ಏನಿದು ಮಲೆ ಮಾದೇಶ್ವರನ ಹುಂಡಿಯಲ್ಲಿ 'ಹುಡುಗಿಯಾಟ'!?

First Published Jul 27, 2018, 12:20 PM IST
Highlights

ದೇವರ ಹುಂಡಿಯ ಕಾಣಿಕೆ ಕಾರ್ಯದಲ್ಲಿ ಪ್ರೇಮ ಪತ್ರಗಳು, ಇತರೆ ನಿವೇದನಾ ಪತ್ರಗಳು ಸಿಗೋದು ಕೇಳಿದ್ದೇವೆ. ಆದರೆ, ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ದೇವಸ್ಥಾನದ ಹುಂಡಿ ಎಣಿಕಾ ಕಾರ್ಯದಲ್ಲಿ ಎಲ್ಲರೂ ಅಚ್ಚರಿ ಪಡುವಂಥ ಮತ್ತೊಂದು ವಸ್ತು ಸಿಕ್ಕಿದೆ. ಏನದು?

ಚಾಮರಾಜನಗರ: ಎಂದಿನಂತೆ ನಡೆಯುವ ಮಲೆ ಮಹದೇಶ್ವರ ಹುಂಡಿ ಎಣಿಕೆ ಕಾರ್ಯದಲ್ಲಿ ಈ ತಿಂಗಳು ಎಲ್ಲರೂ ಚಕಿತರಾಗುವಂಥ ಅಚ್ಚರಿಯೊಂದು ನಡೆದಿದೆ.

ರಾಶಿ ರಾಶಿ ನೋಟು, ನಾಣ್ಯ, ಚಿನ್ನ, ಬಂಗಾರ ನಡುವೆ ಯುವತಿಯ ಫೋಟೋವೊಂದು ಸಿಕ್ಕಿದ್ದು, ಹುಂಡಿಯಲ್ಲಿ ಇದೇನಿದು 'ಹುಡುಗಿಯಾಟ' ಎಂದು ಎಲ್ಲರೂ ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.

ಯಾರಾದರೂ ಭಗ್ನ ಪ್ರೇಮಿ ಈಕೆ ತನಗೆ ಸಿಗಲೆಂದು ಹುಂಡಿಗೆ ಈಕೆಯ ಭಾವಚಿತ್ರ ಹಾಕಿದನೋ, ಇಲ್ಲವೇ ಈಕೆಯ ಪೋಷಕರು,ಇಲ್ಲವೇ ಸ್ನೇಹಿತರು ಹಣದೊಂದಿಗೆ ತಮಗರಿವಿಲ್ಲದಂತೆ ಈಕೆಯ ಭಾವಚಿತ್ರ ಹುಂಡಿಗೆ ಹಾಕಿರಬಹುದು...ಹೀಗೆ ಊಹಾಪೋಹಗಳು ಹರಿದಾಡುತ್ತಿದೆ. ಒಟ್ಟಿನಲ್ಲಿ ಹುಂಡಿಯಲ್ಲಿ ಹುಡುಗಿ ಪೋಟೋ ಸಿಕ್ಕಿರುವುದು ಕೊಂಚ ಸಮಯ ಚರ್ಚೆಗೆ ಗ್ರಾಸವಾಗಿದ್ದಂತೂ ನಿಜ.

ಇನ್ನು, ಈ ಬಾರಿ ಹುಂಡಿ ಎಣಿಕೆಯಲ್ಲಿ 1 ಕೋಟಿ 35 ಸಾವಿರದ 499 ರೂ. ಸಂಗ್ರಹವಾಗಿದೆ. ಅಲ್ಲದೇ, 36 ಗ್ರಾಂ ಚಿನ್ನ, 680 ಗ್ರಾಂ ಬೆಳ್ಳಿ ದೊರೆತಿದೆ ಎಂದು ಮೂಲಗಳು ತಿಳಿಸಿವೆ.
 

click me!