Koppal: ರಾಷ್ಟ್ರಧ್ವಜವನ್ನೇ ತಲೆದಿಂಬನ್ನಾಗಿ ಮಾಡಿಕೊಂಡು ಮಲಗಿದ ಬಿಲ್‌ಕಲೆಕ್ಟರ್‌!

By Kannadaprabha News  |  First Published Feb 22, 2023, 12:14 PM IST

ಕುಷ್ಟಗಿ ತಾಲೂಕಿನ ಬೆನಕನಾಳ ಗ್ರಾಪಂ ಬಿಲ್‌ ಕಲೆಕ್ಟರ ಶನಿವಾರ ಸಂಜೆ ರಾಷ್ಟ್ರಧ್ವಜ ಇಳಿಸಿ ಧ್ವಜವನ್ನೇ ತಲೆದಿಂಬನ್ನಾಗಿ ಮಾಡಿಕೊಂಡು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕುಷ್ಟಗಿ (ಫೆ.22) : ತಾಲೂಕಿನ ಬೆನಕನಾಳ ಗ್ರಾಪಂ ಬಿಲ್‌ ಕಲೆಕ್ಟರ ಶನಿವಾರ ಸಂಜೆ ರಾಷ್ಟ್ರಧ್ವಜ ಇಳಿಸಿ ಧ್ವಜವನ್ನೇ ತಲೆದಿಂಬನ್ನಾಗಿ ಮಾಡಿಕೊಂಡು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆನಕನಾಳ ಗ್ರಾಪಂ(Benakanahal grama panchayat) ಬಿಲ್‌ ಕಲೆಕ್ಟರ ಆಗಿ ಕಾರ್ಯ ನಿರ್ವಹಿಸುತ್ತಿರುವ ಆನಂದಪ್ಪ(Bill collectro Anandappa) ಮದ್ಯ ಸೇವನೆ(Drunken) ಮಾಡಿ ಶನಿವಾರ ಸಂಜೆ ಧ್ವಜ(National flag) ಇಳಿಸಿ ರಾಷ್ಟ್ರಧ್ವಜವನ್ನು ತಲೆದಿಂಬನ್ನಾಗಿ ಮಾಡಿಕೊಂಡು ಧ್ವಜ ಕಟ್ಟೆಯ ಮೇಲೆಯೇ ಮಲಗಿದ್ದಾರೆ.

Tap to resize

Latest Videos

undefined

ಅಕ್ಷರ ಜ್ಞಾನವಿಲ್ಲದಿದ್ದರೂ ಸಹ ಗ್ರಾಪಂ ಬಿಲ್‌ ಕಲೆಕ್ಟರ ಆಗಿ ನೇಮಕ ಮಾಡಿಕೊಂಡಿದ್ದು, ಮದ್ಯವೆಸನಿಯಾಗಿರುವ ಬಿಲ್‌ ಕಲೆಕ್ಟರ್‌ ಆನಂದಪ್ಪ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟಅಧಿಕಾರಿಗಳು ಇವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Koppal: ಚಂದ್ರಗಿರಿ ಬೆಟ್ಟದಲ್ಲಿ ಆದಿಮಾನವ ಕಾಲದ ಗವಿಚಿತ್ರಗಳು ಪತ್ತೆ!

ಬಿಲ್‌ ಕಲೆಕ್ಟರ್‌ ಆನಂದಪ್ಪ ರಾಷ್ಟ್ರ ಧ್ವಜವನ್ನು ತಲೆದಿಂಬನ್ನಾಗಿ ಇಟ್ಟುಕೊಂಡು ಮಲಗಿಕೊಂಡಿರುವ ವಿಷಯದ ಕುರಿತು ಸಿಬ್ಬಂದಿಗೆ ನೊಟೀಸ್‌ ನೀಡಿ ತಾಪಂ ಅಧಿಕಾರಿಗಳಿಗೆ ಮಾಹಿತಿ ತಿಳಿಸಲಾಗಿದೆ.

ಬಸವರಾಜ ಪಿಡಿಓ ಬೆನಕನಾಳ ಗ್ರಾಪಂ

click me!