ಮಲ್ಪೆ: ಡಿ.13ರಂದು ಮೀನುಗಾರಿಕೆಗೆ ತೆರಳಿದ್ದವರು ನಾಪತ್ತೆ, ಆತಂಕದಲ್ಲಿ ಕುಟುಂಬಸ್ಥರು

By Web Desk  |  First Published Dec 23, 2018, 9:39 PM IST

ಉಡುಪಿಯ ಮಲ್ಪೆ ಬಂದುರಿನಿಂದ ಮೀನುಗಾರಿಕೆಗೆ ತೆರಳಿದ್ದ 8 ಜನ ಮೀನುಗಾರರು ನಾಪತ್ತೆಯಾಗಿದ್ದಾರೆ. ಡಿ. 15ರ ಬಳಿಕ ಇದರುವರೆಗೂ ಸಂಪರ್ಕಕ್ಕೆ ಸಿಕ್ಕಿಲ್ಲ.


ಉಡುಪಿ, [ಡಿ. 23]: ಉಡುಪಿಯ ಮಲ್ಪೆ ಬಂದುರಿನಿಂದ ಮೀನುಗಾರಿಕೆಗೆ ತೆರಳಿದ್ದ 8 ಜನ ಮೀನುಗಾರರು ಬೊಟ್ ಸಮೇತ ನಾಪತ್ತೆಯಾಗಿದ್ದಾರೆ.

ಬೋಟ್ ಮಾಲಿಕ ಚಂದ್ರ ಶೇಖರ, ಮೀನುಗಾರರಾದ ದಾಮೋದರ, ಲಕ್ಷ್ಮಣ್, ಸತೀಶ್, ರವಿ, ಹರೀಶ್, ರಮೇಶ್, ಜೋಗಯ್ಯ ನಾಪತ್ತೆಯಾದ ಮೀನುಗಾರರು.

Latest Videos

undefined

ಸುವರ್ಣ ತ್ರಿಭುಜ ಎಂಬ ಮೀನುಗಾರಿಕಾ ಬೋಟಿನಿಂದ ಡಿಸೆಂಬರ್ 13ರಂದು ರಾತ್ರಿ 11ರ ಸುಮಾರಿಗೆ ಮಲ್ಪೆ ಬಂದುರಿನಿಂದ ಆಳ ಸಮುದ್ರಕ್ಕೆ ತೆರಳಿದ್ದು, ಡಿ. 15ರ ರಾತ್ರಿ 1 ಗಂಟೆ ವರೆಗೆ ಸಂಪರ್ಕದಲ್ಲಿದ್ದರು. 

ಆದ್ರೆ ನಂತರ ಅವರೆಲ್ಲ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಾರೆ. ಇದ್ರಿಂದ ಅವರ ಕುಟುಂಬದವರಲ್ಲಿ ಆತಂಕ ಮೂಡಿಸಿದೆ.

ಇನ್ನು ನಾಪತ್ತೆಯಾದವರನ್ನು ಪತ್ತೆಹಚ್ಚಲು ಕರಾವಳಿ ಕಾವಲು ಪಡೆ ಪ್ರಯತ್ನ ನಡೆಸಿದ್ದು, ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರು ಬಗ್ಗೆ ಪ್ರಕರಣ ದಾಖಲಾಗಿದೆ.

click me!