ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ತೀವ್ರ ವಿವಾದದ ನಡುವೆಯೂ ಹಠಕ್ಕೆ ಬಿದ್ದು ಟಿಪ್ಪು ಜಯಂತಿ ಆಚರಣೆ ಜಾರಿಗೆ ತಂದರು. ಇದಕ್ಕೆ ರಾಜ್ಯದಲ್ಲಿ ಭಾರೀ ಪರ ವಿರೋಧಗಳು ವ್ಯಕ್ತವಾಗಿದ್ದವು. ಇದೀಗ ಅದೇ ಕಾಂಗ್ರೆಸ್ ಮಾಜಿ ಸಚಿವರೊಬ್ಬರು ಟಿಪ್ಪು ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದಕ್ಕೆ ಬಾರಿ ವಿವಾದ ವ್ಯಕ್ತವಾಗುತ್ತಿದೆ.
ಉಡುಪಿ, (ಡಿ. 17): ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಟಿಪ್ಪು ಜಯಂತಿ ಬಗ್ಗೆ ಆಡಿರುವ ಮಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿವಾದದ ಕಿಚ್ಚು ಹತ್ತಿಸಿದೆ.
ಉಡುಪಿ ಜಿಲ್ಲೆಯ ಪೇತ್ರಿ ಸೈಂಟ್ ಪೀಟರ್ಸ್ ಚರ್ಚ್ ನ ಸುವರ್ಣ ಮಹೋತ್ಸವದಲ್ಲಿ ಮಾತನಾಡುವ ವೇಳೆ ‘ಚರ್ಚ್ ನಾಶ ಮಾಡಿದ ಟಿಪ್ಪುವಿನ ಜಯಂತಿಯಲ್ಲಿ ನಾನು ಭಾಗವಹಿಸದಂತೆ ದೇವರೇ ಮಾಡಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ.
undefined
ಶಿಕಾರಿಪುರದಲ್ಲೇ ಟಿಪ್ಪು ಗುಣಗಾನ ಮಾಡಿದ ಬಿಎಸ್‌ವೈ ಕಟ್ಟಾ ಬೆಂಬಲಿಗ.. ವಿಡಿಯೋ ವೈರಲ್
ಸದ್ಯ ಅವರ ಈ ಹೇಳಿಕೆ ಮುಸ್ಲೀಂ ಗ್ರೂಪ್ ಗಳಲ್ಲಿ ಬಿಸಿ-ಬಿಸಿ ಚರ್ಚೆ ಹುಟ್ಟು ಹಾಕಿದೆ. ಪೇತ್ರಿ ಚರ್ಚ್ ನ್ನು ಟಿಪ್ಪುವಿನ ಸೈನ್ಯ ಸಂಪೂರ್ಣ ನಾಶಮಾಡಿತ್ತು ಅನ್ನೋದು ಇಲ್ಲಿನ ಇತಿಹಾಸ.
ನಮ್ಮ ಸರ್ಕಾರ ಇದ್ದಾಗ ಸರಿಯೋ ತಪ್ಪೋ ಗೊತ್ತಿಲ್ಲ ಟಿಪ್ಪು ಜಯಂತಿ ಆಚರಣೆ ಮಾಡಿತ್ತು. ಆ ಸಂದರ್ಭದಲ್ಲಿ ನನಗೆ ಯಾವುದೇ ಟಿಪ್ಪು ಜಯಂತಿಯಲ್ಲಿ ಭಾಗವಹಿಸುವ ಅವಕಾಶ ಸಿಗಲಿಲ್ಲ.
ಈ ಚರ್ಚ್ ನ್ನು ಟಿಪ್ಪು ನಾಶ ಮಾಡಿದ ಕಾರಣಕ್ಕೆ ದೇವರು ನನಗೆ ಅಲ್ಲಿ ಹೋಗದ ಹಾಗೆ ಮಾಡಿದ್ದಾರೆ ಎಂದು ಪ್ರಮೋದ್ ಹೇಳಿದ್ದಾರೆ.
ಕಾಂಗ್ರೇಸ್ ಸರ್ಕಾರ ಆಡಳಿತ ಇದ್ದಾಗ ನಡೆದ ಮೂರು ಟಿಪ್ಪು ಜಯಂತಿಯಲ್ಲೂ ಪ್ರಮೋದ್ ಭಾಗವಹಿಸಿರಲಿಲ್ಲ. ಅವರ ಸಾಫ್ಟ್ ಹಿಂದುತ್ವ ಕೆಲವರ ಆಕ್ಷೇಪಕ್ಕೂ ಕಾರಣವಾಗಿತ್ತು.