ಫೇಸ್‌ಬುಕ್‌ನಲ್ಲಿ ಅಪರಿಚತರೊಂದಿಗೆ ಚಾಟ್ ಮಾಡೋ ಮುನ್ನ ಈ ಸುದ್ದಿ ಓದಿ!

By Suvarna News  |  First Published Dec 4, 2019, 8:06 AM IST

ಅಮೇರಿಕಾ ಮೂಲದವನೆಂದು ನಂಬಿಸಿ ಮಹಿಳೆಗೆ 21.5 ಲಕ್ಷ ಪಂಗನಾಮ| ಅಪರಿಚಿತ ವ್ಯಕ್ತಿ ಗಿಫ್ಟ್‌ ನೀಡುವುದಾಗಿ ನಂಬಿಸಿ ಸರ್ಕಾರಿ ನೌಕರನ ಪತ್ನಿಗೆ ಮೋಸ|ಸೈಬರ್‌ ಠಾಣೆ ಮೆಟ್ಟಿಲೇರಿದ್ದ ಮೋಸಕ್ಕೆ ಒಳಗಾಗಿದ್ದ ಮಹಿಳೆ| ಹುಬ್ಬಳ್ಳಿಯಲ್ಲಿ ದಾಖಲಾದ ಅತ್ಯಂತ ದೊಡ್ಡ ಮೊತ್ತದ ಸೈಬರ್‌ ಮೋಸ|


ಹುಬ್ಬಳ್ಳಿ[ಡಿ.04]:  ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಲಂಡನ್‌ ಮೂಲದವನೆಂದು ಹೇಳಿಕೊಂಡಿದ್ದ ಅಪರಿಚಿತ ವ್ಯಕ್ತಿ ಗಿಫ್ಟ್‌ ನೀಡುವುದಾಗಿ ನಂಬಿಸಿ ಸರ್ಕಾರಿ ನೌಕರನ ಪತ್ನಿಗೆ ಬರೊಬ್ಬರಿ 21,41,500 ವಂಚಿಸಿದ ಘಟನೆ ಮಹಾನಗರದಲ್ಲಿ ನಡೆದಿದೆ.

ಕಳೆದ ಅಕ್ಟೋಬರ್‌ 5 ರಿಂದ ನ. 21ರ ವರೆಗೆ ಈತ ವಂಚನೆಗೆ ಒಳಗಾದ ಹುಬ್ಬಳ್ಳಿ ಮೂಲದ ಮಹಿಳೆಯ ಸಂಪರ್ಕದಲ್ಲಿದ್ದ. ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಈತ ತನ್ನನ್ನು ಕೆನಡಿ ಓವೆನ್‌ ಎಂದು ಪರಿಚಯ ಮಾಡಿಕೊಂಡ. ಲಂಡನ್‌ನಲ್ಲಿ ಆಯಿಲ್‌ ಕಂಪನಿಯಲ್ಲಿ ಕೆಲಸ ಮಾಡುವುದಾಗಿ ಹೇಳಿ ನಂಬಿಸಿ ಸ್ನೇಹ ಸಂಪಾದಿಸಿದ್ದ.

Tap to resize

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಿಮಗಾಗಿ ದೆಹಲಿ ಏರ್‌ಪೋರ್ಟ್‌ಗೆ ಆ್ಯಪಲ್‌ ಕಂಪನಿಯ ಲ್ಯಾಪ್‌ಟಾಪ್‌ ಸೇರಿ ಹಲವು ಉಡುಗೊರೆಯನ್ನು ಕಳಿಸಿದ್ದಾಗಿ ಈತ ಹೇಳಿದ್ದ. ದೆಹಲಿ ಏರ್‌ಪೋರ್ಟ್‌ ಪಾರ್ಸಲ್‌ ಆಫೀಸರ್‌ ಎಂದು ನಂಬಿಸಿದ್ದ ಮಹಿಳೆ ಹಾಗೂ ಇನ್ನೊಬ್ಬ ವ್ಯಕ್ತಿ ಕೂಡ ಇವರ ಜೊತೆ ಮಾತನಾಡಿ ಪಾರ್ಸಲ್‌ ಬಂದಿರುವುದಾಗಿ ನಂಬಿಸಿದ್ದರು. ಅಲ್ಲದೆ, ಕೆನಡಿ ಬಳಿಕ ಪಾರ್ಸಲ್‌ ಪಡೆಯಲು ವಿವಿಧ ಶುಲ್ಕ ನೀಡಬೇಕಾಗುತ್ತದೆ ಎಂದು ಹೇಳಿ ತನ್ನ ವಿವಿಧ ಬ್ಯಾಂಕ್‌ ಖಾತೆಗೆ ಒಟ್ಟು 21,41,500 ರು. ಜಮಾ ಮಾಡಿಸಿಕೊಂಡಿದ್ದ.

ಆದರೆ, ಬಳಿಕ ಹಲವು ದಿನಗಳಾದರೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಾರದ್ದರಿಂದ ಕಂಗಾಲಾಗಿದ್ದಾರೆ. ಅಲ್ಲದೆ ದೆಹಲಿ ಏರ್‌ಪೋರ್ಟ್‌ ಸಂಪರ್ಕಿಸಿದರೂ ಯಾವುದೆ ಸುಳಿವು ಸಿಗಲಿಲ್ಲ. ಹೀಗಾಗಿ ಸೈಬರ್‌ ಠಾಣೆ ಮೆಟ್ಟಿಲೇರಿದ್ದು ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ದಾಖಲಾದ ಅತ್ಯಂತ ದೊಡ್ಡ ಮೊತ್ತದ ಸೈಬರ್‌ ಮೋಸ ಇದೆಂದು ಹೇಳಲಾಗಿದೆ.
 

click me!