ಔಷಧಿಗಾಗಿ 16 ಕಿ.ಮೀ. ನಡೆದು ಬಂದ 70ರ ಅಜ್ಜಿ !

Kannadaprabha News   | Asianet News
Published : Apr 11, 2020, 07:57 AM IST
ಔಷಧಿಗಾಗಿ 16 ಕಿ.ಮೀ. ನಡೆದು ಬಂದ 70ರ ಅಜ್ಜಿ !

ಸಾರಾಂಶ

ಸುಳ್ಯದ ಕಲ್ಮಕಾರಿನ ಪನ್ನೆ ಬಳಿಯ ಸುಮಾರು 70 ವರ್ಷ ಪ್ರಾಯದ ಅಜ್ಜಿಯೊಬ್ಬರು ಔಷಧಿ ತರಲೆಂದು 16 ಕಿ.ಮೀ ನಡೆದು ಗುತ್ತಿಗಾರಿಗೆ ಬಂದ ಘಟನೆ ಶುಕ್ರವಾರ ನಡೆದಿದೆ.  

ಮಂಗಳೂರು(ಏ.11): ಸುಳ್ಯದ ಕಲ್ಮಕಾರಿನ ಪನ್ನೆ ಬಳಿಯ ಸುಮಾರು 70 ವರ್ಷ ಪ್ರಾಯದ ಅಜ್ಜಿಯೊಬ್ಬರು ಔಷಧಿ ತರಲೆಂದು 16 ಕಿ.ಮೀ ನಡೆದು ಗುತ್ತಿಗಾರಿಗೆ ಬಂದ ಘಟನೆ ಶುಕ್ರವಾರ ನಡೆದಿದೆ.

ಕಲ್ಮಕಾರಿನ ಗಂಗಮ್ಮ ಎನ್ನುವ ಅಜ್ಜಿಯೊಬ್ಬರು ಔಷಧಿಗಾಗಿ ಗುತ್ತಿಗಾರಿಗೆ ನಡೆದುಕೊಂಡೇ ಬಂದಿದ್ದಾರೆ. ಗುತ್ತಿಗಾರು ಕೃಷ್ಣ ಕ್ಲಿನಿಕ್‌ಗೆ ಬಂದು ಔಷಧಿಗಳನ್ನು ಪಡೆದು ಕೊಂಡಿದ್ದಾರೆ. ಬಳಿಕ ಪನ್ನೆಗೆ ಹೊರಟಿದ್ದಾರೆ.

ಮರುವಾಯಿ ಮೀನು ಹಿಡಿದ ಯುವಕರ 11 ಬೈಕ್ ಜಪ್ತಿ

ಈ ವೇಳೆ ಗುತ್ತಿಗಾರು ಪೇಟೆಯಲ್ಲಿ ಅಜ್ಜಿ ಗ್ರಾ.ಪಂ. ಅಧ್ಯಕ್ಷ ಅಚ್ಚುತ ಗುತ್ತಿಗಾರು ಕೊರೋನಾ ಕಾರ್ಯಪಡೆಯ ಕಣ್ಣಿಗೆ ಬಿದ್ದಿದ್ದಾರೆ. ಗುತ್ತಿಗಾರಿನ ಕಾರ್ಯಪಡೆ ಅಜ್ಜಿಯನ್ನು ವಿಚಾರಿಸಿ ಆಟೋ ಗೊತ್ತುಪಡಿಸಿ ಪನ್ನೆಯ ಮನೆಗೆ ಕಳುಹಿಸಿದ್ದಾರೆ.

PREV
click me!

Recommended Stories

ಅಡಿಕೆ ತೋಟದ ದುರಂತ: ಗೊನೆ ಕೊಯ್ಯುವಾಗ ಆಯತಪ್ಪಿ ಬಿದ್ದ ಕಾರ್ಮಿಕ ಸಾವು
'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!