ಉಡುಪಿ: ಮುಂಬೈಯಿಂದ ಬಂದ 9 ಮಂದಿಗೆ ಸೋಂಕು

Kannadaprabha News   | Asianet News
Published : May 28, 2020, 07:36 AM IST
ಉಡುಪಿ: ಮುಂಬೈಯಿಂದ ಬಂದ 9 ಮಂದಿಗೆ ಸೋಂಕು

ಸಾರಾಂಶ

ಉಡುಪಿ ಜಿಲ್ಲೆಗೆ ಮತ್ತೆ ಮುಂಬೈ ಸೋಂಕು ದಾಳಿ ಮಾಡಿದೆ. ಜಿಲ್ಲೆಯಲ್ಲಿ ಬುಧವಾರ 9 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಅವೆಲ್ಲವೂ ಮಹಾರಾಷ್ಟ್ರ ಮೂಲದಿಂದಲೇ ಬಂದಿವೆ.

ಉಡುಪಿ(ಮೇ 28): ಉಡುಪಿ ಜಿಲ್ಲೆಗೆ ಮತ್ತೆ ಮುಂಬೈ ಸೋಂಕು ದಾಳಿ ಮಾಡಿದೆ. ಜಿಲ್ಲೆಯಲ್ಲಿ ಬುಧವಾರ 9 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಅವೆಲ್ಲವೂ ಮಹಾರಾಷ್ಟ್ರ ಮೂಲದಿಂದಲೇ ಬಂದಿವೆ.

ಬುಧವಾರ ಪತ್ತೆಯಾದ ಎಲ್ಲ ಕೊರೋನಾ ಪ್ರಕರಣಗಳು ಮಹರಾಷ್ಟ್ರ ಮೂಲದಿಂದಲೇ ಬಂದಿವೆ. ಜಿಲ್ಲೆಯಲ್ಲಿ ಇದುವರೆಗೆ ಪತ್ತೆಯಾದ ಒಟ್ಟು ಕೊರೋವಾ ಪ್ರಕರಣಗಳ ಸಂಖ್ಯೆ 120ಕ್ಕೇರಿದೆ. ಅವರಲ್ಲಿ 6 ಮಂದಿ ಪುರುಷರು, 2 ಮಂದಿ ಮಹಿಳೆಯರು ಮತ್ತು 9 ವರ್ಷದ ಬಾಲಕ ಸೇರಿದ್ದಾನೆ.

ಜುಬಿಲಿಯಂಟ್‌ನಲ್ಲಿ ಜೂನ್ 1ರಿಂದ ಔಷಧ ಉತ್ಪಾದನೆ ಆರಂಭ!

ಈ ಸೋಂಕಿತರು ಎಲ್ಲರೂ ಕ್ವಾರಂಟೈನ್‌ ನಲ್ಲಿದ್ದು, ಅವರನ್ನು ತಕ್ಷಣ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯ ಒಟ್ಟು 120 ಕೊರೋನಾ ಸೋಂಕಿತರಲ್ಲಿ ಮಹಾರಾಷ್ಟ್ರದಿಂದ ಬಂದವರ ಸಂಖ್ಯೆ 98 ಆಗಿದೆ.

ಅವರನ್ನು ಬಿಟ್ಟರೇ ಅತಿ ಹೆಚ್ಚು ದುಬೈಯಿಂದ 13, ಕೇರಳದಿಂದ 2 ಮತ್ತು ತೆಲಂಗಾಣದಿಂದ 1ರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಜಿಲ್ಲೆಯೊಳಗೆ 4 ಮಂದಿ ಪೊಲೀಸ್‌ ಸಿಬ್ಬಂದಿಗಳಿಗೆ, 1 ಜಿಪಂ ಸಿಬ್ಬಂದಿಗೆ ಮತ್ತು 1 ಗರ್ಭಿಣಿಗೂ ಸೋಂಕು ಪತ್ತೆಯಾಗಿದೆ.

PREV
click me!

Recommended Stories

ಧಾರವಾಡ ಯೂಥ್ ಕಾಂಗ್ರೆಸ್ ನಾಯಕನ ಕೊಲೆ ಆರೋಪಿಗೆ ಕಿಮ್ಸ್‌ನಲ್ಲಿ ರಾಜಾತಿಥ್ಯ! ಮೊಬೈಲ್ ಚಾಟಿಂಗ್, ಮದ್ಯದ ಬಾಟಲಿ ಪತ್ತೆ?
ಪಾಕಿಸ್ತಾನ ವಿರುದ್ಧ ಗೆದ್ದು ಚಿನ್ನದ ಪದಕ ಮುಡಿಗೇರಿಸಿಕೊಂಡ ಬೆಂಗಳೂರು ಪೊಲೀಸ್ ಪುತ್ರ ಶ್ರೀಹರ್ಷ!