ದಾವಣಗೆರೆಗೂ ತಟ್ಟಿದ ಜಿಂದಾಲ್‌ ಸೋಂಕು, 8 ಹೊಸ ಕೇಸ್‌

By Suvarna News  |  First Published Jun 25, 2020, 11:35 AM IST

ಬೆಣ್ಣೆ ನಗರ ದಾವಣಗೆರೆಗೆ ಇದೀಗ ಜಿಂದಾಲ್ ಬಿಸಿ ತಟ್ಟಲಾರಂಭಿಸಿದೆ. ಜಿಂದಾಲ್ ಸಂಪರ್ಕ ಹೊಂದಿದ್ದ ಜಿಲ್ಲೆಯ 8 ಮಂದಿಗೆ ಕೋವಿಡ್ 19 ಸೋಂಕು ತಗುಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ದಾವಣಗೆರೆ(ಜೂ.25): ಜಿಂದಾಲ್‌ನಿಂದ ಮರಳಿದ್ದ ಮಹಿಳೆ, ಮೂವರು ಮಕ್ಕಳೂ ಸೇರಿದಂತೆ ದಾವಣಗೆರೆಯಲ್ಲಿ 8 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿನಿಂದ ಗುಣಮುಖರಾದ ಒಬ್ಬರು ಬಿಡುಗಡೆಯಾಗುವುದರೊಂದಿಗೆ ಸೋಂಕಿತರ ಸಂಖ್ಯೆ ಮತ್ತೆ 41ಕ್ಕೆ ಏರಿಕೆಯಾಗಿದೆ.

ಇಲ್ಲಿನ ಆಜಾದ್‌ ನಗರದ 35 ವರ್ಷದ ಮಹಿಳೆ(ಪಿ-9889) ಎಂಬುವರಿಗೆ 54 ವರ್ಷದ ಮಹಿಳೆ(8492)ಯಿಂದ ಸೋಂಕು ತಗುಲಿದೆ. ಹರಿಹರದ ಶಿವಮೊಗ್ಗ ರಸ್ತೆಯ 24 ವರ್ಷದ ಯುವಕ(ಪಿ-9890)ನಿಗೆ ಗರ್ಭಿಣಿ(8065)ರಿಂದ, ಚನ್ನಗಿರಿಯ ಗೌಡರ ಬೀದಿಯ 14 ವರ್ಷದ ಬಾಲಕ(9891)ನಿಗೆ 47 ವರ್ಷದ ವ್ಯಕ್ತಿ(8806)ರಿಂದ ಸೋಂಕು ಬಂದಿದೆ.

Tap to resize

Latest Videos

ಬೆಂಗಳೂರಿಗೆ ಹೋಗಿ ಬಂದಿದ್ದ ಹರಿಹರದ ಎಕೆ ಕಾಲನಿಯ 34 ವರ್ಷದ ವ್ಯಕ್ತಿ(9892)ಗೆ ಸೋಂಕು ಕಂಡು ಬಂದಿದೆ. ಬಳ್ಳಾರಿ ಜಿಲ್ಲೆ ಜಿಂದಾಲ್‌ ನಿಂದ ಬಂದಿದ್ದ ಹರಿಹರ ಎಕೆ ಕಾಲನಿಯ 35 ವರ್ಷದ ಮಹಿಳೆ(9893), ಹೊನ್ನಾಳಿ ತಾ. ಹತ್ತೂರು ಗ್ರಾಮದ 10 ವರ್ಷದ ಬಾಲಕ(9894)ನಲ್ಲಿ ಸೋಂಕು ದೃಢಪಟ್ಟಿದ್ದು, ಐಎಲ್‌ಐ ಕೇಸ್‌ನಡಿ ಸೋಂಕು ಪತ್ತೆಯಾಗಿದ್ದು, ಈ ಬಾಲಕ ಬೆಂಗಳೂರಿನಿಂದ ಬಂದವನು. ಚಿಕ್ಕಮಗಳೂರು ವೃದ್ಧೆ(7778)ಯಿಂದ ಚನ್ನಗಿರಿ ಪಟ್ಟಣದ ಕುಂಬಾರ ಬೀದಿಯ ವಾಸಿಗಳಾದ 11 ವರ್ಷದ ಬಾಲಕ(9895), 39 ವರ್ಷದ ವ್ಯಕ್ತಿ(9896)ಗೆ ಸೋಂಕು ತಗುಲಿದೆ.

COVID19ನಿಂದ ಮೃತ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಹಾರೆ ಹಿಡಿದು ಗುಂಡಿ ತೋಡಿದ ಶಾಸಕ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆವರಗೊಳ್ಳದ 20 ವರ್ಷದ ಮಹಿಳೆ(ಪಿ-7577) ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಒಟ್ಟು 275 ಕೊರೋನಾ ಕೇಸ್‌ ದೃಢಪಟ್ಟಿವೆ. ಈ ಪೈಕಿ 7 ಜನ ಸಾವನ್ನಪ್ಪಿದ್ದರೆ, 227 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು 41 ಸಕ್ರಿಯ ಕೇಸ್‌ಗಳಿದ್ದು, ಸೋಂಕಿತರಿಗೆ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
 

click me!