ರೈಲು ಪ್ರಯಾಣಿಕರಿಗೆ ಕೇಂದ್ರದಿಂದ ಸಂತಸದ ಸುದ್ದಿ

Kannadaprabha News   | Asianet News
Published : Feb 08, 2020, 07:20 AM IST
ರೈಲು ಪ್ರಯಾಣಿಕರಿಗೆ ಕೇಂದ್ರದಿಂದ ಸಂತಸದ ಸುದ್ದಿ

ಸಾರಾಂಶ

ಧಾರವಾಡ- ಬೆಳಗಾವಿ ರೈಲು ಮಾರ್ಗಕ್ಕೆ 988 ಕೋಟಿ|ಯೋಜನೆ ಕುರಿತು ನೈರುತ್ಯು ರೈಲ್ವೆ ವಲಯ ವರದಿ ಬಿಡುಗಡೆ|ಧಾರವಾಡ- ಬೆಳಗಾವಿ ಮಧ್ಯೆ 90 ಕಿಲೋ ಮೀಟರ್‌ ಅಂತರ| ಈ ಮಾರ್ಗದ ನಡುವೆ 11 ನಿಲ್ದಾಣಗಳು| 

ಹುಬ್ಬಳ್ಳಿ(ಫೆ.08): ಕೇಂದ್ರ ಬಜೆಟ್‌ನಲ್ಲಿ ಅಸ್ತು ಎಂದಿರುವ ಧಾರವಾಡ - ಬೆಳಗಾವಿ ರೈಲು ಮಾರ್ಗಕ್ಕೆ 988 ಕೋಟಿ ರು. ವೆಚ್ಚ ತಗುಲಲಿದೆ. ಕಿತ್ತೂರು ಮಾರ್ಗವಾಗಿ ಸಂಚರಿಸಲಿರುವ ಈ ಮಾರ್ಗದ ನಡುವೆ 11 ನಿಲ್ದಾಣಗಳು ಬರಲಿವೆ.
ಬಹುವರ್ಷಗಳ ಬೇಡಿಕೆಯಾಗಿದ್ದ ಧಾರವಾಡ- ಬೆಳಗಾವಿ ರೈಲು ಮಾರ್ಗಕ್ಕೆ ಈ ಸಲದ ಕೇಂದ್ರ ಬಜೆಟ್‌ನಲ್ಲಿ ಅಸ್ತು ಎನ್ನಲಾಗಿದೆ. ಯೋಜನೆ ಕುರಿತು ಇದೀಗ ನೈರುತ್ಯ ರೈಲ್ವೆ ವಲಯ ವಿವರವಾದ ವರದಿಯನ್ನು ಬಿಡುಗಡೆ ಮಾಡಿದೆ.

ವರದಿಯಲ್ಲಿ ಏನಿದೆ?

2013-14ರಲ್ಲಿ ಪ್ರಾಥಮಿಕ ಸಮೀಕ್ಷೆ ಕೈಗೊಳ್ಳಲಾಯಿತು. ಬಳಿಕ ಮತ್ತೊಮ್ಮೆ ಸಮೀಕ್ಷೆ ನಡೆಸಲು ನಿರ್ಧರಿಸಲಾಯಿತು. ಅದರಂತೆ 2019ರಲ್ಲಿ ಕೆ- ರೈಡ್‌ ಸಂಸ್ಥೆಯೂ ಈ ಸಮೀಕ್ಷೆಯನ್ನು ಕೈಗೊಂಡಿತ್ತು. 2 ವರ್ಷಗಳ ಕಾಲ ಈ ಸಮೀಕ್ಷೆಯನ್ನೂ ಕೆ- ರೈಡ್‌ ಸಂಸ್ಥೆಯೂ ಕೈಗೊಂಡು ವರದಿಯನ್ನು ನವೆಂಬರ್‌ 2019ರಲ್ಲಿ ಸಲ್ಲಿಸಿತ್ತು. ಆ ವರದಿ ಅನ್ವಯ ಇದೀಗ ಕೇಂದ್ರ ಬಜೆಟ್‌ನಲ್ಲಿ ಅನುಮತಿ ಸಿಕ್ಕಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಧಾರವಾಡ- ಬೆಳಗಾವಿ ಮಾರ್ಗ ಒಟ್ಟು 90 ಕಿಲೋ ಮೀಟರ್‌ ಅಂತರದ್ದು. ಕಿತ್ತೂರು, ಎಂ.ಕೆ. ಹುಬ್ಬಳ್ಳಿ, ಬಾಗೇವಾಡಿ ಮಾರ್ಗವಾಗಿ ಇದು ಸಂಚರಿಸಲಿದೆ. ಈ ಮಾರ್ಗದ ಮಧ್ಯೆ ಈಗಿರುವ ನಾಲ್ಕು ರೈಲ್ವೆ ನಿಲ್ದಾಣಗಳು ಸೇರಿದಂತೆ 11 ನಿಲ್ದಾಣಗಳು ಬರಲಿವೆ. ಧಾರವಾಡ, ಕ್ಯಾರಕೊಪ್ಪ, ಮಮ್ಮಿಗಟ್ಟಿ, ತೆಗೂರು, ಕಿತ್ತೂರು, ಹುಲಿಕಟ್ಟಿ, ಎಂ.ಕೆ. ಹುಬ್ಬಳ್ಳಿ, ಬಾಗೆವಾಡಿ, ಕಣವಿಕರವಿನಕೊಪ್ಪ, ದೇಸೂರು, ಬೆಳಗಾವಿ ಹೀಗೆ 11 ನಿಲ್ದಾಣಗಳು ಬರಲಿವೆ. ಈ ಮಾರ್ಗವಾದರೆ ಹುಬ್ಬಳ್ಳಿ-ಧಾರವಾಡ- ಬೆಳಗಾವಿ ನೇರ ಸಂಪರ್ಕ ಸಾಧ್ಯವಾಗಲಿದ್ದು, ಅಭಿವೃದ್ಧಿಗೆ ಪೂರಕವಾಗಿದೆ.

140 ಸೇತುವೆಗಳು ಈ ಮಾರ್ಗ ಮಧ್ಯೆದಲ್ಲಿ ಬರಲಿವೆ. ಅದರಲ್ಲಿ ಅತಿ ಮುಖ್ಯವಾದ ಸೇತುವೆಯೆಂದರೆ ಮಲಪ್ರಭಾ ನದಿ ಕ್ರಾಸಿಂಗ್‌ ಸೇತುವೆ, 11 ಪ್ರಮುಖ ಸೇತುವೆಗಳು, ರಸ್ತೆ ಮೇಲ್ಸೇತುವೆ 15, 71 ರಸ್ತೆ ಕೆಳಸೇತುವೆ ಸೇರಿವೆ ಎಂದು ಪ್ರಕಟಣೆ ತಿಳಿಸಿದೆ.

PREV
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!