹೈಸ್ಕೂಲಿನಲ್ಲಿ ಕಲಿತ ವಿದ್ಯಾರ್ಥಿಗಳನ್ನ ಆಹ್ವಾನಿಸಲಾಗಿತ್ತು. ಆಹ್ವಾನಕ್ಕೆ ಒಗೊಟ್ಟು 3 ಸಾವಿರಕ್ಕು ಅಧಿಕ ಹಳೆಯ ವಿದ್ಯಾರ್ಥಿಗಳ ಸೇರಿದ್ರು. 

ಬಿಜೆಪಿಯಿಂದ ಧರ್ಮದ ಹೆಸರಿನಲ್ಲಿ ಜನರ ಮಧ್ಯೆ ವಿಷಬೀಜ ಬಿತ್ತುವ ರಾಜಕಾರಣ: ಸಚಿವ ಮಹದೇವಪ್ಪ

ವಿದ್ಯೆ ಕಲಿಸಿದ ಶಿಕ್ಷಕರನ್ನ ಹೊತ್ತು ಮೆರೆಸಿದ ಶಿಷ್ಯರು: ಇನ್ನೂ ನಂದನವನದಲ್ಲಿ ಗುರುವಂದನಾ ಕಾರ್ಯಕ್ರಮ ಹಿನ್ನೆಲೆ ತಮಗೆ ಶಿಕ್ಷಣ ನೀಡಿ ಬದುಕು ರೂಪಿಸಿದ ಗುರುಗಳನ್ನ ಸಂಕೋನಟ್ಟಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ತುಂಬೆಲ್ಲ ಹಳೆಯ ವಿದ್ಯಾರ್ಥಿಗಳು‌ ಶಿಕ್ಷಕರನ್ನ ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿದ್ದು ವಿಶೇಷವಾಗಿತ್ತು.‌ ದಾರಿಯುದ್ದಕ್ಕು ನಿಂತ 3 ಸಾವಿರ ಹಳೆಯ ವಿದ್ಯಾರ್ಥಿಗಳು ಗುರುಗಳ ಮೇಲೆ ಪುಷ್ಪಗಳ ಮಳೆ ಸುರಿಸಿದರು. ಸ್ವತಃ ಶಾಲೆಯ ವಿದ್ಯಾರ್ಥಿ ವೃಂದವೇ ಜಾಂಜ್ ಪಥಾಕ್ ಬಾರಿಸುತ್ತ ಶಿಕ್ಷಕರ ಮೆರವಣಿಯಲ್ಲ ಮೂಲಕ ಮೆರವಣಿಗೆ ಮಾಡಿದ್ದು ವಿಶೇಷವಾಗಿತ್ತು.

ಹಳೆ ವಿದ್ಯಾರ್ಥಿಗಳಿಂದ ಕಲಿತ ಶಾಲೆಗೆ ನೂರೊಂದು ಕಾಣಿಕೆ: ಇನ್ನೂ ಕಲಿತ ಶಾಲೆಯ ಮೇಲೆ ಹಳೆಯ ವಿದ್ಯಾರ್ಥಿಗಳಿಗೆ ಅದೇಷ್ಟು ಪ್ರೀತಿ, ವಾತ್ಸಲ್ಯ ರೂಪದ ಕಾಳಜಿ ಇರುತ್ತೆ ಎನ್ನುವುದಕ್ಕೆ ಸಂಕೋನಟ್ಟಿ ಗ್ರಾಮದ ವರ್ಧಮಾನ ಶಿಕ್ಷಣ ಸಂಸ್ಥೆಯಲ್ಲಿ ನಡೆದ ರಜತ ಮಹೋತ್ಸವ ಸಾಕ್ಷಿಯಾಗಿದೆ. ಗುರುವಂದನೆ ಕಾರ್ಯಕ್ರಮ ಹಿನ್ನೆಲೆ ಹಳೆಯ ವಿದ್ಯಾರ್ಥಿಗಳು ಶಾಲೆಗೆ ಬೇಕಾದ ಅವಶ್ಯಕ ಪರಿಕರ, ಧ್ವಜಕಟ್ಟೆ, ಸರಸ್ವತಿ ದೇವಿಯ ಮೂರ್ತಿ, ಪೀಠ ಸೇರಿ ಅನೇಕ ಪೀಠೋಪಕರಣಗಳನ್ನ ಕಾಣಿಕೆಯಾಗಿ ನೀಡಿದ್ದಾರೆ. 2004-05ನೇ ಬ್ಯಾಚ್ ವಿದ್ಯಾರ್ಥಿಗಳು ಬಡ ಮಕ್ಕಳಿಗಾಗಿ 1.41 ಲಕ್ಷ ರೂಪಾಯಿಗಳನ್ನ ಬಡವಿದ್ಯಾರ್ಥಿಗಳ ನಿಧಿಗೆ ಜಮೆ ಮಾಡಿದ್ದಾರೆ. ಒಟ್ಟು 20ಲಕ್ಷದ ವರೆಗೆ ವಿವಿಧ ರೂಪದಲ್ಲಿ ಹಳೆ ವಿದ್ಯಾರ್ಥಿಗಳು ದೇಣಿಗೆಯನ್ನ ಸಲ್ಲಿಕೆ ಮಾಡಿ ಹಳೆ ಶಾಲೆಯ ಮೇಲಿನ ಪ್ರೇಮವನ್ನ ಮೆರೆದಿದ್ದಾರೆ.

ಹಳೆ ಗೆಳೆಯರನ್ನ ಕಂಡು ಕಣ್ಣೀರಾದ ವಿದ್ಯಾರ್ಥಿ-ಶಿಕ್ಷಕರು: ಇನ್ನೂ ಎಷ್ಟೋ ವರ್ಷಗಳ ಬಳಿಕ ಸಿಕ್ಕ ಹಳೆ ಗೆಳೆಯರನ್ನ ಕಂಡ ಯುವಕ-ಯುವತಿಯರು ಕಣ್ಣೀರಾದ ದೃಶ್ಯಗಳು ಕಂಡು ಬಂದವು. ಜೊತೆಗೆ ತಮಗೆ ವಿದ್ಯೆ ಕಲಿಸಿದ ಶಿಕ್ಷಕರನ್ನ ಕಂಡು ಶಿಷ್ಯರು ಆನಂದಬಾಷ್ಪ‌ ಸುರಿಸಿದ್ದು ಕಂಡು ಬಂತು.‌ ಇನ್ನೂ ತಮ್ಮ ಕಯ್ಯಲ್ಲಿ ಕಲಿತು ಇಂದು ಉನ್ನತ ಮಟ್ಟಕ್ಕೆ ಬೆಳೆದ ಶಿಷ್ಯರ ಸಾಧನೆಯನ್ನ ಕಂಡ ಗುರುಗಳು ಭಾವುಕರಾದ್ರು. ಇತ್ತ ತಮ್ಮ ಊರಲ್ಲಿ ಹೊತ್ತು ಮೆರೆಸಿ ಪಾದಕ್ಕೆರಗಿದ ಹಳೆ ವಿದ್ಯಾರ್ಥಿಗಳ ಪ್ರೀತಿಗೌರವಕ್ಕೆ ವೇದಿಕೆ ಮೇಲೆ ಶಿಕ್ಷಕರು ಕಣ್ಣೀರು ಹಾಕಿದ್ರು.. ತಾವು ಕಲಿತ ಶಾಲಾ ಕೊಠಡಿಯಲ್ಲಿ ಕೂತು ಹಳೆ ನೆನಪುಗಳ ಮೆಲುಕು ಹಾಕಿದ್ರು..

ದ.ಕ.ದಲ್ಲಿ ಮರಳಿ ಕಾಂಗ್ರೆಸ್‌ ಗೆಲ್ಲಿಸಿ: ಕಾರ್ಯಕರ್ತರಿಗೆ ಸಚಿವ ಜಾರ್ಜ್‌ ಕರೆ

ಆಸ್ತಿಯನ್ನಾದರು ಮಾರಾಟ ಶಿಷ್ಯರ ಋಣ ಮುಟ್ಟಿಸುವೆ ಎಂದ ಶಿಕ್ಷಕ: ಇನ್ನೂ ತಮ್ಮ ಹಳೆ ವಿದ್ಯಾರ್ಥಿಗಳ ತಮಗೆ ನೀಡಿದ ಗೌರವ, ಭಕ್ತಿಯನ್ನ ಕಂಡು ಭಾವುಕರಾದ ಶಿಕ್ಷಕರು ಕಣ್ಣೀರಾದರೆ, ಇತ್ತ ಹಿಂದಿ ಶಿಕ್ಷಕ ಮೇತ್ರಿ ವೇದಿಕೆಯಲ್ಲಿ ಮಾತನಾಡುತ್ತ ಶಿಷ್ಯರು ನಮಗೆ ನೀಡಿದ ಗೌರವದ ಋಣವನ್ನ ತೀರಿಸಲು ಸಾಧ್ಯವಿಲ್ಲ. ಬಡ ವಿದ್ಯಾರ್ಥಿಗಳಿದ್ದ ಕರೆತನ್ನಿ ನಾನು ಮೈಮೇಲಿನ ಚಿನ್ನವನ್ನಾದರು ಮಾರಿ ಋಣ ತೀರಿಸುವೆ, ನನ್ನ ಶಿಷ್ಯರಿಗೆ ಕಷ್ಟ ಬಂದರೆ ನಾನು ಆಸ್ತಿಯನ್ನಾದರೂ ಮಾರಿ ಋಣ ತೀರಿಸುವೆ ಎಂದರು. ತಮ್ಮ ಗುರುಗಳ ಮಾತು ಕೇಳಿ ಹಳೆ ವಿದ್ಯಾರ್ಥಿಗಳು ಕಣ್ಣೀರು ಹಾಕಿದ ಘಟನೆಯು ನಡೆಯಿತು.

click me!