ಹುಣಸೂರು ಬೈಪಾಸ್‌ ಹೈವೆ ಕಾಮಗಾರಿಗೆ 86 ಕೋಟಿ ರು. ಮಂಜೂರು

By Kannadaprabha NewsFirst Published Mar 11, 2024, 12:04 PM IST
Highlights

 ಮೈಸೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಹುಣಸೂರು ನಗರದ‌ ಬೈಪಾಸ್‌ ರಸ್ತೆಯ ದೇವರಾಜ ಅರಸು ಪ್ರತಿಮೆಯಿಂದ ನಾಲ್ಕು ಪಥದ ರಸ್ತೆ ಮತ್ತು ಲಕ್ಷ್ಮಣತೀರ್ಥ ನದಿಯ ಸೇತುವೆ ನಿರ್ಮಾಣ ಮಾಡಲು ಕೇಂದ್ರ ಸರ್ಕಾರದಿಂದ 86 ಕೋಟಿ ರು. ವೆಚ್ಚದಲ್ಲಿ ಸಂಸದ ಪ್ರತಾಪ್ ಸಿಂಹ ಮತ್ತು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಮಂಜೂರು ಮಾಡಿಸಿ  ಚಾಲನೆ ನೀಡಿರುವುದಕ್ಕೆ ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ. ಹರೀಶ್‌ ಗೌಡ ಸಂತಸ ವ್ಯಕ್ತಪಡಿಸಿದ್ದಾರೆ.

 ಮೈಸೂರು : ಮೈಸೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಹುಣಸೂರು ನಗರದ‌ ಬೈಪಾಸ್‌ ರಸ್ತೆಯ ದೇವರಾಜ ಅರಸು ಪ್ರತಿಮೆಯಿಂದ ನಾಲ್ಕು ಪಥದ ರಸ್ತೆ ಮತ್ತು ಲಕ್ಷ್ಮಣತೀರ್ಥ ನದಿಯ ಸೇತುವೆ ನಿರ್ಮಾಣ ಮಾಡಲು ಕೇಂದ್ರ ಸರ್ಕಾರದಿಂದ 86 ಕೋಟಿ ರು. ವೆಚ್ಚದಲ್ಲಿ ಸಂಸದ ಪ್ರತಾಪ್ ಸಿಂಹ ಮತ್ತು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಮಂಜೂರು ಮಾಡಿಸಿ  ಚಾಲನೆ ನೀಡಿರುವುದಕ್ಕೆ ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ. ಹರೀಶ್‌ ಗೌಡ ಸಂತಸ ವ್ಯಕ್ತಪಡಿಸಿದ್ದಾರೆ.

ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ 86 ಕೋಟಿ ರು. ವೆಚ್ಚದ ರಾಷ್ಟ್ರೀಯ ಹೆದ್ದಾರಿಯ

ಕಾಮಗಾರಿಗಳಿಗೆ ಕೇಂದ್ರ ಸಚಿವ ಮತ್ತು ಇನ್ನಿತರ ಜನಪ್ರತಿನಿಧಿಗಳ ಜೊತೆಯಲ್ಲಿ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಹುಣಸೂರು ಬೈಪಾಸ್‌ ರಸ್ತೆಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿನಿತ್ಯ ಬಹಳಷ್ಟು ವರ್ಷಗಳಿಂದ ಆಪಘಾತಗಳು, ಅವಘಡಗಳು ನಿರಂತರವಾಗಿ ನಡೆಯುತ್ತಿರುವ ಬಗ್ಗೆ ವರದಿಗಳು ಬಂದಿವೆ ಹಾಗೂ ಸಾರ್ವಜನಿಕರಿಂದ ಆಹವಾಲುಗಳು ಕೂಡ ನೀಡಿದ್ದರು. ಈ ಸಂಬಂಧವಾಗಿ ನಾನು ಶಾಸಕನಾದ ಬಳಿಕ ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಮನವಿ ಸಲ್ಲಿಸಿದ್ದೆ, ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿ ಹುಣಸೂರು ಬೈಪಾಸ್ ಇನ್ನು ಮುಂದೆ ನಾಲ್ಕು ಲೇನ್ ಹೈವೆ ಡಿ. ದೇವರಾಜ್ ಅರಸ್ ಪ್ರತಿಮೆಯಿಂದ ಆರಂಭವಾಗುವ ಬೈಪಾಸ್‌ ರಸ್ತೆಯಲ್ಲಿ ದಟ್ಟಣೆಯಿಂದ ಗೊಂದಲದ ಗೂಡಾಗಿದ್ದು, ಅದನ್ನು 4 ಲೇನ್ ಮಾಡಲು ಹಾಗೂ ಲಕ್ಷಣತೀರ್ಥ ನದಿಗೆ ಕಟ್ಟಲಾಗಿರುವ ಸೇತುವೆ ಶಿಥಿಲಗೊಂಡಿರುವುದರಿಂದ ಹೊಸ ಸೇತುವೆ ನಿರ್ಮಾಣ ಮಾಡಲು 86 ಕೋಟಿ ರು. ಮಂಜೂರು ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಕಾಮಗಾರಿಗಳಿಗೆ ಅಗತ್ಯ ಹಣ ಬಿಡುಗಡೆ ಮಾಡಿ, ಶಂಕು ಸ್ಥಾಪನೆ ನೆರವೇರಿಸಿದ ಕೇಂದ್ರ ರಸ್ತೆ ಸಾರಿಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಸಂಸದ ಪ್ರತಾಪ್ ಸಿಂಹ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.

- ಜಿ.ಡಿ. ಹರೀಶ್ ಗೌಡ, ಶಾಸಕರು, ಹುಣಸೂರು ವಿಧಾನಸಭಾ ಕ್ಷೇತ್ರ.

ಹುಣಸೂರು ಬೈಪಾಸ್‌ ರಸ್ತೆಯಲ್ಲಿ ಅಪಘಾತಗಳು ನಡೆಯುತ್ತಿರುವ ಬಗ್ಗೆ ಶಾಸಕ ಜಿ.ಡಿ. ಹರೀಶ್‌ಗೌಡ ಅವರು ನನ್ನ ಗಮನ ಸೆಳೆದು ನಾಲ್ಕು ಪಥದ ರಸ್ತೆ ಮತ್ತು ಲಕ್ಷ್ಮಣ ತೀರ್ಥ ನದಿಯ ಸೇತುವೆ ದುರಸ್ಥಿಯಾಗಿದ್ದು, ಹೊಸ ಸೇತುವೆ ನಿರ್ಮಿಸುವ ಬಗ್ಗೆ ಮನವಿ ಮಾಡಿದ್ದರು. ಇದನ್ನು ಕೇಂದ್ರ ಸಚಿವ ನಿತಿನ್‌ಗಡ್ಕರಿ ಅವರಿಗೆ ಮನವಿ ನೀಡಿದ್ದೇ, ಇದನ್ನು ಪರಿಗಣಿಸಿದ ಅನುಮೋದನೆ ನೀಡಿದ ಪಿ.ಎಂ. ಮೋದಿ ಮತ್ತು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

- ಪ್ರತಾಪ್‌ಸಿಂಹ, ಸಂಸದರು

click me!