ಹೊಲಕ್ಕೆ ದಾರಿ ಮಾಡಿ ಕೊಡಿ ಅಂದ್ರೆ ರಾಜ್ಯಮಟ್ಟದ ಪ್ರಶಸ್ತಿ ಕೊಟ್ರು: ಓದಿ ಮಜಾವಾಗಿದೆ

By Suvarna NewsFirst Published Apr 9, 2021, 6:17 PM IST
Highlights

ಮನವಿ ಸಲ್ಲಿಸಲು ಹೋದ ವ್ಯಕ್ತಿಗೂ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದ ಪ್ರಸಂಗ ನಡೆದಿದೆ.  ಅರೇ ಇದೇನಿದು ಎಂದು ಅಚ್ಚರಿಯಾಗುತ್ತೆ ಅಲ್ವಾ....ಮುಂದೆ ಓದಿ ಮಜಾವಾಗಿದೆ.

ಹುಬ್ಬಳ್ಳಿ, (ಏ.09): ಈಗಿನ ಕಾಲದಲ್ಲಿ ಎಷ್ಟೆಷ್ಟೋ ಸಾಧನೆ ಮಾಡಿವರಿಗೆ ಯಾವುದೇ ಪ್ರಶಸ್ತಿ-ಪುನಸ್ಕಾರಗಳು, ಮನ್ನಣೆ ಸಿಕ್ಕಿಲ್ಲ. ಆದ್ರೆ ಇಲ್ಲೋರ್ವ ವ್ಯಕ್ತಿ ತನ್ನ ಹೊಲಕ್ಕೆ ದಾರಿ ಮಾಡಿ ಕೊಡಿ ಎಂದು ಮನವಿ ಪತ್ರ ಕೊಡಲು ಬಂದು ರಾಜ್ಯಮಟ್ಟದ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಹೌದು...ಅಚ್ಚರಿ ಎನ್ನಿಸಿದರೂ ಸತ್ಯ. ಇದು ಬಯಸದೇ ಬಂದ ಭ್ಯಾಗ್ಯವೆಂದ ಆ ವ್ಯಕ್ತಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದು ಫೋಟೋಗೆ ಫೋಸ್ ಕೊಟ್ಟಿದ್ದಾರೆ. 

ಈ ಅಪರೂಪದ ಪ್ರಸಂಗ ಹುಬ್ಬಳ್ಳಿಯಲ್ಲಿ ನಡೆದಿದೆ.  ಮನವಿ ಸಲ್ಲಿಸಲು ಹೋದ ವ್ಯಕ್ತಿಗೂ ನರೇಗಾ ಯೋಜನೆಯಡಿ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದ ಪ್ರಸಂಗ ನಡೆದಿದೆ. ಇದು ಪಂಚಾಯತ್ ರಾಜ್ ಇಲಾಖೆಯನ್ನು ಮುಜುಗರಕ್ಕೀಡು ಮಾಡಿದಂತಾಗಿದೆ.

ಕಿರಿಕ್ ಪಾರ್ಟಿ ತಂಡಕ್ಕೆ ಬಂಧನ ಭೀತಿ, ಪ್ರಕಟಗೊಂಡಿತು ಕರ್ಫ್ಯೂ ನೀತಿ; ಏ.9ರ ಟಾಪ್ 10 ಸುದ್ದಿ! .

2020-21ನೇ ಸಾಲಿನಲ್ಲಿ ಮನರೇಗಾ ಯೋಜನೆಯಲ್ಲಿ ಉತ್ತಮ ಕೆಲಸ ಮಾಡಿದ ಪಂಚಾಯತ್ ರಾಜ್ ಇಲಾಖೆಯ ವಿವಿಧ ಹಂತದ 112 ಜನ ಸಿಬ್ಬಂದಿಗೆ ಇಂದು (ಶುಕ್ರವಾರ) ಪ್ರಶಸ್ತಿ ಪ್ರಧಾನ ಸಮಾರಂಭನ್ನು ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ಇಲಾಖೆ ಹಿರಿಯ ಮಟ್ಟದ ಅಧಿಕಾರಿಗಳಿಂದ ಪಿಡಿಒ, ಗ್ರಾಮ ಲೆಕ್ಕಾಾಧಿಕಾರಿ ವರೆಗಿನ ಎಲ್ಲ ಸಿಬ್ಬಂದಿಯೂ ಇತ್ತು.

ಪ್ರಶಸ್ತಿ ಪ್ರದಾನ ಸಮಾರಂಭ ಆರಂಭವಾಗಿ ಕೆಲ ಸಿಬ್ಬಂದಿ ಪ್ರಶಸ್ತಿ ಪಡೆದಿದ್ದುಂಟು. ಇದೇ ವೇಳೆ ಕುಂದಗೋಳ ತಾಲೂಕಿನ ಬುಡೇನಕಟ್ಟಿ ಗ್ರಾಾಮದ ರೈತ ಬಸವರಾಜ ಯೋಗಪ್ಪನವರ ಎಂಬುವವರು ‘ತಮ್ಮ ಹೊಲಕ್ಕೆ ದಾರಿ ಇಲ್ಲ ದಾರಿ ಮಾಡಿಕೊಡಿಸಿ’ ಎಂಬ ಬೇಡಿಕೆಯ ಮನವಿಯನ್ನೂ ಸಲ್ಲಿಸಲು ವೇದಿಕೆ ಮೇಲೆ ಏರಿದರು. 

ಈ ವೇಳೆ ಈಶ್ವರಪ್ಪ ಅವರಿಗೆ ಮನವಿಯನ್ನೂ ಸಲ್ಲಿಸಿದ್ದುಂಟು. ಅಷ್ಟರಲ್ಲೇ ಪಕ್ಕದಲ್ಲಿ ಬೇರೆ ಸಿಬ್ಬಂದಿಗೆ ಪ್ರಶಸ್ತಿ ಕೊಟ್ಟಿದ್ದ ಸಚಿವ ಪ್ರಲ್ಹಾದ ಜೋಶಿ ಅವರು, ಇವರು ಪ್ರಶಸ್ತಿ ಪಡೆಯಲು ಬಂದಿದ್ದಾಾರೆ ಎಂದು ಭಾವಿಸಿ ಯೋಗಪ್ಪನವರಿಗೂ ಪ್ರಶಸ್ತಿ ನೀಡಲು ಮುಂದಾದರು. ಅದಕ್ಕೆ ಈಶ್ವರಪ್ಪ ಕೂಡ ಮನವಿ ಸ್ವೀಕರಿಸಿ ಪಕ್ಕದಲ್ಲಿಟ್ಟು ಜೋಶಿ ಅವರೊಂದಿಗೆ ಸೇರಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿ ಕಳುಹಿಸಿದರು.

ಈತ ಪ್ರಶಸ್ತಿ ಸ್ವೀಕರಿಸಿ ಫೋಟೋಗೆ ಫೋಸ್ ನೀಡಿ ನಗುತ್ತಲೇ ವೇದಿಕೆಯಿಂದ ಕೆಳಕ್ಕಿಳಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಯೋಗಪ್ಪನವರ, ‘ನಮ್ಮ ಹೊಲಕ್ಕೆ ದಾರಿ ಇರಲಿಲ್ಲ. ಹೀಗಾಗಿ ಮನವಿ ಕೊಡಲು ಹೋಗಿದ್ದೆ. ಪ್ರಶಸ್ತಿಯನ್ನೂ ಕೊಟ್ಟು ಗೌರವಿಸಿದರು. ಇದು ತಮಗೆ ಬಹಳ ಖುಷಿ ತಂದ ಕ್ಷಣ’ ಎಂದು ಸಂತಸ ಹಂಚಿಕೊಂಡರು.

ಇದೆಲ್ಲಕ್ಕಿಂತ ಹೆಚ್ಚಾಾಗಿ ವೇದಿಕೆಯ ಅಕ್ಕಪಕ್ಕದಲ್ಲೇ ಅಧಿಕಾರಿಗಳು ನಿಂತು ಸರತಿ ಸಾಲಿನಲ್ಲಿ ಪ್ರಶಸ್ತಿಗೆ ಆಯ್ಕೆಯಾದವರನ್ನು ಬಿಡುತ್ತಿದ್ದರು. ಆದರೂ ಈ ಅಚಾತುರ್ಯ ನಡೆದಿರುವುದು ವಿಪರ್ಯಾಸ. ಕೊನೆಗೆ ಈ ವಿಷಯ ತಿಳಿದು ಅಧಿಕಾರಿಗಳೇ ಮುಸಿ ಮುಸಿ ನಕ್ಕು ಸುಮ್ಮನಾದರಷ್ಟೇ.

click me!