ಉಡುಪಿ ಜಿಲ್ಲೆ ಈಗ ಕೊರೋನಾ ಸೋಂಕಿತರ ಸಾವಿರದ ಗಡಿಯಲ್ಲಿ ನಿಂತಿದೆ. ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 22 ಮಂದಿಗೆ ಕೊರೋನಾ ಸೋಂಕಿರುವುದು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 991ಕ್ಕೇರಿದೆ.
ಉಡುಪಿ(ಜೂ.13): ಉಡುಪಿ ಜಿಲ್ಲೆ ಈಗ ಕೊರೋನಾ ಸೋಂಕಿತರ ಸಾವಿರದ ಗಡಿಯಲ್ಲಿ ನಿಂತಿದೆ. ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 22 ಮಂದಿಗೆ ಕೊರೋನಾ ಸೋಂಕಿರುವುದು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 991ಕ್ಕೇರಿದೆ.
ಜೊತೆಗೆ ಜಿಲ್ಲೆಯಲ್ಲಿ ಶುಕ್ರವಾರ 68 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ, ಇದುವರೆಗೆ ಜಿಲ್ಲೆಯಿಂದ 702 ಮಂದಿ ಬಿಡುಗಡೆಯಾಗಿದ್ದಾರೆ. ಶುಕ್ರವಾರ 26 ಮಂದಿಯ ಕೋವಿಡ್ ವರದಿಗಳು ಬಂದಿದ್ದು, ಅವರಲ್ಲಿ 22 ಮಂದಿಗೆ ಸೋಂಕಿರುವುದು ದೃಢಪಟ್ಟಿದೆ. ಅವರಲ್ಲಿ 21 ಮಂದಿ ಮಹಾರಾಷ್ಟ್ರದಿಂದ ಬಂದವರಾದರೆ, ಒಬ್ಬರು ಸ್ಥಳೀಯರಾಗಿದ್ದಾರೆ.
undefined
ಉಡುಪಿ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
22 ಮಂದಿಯಲ್ಲಿ 13 ಪುರುಷರು, 6 ಮಹಿಳೆಯರು ಮತ್ತು ಹತ್ತು ವರ್ಷದೊಳಗಿನ 3 ಮಕ್ಕಳಿದ್ದಾರೆ. ಕಳೆದ ವಾರ ಮೂರಂಕಿಯಲ್ಲಿ ಸೋಂಕಿತರು ಪತ್ತೆಯಾಗುತಿದ್ದರು, ಈ ವಾರದಲ್ಲಿ 2 ದಿನ ಸೋಂಕಿತರ ಸಂಖ್ಯೆ ಶೂನ್ಯವಾಗಿದ್ದು, ಜಿಲ್ಲೆಯ ಜನತೆ ಸ್ವಲ್ಪ ಮಟ್ಟಿನ ನಿರಾಳವಾಗಿದ್ದರು. ಆದರೆ ಗುರುವಾರ ಮತ್ತು ಶುಕ್ರವಾರಗಳಂದು ತಲಾ 22 ಪ್ರಕರಣಗಳು ಪತ್ತೆಯಾಗುತ್ತಿವೆ.
ಸ್ಥಳೀಯರಿಗೆ ಸೋಂಕು ಹೇಗೆ?:
ಜಿಲ್ಲೆಯ ಗಡಿಗಳನ್ನು ಕಾಯುತಿದ್ದ 11 ಮಂದಿ ಪೊಲೀಸರಿಗೆ ಮಹಾರಾಷ್ಟ್ರದಿಂದ ಬಂದವರಿಂದಲೇ ಸೋಂಕು ತಗಲಿತ್ತು. ಅವರನ್ನು ಬಿಟ್ಟರೆ ದುಬೈ, ತೆಲಂಗಾಣದಿಂದ ಬಂದ ಬೆರಳೆಣಿಕೆಯಷ್ಟುಮಂದಿಗೆ ಸೋಂಕು ಪತ್ತೆಯಾಗಿತ್ತು, ಆದರೆ ಸಿಂಹಪಾಲು ಸೋಂಕಿತರು ಮಹಾರಾಷ್ಟ್ರದವರಾಗಿದ್ದರು.
ದಕ್ಷಿಣ ಕನ್ನಡದಲ್ಲಿ ಮತ್ತೆ 17 ಪಾಸಿಟಿವ್, ನಾಲ್ವರು ಡಿಸ್ಚಾರ್ಜ್
ಆದರೆ ಕಳೆದ ವಾರ ಮಣಿಪಾಲದ ಖಾಸಗಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಶಿಯನ್ ಒಬ್ಬರಿಗೆ, ಮರುದಿನ ಅವರ ಮಗುವಿಗೆ ಸೋಂಕು ಪತ್ತೆಯಾಗಿತ್ತು, ಇದೀಗ ಅವರ ಮನೆಯ 71 ವರ್ಷ ವಯಸ್ಸಿನ ವ್ಯಕ್ತಿಗೂ ಸೋಂಕು ಪತ್ತೆಯಾಗಿದ್ದು, ಅವರಿಗೆ ಹೇಗೆ ಸೋಂಕು ತಗಲಿತು ಎಂಬುದಿನ್ನು ಜಿಲ್ಲಾಡಳಿತಕ್ಕೆ ಪತ್ತೆಯಾಗಿಲ್ಲ.
ಜಿಲ್ಲೆಯಲ್ಲಿ ಮತ್ತೆ ಏರುತ್ತಿದೆ ಮಹಾಮಾರಿ ಗ್ರಾಫ್!
ಜಿಲ್ಲೆಗೆ ಒಂದು ಹಂತದಲ್ಲಿ ಮಹಾರಾಷ್ಟ್ರದಿಂದ ಬಂದ 9000ಕ್ಕೂ ಅಧಿಕ ಮಂದಿಯ ಕೋವಿಡ್ ಪರೀಕ್ಷೆ ಪೂರ್ಣಗೊಂಡಿದ್ದು ಅವರಲ್ಲಿ 900ಕ್ಕೂ ಅಧಿಕ ಮಂದಿಗೆ ಸೋಂಕು ಪತ್ತೆಯಾಗಿದೆ. ಇದೀಗ 2ನೇ ಹಂತದಲ್ಲಿ ಮುಂಬೈಯಿಂದ ಉಡುಪಿಗರು ವಾಪಸ್ ಬರಲಾರಂಭಿಸಿದ್ದಾರೆ. ಕಳೆದ ವಾರ 2 ದಿನ ರೈಲುಗಳಲ್ಲಿ ಸುಮಾರು 700 ಮಂದಿ ಬಂದಿದ್ದಾರೆ.
ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ಸಭೆ: ಮತ್ತೆ ಲಾಕ್‌ಡೌನ್ ಆಗುತ್ತಾ?
ಈಗ ಪ್ರತಿದಿನ 50ರಷ್ಟುಮಂದಿ ಖಾಸಗಿ ವಾಹನಗಳಲ್ಲಿ ಮುಂಬೈಯಿಂದ ಬರುತ್ತಿದ್ದಾರೆ. ಅವರನ್ನೆಲ್ಲ ಗಡಿ ಚೆಕ್‌ಪೋಸ್ವ್‌ಗಳಲ್ಲಿಯೇ ತಡೆದು, ಅವರ ಕೈಗೆ ಸೀಲ್ ಹಾಕಿ ಅವರವರ ಮನೆಯಲ್ಲಿಯೇ 14 ದಿನಗಳ ಹೋಮ್ ಕ್ವಾರಂಟೈನ್ ಗೆ ಕಳುಹಿಸಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಇಳಿಮುಖವಾಗಿರುವ ಕೊರೋನಾ ಗ್ರಾಫ್ ಮತ್ತೆ ಮೇಲೆರುವ ಆತಂಕ ಉಂಟಾಗಿದೆ. ಮುಂಬೈಯಿಂದ ಬಂದವರಲ್ಲಿ ಕೊರೋನಾ ಪತ್ತೆಯಾಗುವುದರ ಜೊತೆಗೆ ಅವರಿಂದ ಮನೆಯವರಿಗೂ ಸೋಂಕು ಹರಡುವ ಭೀತಿಯೂ ಇದೆ.