Mysuuru Dasara : ದಸರೆಗೆ ಬಂದಿದ್ದ ‘ಲಕ್ಷ್ಮೇ’ ಆನೆಗೆ ಗಂಡು ಮರಿ ಜನನ

By Kannadaprabha NewsFirst Published Sep 15, 2022, 4:41 AM IST
Highlights

ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಆನೆ ‘ಲಕ್ಷ್ಮೀ’ ಗಂಡು ಮರಿಗೆ ಜನ್ಮ ನೀಡಿದೆ. ಮಂಗಳವಾರ ತಾಲೀಮಿನಲ್ಲಿ ಪಾಲ್ಗೊಂಡಿದ್ದ ಆನೆಯು ಸಹಜವಾಗಿಯೇ ಇತ್ತು. ಮಧ್ಯಾಹ್ನವಾಗುತ್ತಿದ್ದಂತೆಯೇ ಅದರ ವರ್ತನೆಯಲ್ಲಿ ಬದಲಾವಣೆ ಗಮನಿಸಿದ ಕವಾಡಿಗಳು ಮತ್ತ ಮಾವುತರು ವೈದ್ಯರ ಗಮನಕ್ಕೆ ತಂದಿದ್ದರು.

ಮೈಸೂರು (*ಸೆ.15) : ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಆನೆ ‘ಲಕ್ಷ್ಮೀ’ ಗಂಡು ಮರಿಗೆ ಜನ್ಮ ನೀಡಿದೆ. ಮಂಗಳವಾರ ತಾಲೀಮಿನಲ್ಲಿ ಪಾಲ್ಗೊಂಡಿದ್ದ ಆನೆಯು ಸಹಜವಾಗಿಯೇ ಇತ್ತು. ಮಧ್ಯಾಹ್ನವಾಗುತ್ತಿದ್ದಂತೆಯೇ ಅದರ ವರ್ತನೆಯಲ್ಲಿ ಬದಲಾವಣೆ ಗಮನಿಸಿದ ಕವಾಡಿಗಳು ಮತ್ತ ಮಾವುತರು ವೈದ್ಯರ ಗಮನಕ್ಕೆ ತಂದರು. ಆನೆಯನ್ನು ಪರೀಕ್ಷಿಸಿದ ವೈದ್ಯರು ಲಕ್ಷ್ಮೀಯು ಗರ್ಭವತಿ ಆಗಿರುವುದನ್ನು ಖಚಿತಪಡಿಸಿದರು.

ಮಂಗಳವಾರ ರಾತ್ರಿ 8.10ರ ಸುಮಾರಿನಲ್ಲಿ ಆನೆ ಮರಿಗೆ ಜನ್ಮ ನೀಡಿದೆ. ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು 14 ಆನೆಗಳು ಆಗಮಿಸಿದ್ದವು. ಈಗ ಲಕ್ಷ್ಮೀ ಆನೆ ಮತ್ತು ಮರಿಯನ್ನು ಅರಮನೆ ಆವರಣದಲ್ಲಿಯೇ ಪ್ರತ್ಯೇಕವಾಗಿರಿಸಿ, ಆರೈಕೆ ಮಾಡಲಾಗುತ್ತಿದೆ. ಬಂಡೀಪುರ ರಾಂಪುರ ಆನೆ ಶಿಬಿರದಿಂದ ಬಂದ ಲಕ್ಷ್ಮೀ ಬರುವಾಗಲೇ ಗರ್ಭಿಣಿಯಾಗಿತ್ತು. ದಸರಾ ಗಜಪಡೆಯ ಹೆಣ್ಣಾನೆಗಳಲ್ಲಿಯೇ ಇದು ಅತ್ಯಂತ ಕಿರಿಯ ಆನೆಯಾಗಿತ್ತು. 15 ವರ್ಷದ ಹಿಂದೆ ಸರಳ ಎಂಬ ಆನೆಯು ಹೆಣ್ಣು ಮರಿಗೆ ಜನ್ಮ ನೀಡಿತ್ತು. ಅದಕ್ಕೆ ಚಾಮುಂಡಿ ಎಂದು ಹೆಸರಿಡಲಾಯಿತು.

Mysuru Dasara 2022: ಮೇಯರ್‌ ಶಿವಕುಮಾರ್‌ ನಗರ ಪ್ರದಕ್ಷಿಣೆ: ಅಧಿಕಾರಿಗಳಿಗೆ ತರಾಟೆ

ದಸರಾ ಆನೆ ಲಕ್ಷ್ಮೀಯು ಗಂಡು ಮರಿಗೆ ಜನ್ಮ ನೀಡಿದ್ದು, ಸುರಕ್ಷತೆಯ ದೃಷ್ಟಿಯಿಂದ ಅರಮನೆ ಆವರಣದಲ್ಲಿಯೇ ಪ್ರತ್ಯೇಕವಾಗಿ ಸಂರಕ್ಷಿಸಲಾಗಿದೆ. ಅವುಗಳಿಗೆ ಯಾರೂ ತೊಂದರೆ ನೀಡದೆ ಸಹಕರಿಸಬೇಕು. ಆನೆ ಬರುವಾಗ ಗರ್ಭಿಣಿ ಆಗಿರುವುದು ತಿಳಿದಿರಲಿಲ್ಲ.

- ಕರಿಕಾಳನ್‌, ಡಿಸಿಎಫ್‌.

click me!