ಬೆಣ್ಣೆ ನಗರಿ ದಾವಣಗೆರೆಯಲ್ಲಿ ಶುಕ್ರವಾರ(ಜು.03) ಕೊರೋನಾ 9ನೇ ಬಲಿ ಪಡೆದಿದೆ. ಇನ್ನು 5 ಹೊಸ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲೀಗ 44 ಸಕ್ರಿಯ ಕೇಸ್‌ಗಳಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ದಾವಣಗೆರೆ(ಜು.04): ಕೊರೋನಾ ಮತ್ತೊಬ್ಬರನ್ನು ಬಲಿ ಪಡೆದಿದ್ದು, ವೈರಸ್‌ಗೆ ಆಹುತಿಯಾದವರ ಸಂಖ್ಯೆ 9ಕ್ಕೆರಿದೆ. ಜಿಲ್ಲೆಯಲ್ಲಿ ಶುಕ್ರವಾರ 5 ಹೊಸ ಪಾಸಿಟಿವ್ ಪ್ರಕರಣ ವರದಿಯಾಗಿವೆ. ಸೋಂಕಿನಿಂದ ಗುಣಮುಖರಾದ 13 ಜನರು ಬಿಡುಗಡೆಯಾಗಿದ್ದಾರೆ. ಪ್ರಸ್ತುತ 44 ಸಕ್ರಿಯ ಕೇಸ್‌ಗಳಿವೆ.
ನಗರದ ಬೇತೂರು ರಸ್ತೆಯ 80 ವರ್ಷದ ವೃದ್ಧ (ಪಿ-16675) ಸೋಂಕಿಗೆ ಜಿಲ್ಲೆಯಲ್ಲಿ ಬಲಿಯಾದ 9ನೇ ವ್ಯಕ್ತಿ. ಜೂ.24ರಂದು ಜಿಲ್ಲಾ ನಿಗದಿತ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದ, ವಯೋವೃದ್ಧನಿಗೆ ಕೊರೋನಾ ಪಾಸಿಟಿವ್ ಇರುವುದು ಜು.1ರಂದು ತಡರಾತ್ರಿ ದೃಢಪಟ್ಟಿತ್ತು. ಲೋವರ್ ಲೋಬ್ ನ್ಯುಮೋನಿಯಾ, ನಿಮೋ ಥೊರಾಕ್ಸ್, ಹೈಪರ್ ಟೆನ್ಷನ್‌ನಿಂದ ಬಳಲುತ್ತಿದ್ದ ವೃದ್ಧನ ಶ್ವಾಸಕೋಶಗಳಲ್ಲಿ ನೀರು ತುಂಬಿಕೊಂಡು, ಇನ್‌ಫೆಕ್ಷನ್ ಆಗಿತ್ತು. ಅಲ್ಲದೇ, ವಯೋಸಹಜ ಕಾಯಿಲೆಗಳಿಂದಲೂ ಬಳಲುತ್ತಿದ್ದರು. ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಗುರುವಾರ ಸಾವನ್ನಪ್ಪಿದ್ದಾರೆ.
ಈವರೆಗೆ 338 ಕೇಸ್, 285 ಗುಣಮುಖ:
ಈವರೆಗೆ 338 ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿವೆ. ಈ ಪೈಕಿ 9 ಜನರು ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಸೋಂಕಿನಿಂದ ಸಂಪೂರ್ಣ ಗುಣಮುಖರಾದ 13 ಜನರು ಆಸ್ಪತ್ರೆಯಿಂದ ಶುಕ್ರವಾರ ಬಿಡುಗಡೆಯಾಗಿದ್ದಾರೆ. ಸೋಂಕಿನಿಂದ 285 ಜನರು ಇಲ್ಲಿವರೆಗೆ ಗುಣಮುಖರಾಗಿದ್ದಾರೆ. ಪ್ರಸ್ತುತ 44 ಸಕ್ರಿಯ ಕೇಸ್‌ಗಳಿವೆ. ಸೋಂಕಿತರಿಗೆ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ತಾಲೂಕಿನ ಸೋಂಕಿತರು ಗುಣಮುಖ:
ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದ 63 ವರ್ಷದ ಪುರುಷ (ಪಿ-18100), 27 ವರ್ಷದ ಪುರುಷ (18101) ಇಬ್ಬರಿಗೂ ನ್ಯಾಮತಿ ತಾಲೂಕಿನ ದೊಡ್ಡೇರಿ ಗ್ರಾಮದ ಗ್ರಾಪಂ ಸದಸ್ಯನಾದ 38 ವರ್ಷದ ಪುರುಷ (ಪಿ-13222)ನಿಂದ ಸೋಂಕಿಗೆ ತುತ್ತಾಗಿದ್ದಾರೆ. ದಾವಣಗೆರೆ ಆಜಾದ್ ನಗರದ 68 ವರ್ಷದ ಪುರುಷ (18102), ಬಳ್ಳಾರಿ ಜಿಲ್ಲೆ ಹರಪನಹಳ್ಳಿ ಪಟ್ಟಣದ ಭಾರತಿ ನಗರದ ವಾಸಿ 49 ವರ್ಷದ ಪುರುಷ (18103), ಹಾವೇರಿ ಜಿಲ್ಲೆ ಕನವಳ್ಳಿ ಗ್ರಾಮದ 60 ವರ್ಷದ ವೃದ್ಧ (18104)ನು ತೀವ್ರ ಉಸಿರಾಟ ಸಮಸ್ಯೆ(ಎಸ್‌ಎಆರ್‌ಐ)ನಿಂದ ಸೋಂಕಿಗೆ ತುತ್ತಾಗಿದ್ದಾರೆ.
ಸೋಂಕಿತ ಕಡೂರು ಶಿಕ್ಷಕ ಶವಕ್ಕೆ ಬೀರೂರಲ್ಲಿ ಅಂತ್ಯಸಂಸ್ಕಾರ: ಆಕ್ರೋಶ
ಸೋಂಕಿನಿಂದ ಸಂಪೂರ್ಣ ಗುಣಮುಖರಾದ ನಗರದ ಮಹಾರಾಜಪೇಟೆ ವಾಸಿ 68 ವರ್ಷದ ಪುರುಷ (ಪಿ-9421), 32 ವರ್ಷದ ಮಹಿಳೆ (10391), ಹರಿಹರದ ಇಂದಿರಾ ನಗರದ 39 ವರ್ಷದ ಮಹಿಳೆ (11156), ಚನ್ನಗಿರಿಯ ಕುಂಬಾರ ಬೀದಿಯ 60 ವರ್ಷದ ವೃದ್ಧೆ (11159), ಹರಿಹರದ ಅಗಸರ ಬೀದಿಯ 34 ವರ್ಷದ ಮಹಿಳೆ (11160), 45 ವರ್ಷದ ಪುರುಷ (11161) ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ದಾವಣಗೆರೆ ತರಳಬಾಳು ಬಡಾವಣೆಯ ಬಡಾವಣೆಯ 13ನೇ ಕ್ರಾಸ್ ವಾಸಿ 37 ವರ್ಷದ ಪುರುಷ (11950), 30 ವರ್ಷದ ಮಹಿಳೆ (11952), ಹಗೇದಿಬ್ಬ ಸರ್ಕಲ್‌ನ 68 ವರ್ಷದ ಪುರುಷ (11954), ಹರಿಹರದ ಗಂಗಾ ನಗರದ 65 ವರ್ಷದ ಪುರುಷ (11955), ಹರಿಹರ ಅಗಸರ ಬೀದಿಯ 40 ವರ್ಷದ ಮಹಿಳೆ (14400), 16 ವರ್ಷದ ಬಾಲಕಿ (14401) ಹಾಗೂ ನ್ಯಾಮತಿ ತಾಲೂಕಿನ ಠಾಗೂರು ರಸ್ತೆಯ 65 ವರ್ಷದ ಪುರುಷ (15386) ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.