ಚಿಕ್ಕಮಗಳೂರು : ಒಂದೇ ಹಳ್ಳಿಯಲ್ಲಿ ಒಂದೇ ದಿನ 74 ಮಂದಿಗೆ ಸೋಂಕು

By Kannadaprabha News  |  First Published May 15, 2021, 7:19 AM IST
  • ಕಳಸಾಪುರ ಗ್ರಾಮದಲ್ಲಿ ಒಟ್ಟು 74 ಕೊರೋನಾ ಪಾಸಿಟಿವ್‌ ಪ್ರಕರಣಗಳು  ಪತ್ತೆ
  • ಚಿಕ್ಕಮಗಳೂರು ತಾಲೂಕುವೊಂದರಲ್ಲೇ 22 ಹಳ್ಳಿಗಳಲ್ಲಿ ಒಟ್ಟು 1131 ಪ್ರಕರಣಗಳು ಈವರೆಗೆ ಪತ್ತೆ
  • ಕಳಸಾಪುರದಲ್ಲಿ ಗ್ರಾಮದಲ್ಲಿ 74 ಜನರಿಗೆ ಕೋವಿಡ್‌ ಬಂದಿರುವ ಮೂಲವನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ

ಚಿಕ್ಕಮಗಳೂರು (ಮೇ.15): ಶುಕ್ರವಾರ ಒಂದೇ ದಿನ ತಾಲೂಕಿನ ಕಳಸಾಪುರ ಗ್ರಾಮದಲ್ಲಿ ಒಟ್ಟು 74 ಕೊರೋನಾ ಪಾಸಿಟಿವ್‌ ಪ್ರಕರಣಗಳು  ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.

 ಗುರುವಾರ ಇದೇ ತಾಲೂಕಿನ ಕೋಡಿಹಳ್ಳಿಯಲ್ಲಿ 24 ಪ್ರಕರಣಗಳು ಪತ್ತೆಯಾಗಿದ್ದವು. ಹೀಗೆ ಪ್ರತಿದಿನ ಒಂದಲ್ಲಾ ಒಂದು ಗ್ರಾಮದಲ್ಲಿ ಹೆಚ್ಚೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಚಿಕ್ಕಮಗಳೂರು ತಾಲೂಕುವೊಂದರಲ್ಲೇ 22 ಹಳ್ಳಿಗಳಲ್ಲಿ ಒಟ್ಟು 1131 ಪ್ರಕರಣಗಳು ಈವರೆಗೆ ಪತ್ತೆಯಾಗಿವೆ. 

Latest Videos

undefined

ಗಂಡನ ಸಾವಿನ ಸುದ್ದಿ ಕೇಳಿ ಹೆಂಡತಿಯೂ ಸಾವು : ಅನಾಥನಾದ ಮಗ .

ಕಳಸಾಪುರದಲ್ಲಿ ಗ್ರಾಮದಲ್ಲಿ 74 ಜನರಿಗೆ ಕೋವಿಡ್‌ ಬಂದಿರುವ ಮೂಲವನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಇಲ್ಲಿನ ಹಲವು ಮಂದಿ ವ್ಯಾಪಾರಕ್ಕಾಗಿ ಪಟ್ಟಣಕ್ಕೆ ಹೋಗುತ್ತಿದ್ದು, ಅವರಿಂದ ಸೋಂಕು ಹರಡಿರಬಹುದೆಂದು ಅಂದಾಜು ಮಾಡಲಾಗಿದೆ. 

ತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಲ್ಲೂ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿದ್ದು, ಅಂತಹವರನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುವ ಕಾರ್ಯವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಮಾಡುತ್ತಿದ್ದಾರೆ.

click me!