ಉಡುಪಿ ಚಿಕ್ಕಮಗಳೂರು ಲೋಕಸಭಾ: ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಸಶಸ್ತ್ತ ಮೀಸಲು ಪಡೆಗಳ ನಿಯೋಜನೆ!

By Ravi Janekal  |  First Published Apr 6, 2024, 8:55 PM IST

ಮಲೆನಾಡಿನ ನಕ್ಸಲ್ ಭಾಗದ ವ್ಯವಸ್ಥೆ ಉಡುಪಿ  ಚಿಕ್ಕಮಗಳೂರು ಜಿಲ್ಲೆಯ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕೆ  4  ಕ್ಷೇತ್ರಗಳು ನಕ್ಸಲ್‌ಪೀಡಿತ ಪ್ರದೇಶ. ಕುಂದಾಪುರ, ಕಾರ್ಕಳ , ಶೃಂಗೇರಿ, ಮೂಡಿಗೆರೆಯ ಕಳಸ, ಕುದುರೆಮುಖ, ಬಲಿಗೆ, ಕೊಪ್ಪಾದ ಬಸರಿಕಟ್ಟೆ, ವಡೇರಮಠ ಸೇರಿದಂತೆ ಹತ್ತಾರು ಹಳ್ಳಿಗಳು ನಕ್ಸಲ್ ಪೀಡಿತ ಪ್ರದೇಶಗಳಾಗಿದ್ದು, ಈ ಪ್ರದೇಶಗಳಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿದೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು ಏ.6)  : ಲೋಕಸಭಾ ಚುನಾವಣೆಯ  ಮೊದಲ ಹಂತದಲ್ಲಿ ನಡೆಯುವ ಚುನಾವಣೆಗೆ ಇನ್ನು ಕೆಲದಿನಗಳು ಬಾಕಿ ಉಳಿದಿದೆ. ಲೋಕಸಮರದಲ್ಲಿ ರಾಜಕೀಯ ಪಕ್ಷಗಳು ಭರ್ಜರಿಯಾಗಿ ಪ್ರಚಾರ ಆರಂಭಿಸಿದೆ. ರಣರಂಗದ ಪೈಪೋಟಿ ನೋಡಿದ್ರೆ ಫಲಿತಾಂಶ ಅಚ್ಚರಿ ಮೂಡ್ಸೋದಂತು ಗ್ಯಾರಂಟಿ. ಇದಕ್ಕೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವೂ ಹೊರತಾಗಿಲ್ಲ. ಈ ನಡುವೆ ಹೆಚ್ಚು ಕುತೂಹಲ ಮೂಡ್ಸಿರೋದು ಮಲೆನಾಡಿನ ನಕ್ಸಲ್ ಭಾಗದ ವ್ಯವಸ್ಥೆ ಉಡುಪಿ  ಚಿಕ್ಕಮಗಳೂರು ಜಿಲ್ಲೆಯ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕೆ  4  ಕ್ಷೇತ್ರಗಳು ನಕ್ಸಲ್‌ಪೀಡಿತ ಪ್ರದೇಶ. ಕುಂದಾಪುರ, ಕಾರ್ಕಳ , ಶೃಂಗೇರಿ, ಮೂಡಿಗೆರೆಯ ಕಳಸ, ಕುದುರೆಮುಖ, ಬಲಿಗೆ, ಕೊಪ್ಪಾದ ಬಸರಿಕಟ್ಟೆ, ವಡೇರಮಠ ಸೇರಿದಂತೆ ಹತ್ತಾರು ಹಳ್ಳಿಗಳು ನಕ್ಸಲ್ ಪೀಡಿತ ಪ್ರದೇಶಗಳಾಗಿವೆ. 

Tap to resize

Latest Videos

undefined

ಮಲೆನಾಡು ಭಾಗವಾದ್ದರಿಂದ ಇಲ್ಲಿ ಮತದಾನ ಮಾಡೋರು ಕೂಡ ಕಡಿಮೆ. ಹಾಗಾಗಿ, ನಕ್ಸಲ್ ಪೀಡಿತ ಪ್ರದೇಶವಾದ್ದರಿಂದ ಜಿಲ್ಲಾಡಳಿತ ಈ ಚುನಾವಣೆಯಲ್ಲಿ ನಕ್ಸಲ್ ಪೀಡಿತ ಗ್ರಾಮಗಳ ಮೇಲೆ ತುಸು ಹೆಚ್ಚಿನ ಗಮನ ಹರಿಸಿದೆ. ವೋಟರ್ ಲೀಸ್ಟ್‌ನಲ್ಲಿ ಹೆಸರಿರೋ ಪ್ರತಿಯೊಬ್ಬರು ಯಾವುದೇ ಭಯ ಇಲ್ಲದಂತೆ ಮತದಾನ ಮಾಡಲು ಸಾಕಷ್ಟು ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಕಲ್ಪಿಸಿದ್ದು, ಆ ಭಾಗದಲ್ಲಿ ಎ,ಎನ್ ಎಫ್ ಸಿಬ್ಬಂದಿಗಳ ಜೊತೆಗೆ ಸ್ಥಳೀಯ ಪೋಲೀಸರು ಕೂಡ ಕಾರ್ಯನಿರ್ವಹಿಸಲಿದ್ದಾರೆ. ಜಿಲ್ಲೆಯಲ್ಲಿ 1229ಮತಗಟ್ಟೆಗಳು ಇದ್ದು 1700 ಪೊಲೀಸರು ಜೊತೆಗೆ ನಕ್ಸಲ್ ಪೀಡಿತ ಪ್ರದೇಶದಲ್ಲಿ ಮೂರು ಕೇಂದ್ರೀಯ ಸಶಸ್ತ್ತ ಮೀಸಲು ಪಡೆಗಳನ್ನು ನಿಯೋಜನೆ ಮಾಡಲಾಗಿದೆ. 1229 ಮತಗಟ್ಟೆಗಳಲ್ಲಿ 32ಕ್ಕು ಹೆಚ್ಚು ನಕ್ಸಲ್ ಪೀಡಿತ ಪ್ರದೇಶ ವ್ಯಾಪ್ತಿಯಲ್ಲಿ ಮತಗಟ್ಟೆಗಳು ಬರಲಿವೆ...

ಮೋದಿ ಮತ್ತೆ ಪ್ರಧಾನಿಯಾಗಲು ಪ್ರಾರ್ಥಿಸಿ ಕಾಳಿ ಮಾತೆಗೆ ಬೆರಳನ್ನೇ ಅರ್ಪಿಸಿದ ಭಕ್ತ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ದು ಮಾಡಿರುವ  ನಕ್ಸಲರು:  
 
ಯಾವುದೇ ಭಯಗ್ರಸ್ಥ ವಾತಾವರಣಕ್ಕೂ ಅವಕಾಶ ನೀಡಿದೆ ಮತದಾರರು ಮುಕ್ತವಾಗಿ ಮತದಾನವನ್ನು ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಮತದಾನಕ್ಕೆ ಬೆದರಿಕೆಯಂತಹಾ ಪ್ರಕರಣಗಳು ಈವರೆಗೂ ನಡೆದಿಲ್ಲ. ಆದ್ರೆ ನಕ್ಸಲ್ ರು ಇರುವಿಕೆಯನ್ನು ತೋರಿಸಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಸದ್ದು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಪೊಲೀಸ್ ಇಲಾಖೆ ಅಗತ್ಯಕ್ಕಿಂತ ಹೆಚ್ಚುವರಿ ಸಿಬ್ಬಂದಿಯನ್ನ ರಕ್ಷಣೆ ದೃಷ್ಟಿಯಿಂದ ನಿಯೋಜಿಸಲಿದೆ. ಜಿಲ್ಲಾಡಳಿತ ಹೆಚ್ಚಿನ ಭದ್ರತೆಯ ಜೊತೆಗೆ ಮತದಾನದ ಬಗ್ಗೆ ಜಾಗೃತಿಯನ್ನು ಮೂಡಿಸಿದೆ. ನಕ್ಸಲ್ ಪೀಡಿತ ಪ್ರದೇಶದಲ್ಲಿ ವೋಟರ್ ಲೀಸ್ಟ್‌ನಲ್ಲಿ ಹೆಸರಿರೋ ಪ್ರತಿಯೊಬ್ಬರು ಯಾವುದೇ ಭಯ ಇಲ್ಲದಂತೆ ಮತದಾನಕ್ಕೆ ಬರಲು ಜಿಲ್ಲಾಡಳಿತ ಸಿದ್ದತೆ ಮಾಡಿದೆ.

click me!