Kolar : ಎಪಿಎಂಸಿ ಮಾರುಕಟ್ಟೆಸ್ಥಾಪನೆಗೆ 70 ಲಕ್ಷ ಮೀಸಲು

By Kannadaprabha NewsFirst Published Jan 6, 2023, 6:32 AM IST
Highlights

ಯಾವುದೇ ಶೂರಿಟಿ ಇಲ್ಲದೆ ರೈತರಿಗೆ, ಸ್ತ್ರೀ ಶಕ್ತಿ ಸಂಘಗಳಿಗೆ ಬಡ್ಡಿ ರಹಿತ ಸಾಲವನ್ನು ಡಿಸಿಸಿ ಬ್ಯಾಂಕ್‌ ಮೂಲಕ ಸ್ಥಳೀಯ ಸೊಸೈಟಿಗಳ ಆಶ್ರಯದಲ್ಲಿ ನೀಡಲಾಗುತ್ತಿದ್ದು, ಪ್ರತಿಯೊಬ್ಬರೂ ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದು ಶಾಸಕಿ ಎಂ.ರೂಪಕಲಾ ಹೇಳಿದರು.

 ಬೇತಮಂಗಲ (ಜ. 06):  ಯಾವುದೇ ಶೂರಿಟಿ ಇಲ್ಲದೆ ರೈತರಿಗೆ, ಸ್ತ್ರೀ ಶಕ್ತಿ ಸಂಘಗಳಿಗೆ ಬಡ್ಡಿ ರಹಿತ ಸಾಲವನ್ನು ಡಿಸಿಸಿ ಬ್ಯಾಂಕ್‌ ಮೂಲಕ ಸ್ಥಳೀಯ ಸೊಸೈಟಿಗಳ ಆಶ್ರಯದಲ್ಲಿ ನೀಡಲಾಗುತ್ತಿದ್ದು, ಪ್ರತಿಯೊಬ್ಬರೂ ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದು ಶಾಸಕಿ ಎಂ.ರೂಪಕಲಾ ಹೇಳಿದರು.

ಪಟ್ಟಣದ ಬಳಿಯ ಸುಂದರಪಾಳ್ಯ ಸೊಸೈಟಿಯಲ್ಲಿಮತ್ತು ಸ್ತ್ರೀ ಶಕ್ತಿ ಸಂಘಗಳಿಗೆ 2.96 ಕೋಟಿ ರು. ಸಾಲವನ್ನು ಗಳ ಮೂಲಕ ವಿತರಿಸಿ ಮಾತನಾಡಿದರು.

ಹಿಂದೆ ಸೊಸೈಟಿಗಳು ದಿವಾಳಿಯಾಗಿ ಕೇವಲ ಪಡಿತರ ವಿತರಣೆಯ ಕೇಂದ್ರಗಳಾಗಿದ್ದವು, ನಂತರ ಸೊಸೈಟಿಗಳಿಗೆ ಜೀವ ನೀಡಿ, ದೇಶದ ಬೆನ್ನುಲುಬು ರೈತರಿಗೆ ನೆರವಾಗಲು ಕೋಟ್ಯಾಂತರ ರು.ಗಳ ಸಾಲ ನೀಡಲಾಗುತ್ತಿದೆ. ಮಹಿಳೆಯರು ಸ್ವಯಂ ಉದ್ಯೋಗ ಕಲ್ಪಿಸಿಕೊಂಡು ಸ್ವಾವಲಂಭಿಗಳಾಗಿ ಜೀವನ ನಡೆಸಲು ಶೂನ್ಯ ದರದಲ್ಲಿ ಸಾಲ ವಿತರಿಸಿ ಸಹಕಾರ ನೀಡಲಾಗುತ್ತಿದೆ ಎಂದು ಹೇಳಿದರು.

ರೈತರು ವಂಚಕರಲ್ಲ ಅವರು ಅನ್ನದಾತರು. ಅವರ ಬೆಳೆಗಳಿಗೆ ಸೂಕ್ತ ಬೆಲೆಯಿಲ್ಲ ಆದ್ದರಿಂದ ಅತಿ ಶೀಘ್ರದಲ್ಲೇ ವಿದೇಶಗಳಿಗೆ ಇಲ್ಲಿನ ಸರಕುಗಳನ್ನು ಸಾಗಿಸುವಂತಾಗಬೇಕು, ರೈತರಿಗೆ ಉತ್ತಮ ಲಾಭ ದೊರೆಯಬೇಕು ಎಂಬ ಉದ್ಧೇಶದಿಂದ ಆಂಧ್ರ ಗಡಿ ಭಾಗದಲ್ಲಿ 25 ಎಕರೆ ಪ್ರದೇಶದಲ್ಲಿ ಎಪಿಎಂಸಿ ಮಾರುಕಟ್ಟೆಗೆ ಜಾಗ ಗುರುತಿಸಿ ಕಟ್ಟಡ ನಿರ್ಮಿಸಲು 70 ಲಕ್ಷ ರು., ಮೀಸಲಿಟ್ಟಿದ್ದೇವೆ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರದಲ್ಲಿ ಈ ಸೊಸೈಟಿಗೆ ಒಳಪಡುವ ರಾಮಸಾಗರ, ಸುಂದರಪಾಳ್ಯ, ವೆಂಗಸಂದ್ರ, ಎನ್‌.ಜಿ ಹುಲ್ಕೂರು ಗ್ರಾಪಂಗಳ ರೈತರ 3 ಕೋಟಿ ಸಾಲ ಮನ್ನಾ ಆಗಿದೆ. ಇಂದು 25 ಸ್ತ್ರೀ ಶಕ್ತಿ ಸಂಘಗಳು, 194 ರೈತರಿಗೆ 2.96 ಕೋಟಿ ರೂ. ಸಾಲ ನೀಡಲಾಗಿದೆ ಎಂದರು.

ಜನರ ಸೇವೆ ಮತ್ತು ಅಭಿವೃದ್ಧಿ ವಿಚಾರದಲ್ಲಿ ಪಕ್ಷಾತೀತವಾಗಿ, ಜ್ಯಾತ್ಯಾತೀತವಾಗಿ ಪಕ್ಷ-ಬೇಧ ಮರೆತು ಜನಪರ ಆಡಳಿತಕ್ಕಾಗಿ ಸಹಕಾರ ನೀಡಿದರೆ ಮಾತ್ರ ಕ್ಷೇತ್ರವು ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ತಾವೂ ಶಾಸಕರ ಜತೆ ಇದ್ದರೆ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಸಹಕಾರ ನೀಡುತ್ತೇವೆ ಎಂದು ಸೊಸೈಟಿ ಅಧ್ಯಕ್ಷ ಮುನಿಸ್ವಾಮಿ ರೆಡ್ಡಿ ಹೇಳಿದರು.

ಕ್ಯಾಸಂಬಳ್ಳಿ ಸೊಸೈಟಿ ಅಧ್ಯಕ್ಷ ವಿಜಯರಾಘವ ರೆಡ್ಡಿ, ಸುಂದರಪಾಳ್ಯ ಗ್ರಾಪಂ ಅಧ್ಯಕ್ಷ ರಾಂ ಬಾಬು, ವೆಂಗಸಂದ್ರ ಅಧ್ಯಕ್ಷ ಶಂಕರ್‌, ಮುಖಂಡರಾದ ಅಪ್ಪಾಜಿಗೌಡ, ಪದ್ಮನಾಭ ರೆಡ್ಡಿ, ಚೆನ್ನಕೇಶವ ರೆಡ್ಡಿ, ಸುವರ್ಣಹಳ್ಳಿ ಕೃಷ್ಣಮೂರ್ತಿ, ಮಾಜಿ ತಾಪಂ ಸದಸ್ಯ ಜಯರಾಮ ರೆಡ್ಡಿ, ವೆಂಕಟ್ರಾಮ್‌, ಸೀನಪ್ಪ, ಚಂದ್ರಕಾಂತ್‌, ಜಗನ್ನಾಥ ರೆಡ್ಡಿ, ಎಂಬಿಎ ಕೃಷ್ಣಪ್ಪ , ಸೊಸೈಟಿ ಸಿಬ್ಬಂದಿ ಶಶಿ, ಸಂತೋಷ್‌ ಇದ್ದರು.

ರಾಗಿ ರೈತರಿಗೆ ದೋಖಾ

ಬೆಂಗಳೂರು (ಜ.05): ಬಡ ರೈತರಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟಕ್ಕೆ ಅವಕಾಶ ಕಲ್ಪಿಸಿ ನೆರವಾಗಬೇಕಿದ್ದ ಅಧಿಕಾರಿಗಳೇ ವರ್ತಕರೊಂದಿಗೆ ಸೇರಿ ಪಹಣಿ ಗೋಲ್ಮಾಲ್‌ ನಡೆಸಿ ಅಮಾಯಕ ರೈತರನ್ನು ವಂಚಿಸುತ್ತಿದ್ದಾರೆ ಎಂದು ರಾಜ್ಯದ ಸಣ್ಣ ರೈತರು ಆರೋಪಿಸಿದ್ದು, ಈ ಬಗ್ಗೆ ಕೃಷಿ ಇಲಾಖೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಹಳ್ಳಿಯೊಂದರ ರೈತ ಮಹಿಳೆಯೊಬ್ಬರು ತಮ್ಮ ಜಮೀನಿನ ಸರ್ವೇ ಸಂಖ್ಯೆ 41ರಲ್ಲಿ ಬೆಳೆದಿದ್ದ ರಾಗಿಯನ್ನು ಖರೀದಿ ಕೇಂದ್ರಕ್ಕೆ ಮಾರಾಟ ಮಾಡಲು ಎಫ್‌ಐಡಿ (ಫ್ರೂಟ್ಸ್‌ ಐಡಿ) ಪಡೆಯಲು ಹೋಗಿದ್ದಾರೆ. 

ಆದರೆ ಅವರ ಜಮೀನಿನ ಪಹಣಿ ಬೇರೊಬ್ಬರ ಎಫ್‌ಐಡಿಗೆ ಲಿಂಕ್‌ ಆಗಿರುವುದು ಬೆಳಕಿಗೆ ಬಂದು ಕೃಷಿ ಇಲಾಖೆಗೆ ದೂರು ನೀಡಿದ್ದಾರೆ. ರಾಜ್ಯದ ಹಲವೆಡೆ ಈ ರೀತಿಯ ಪ್ರಕರಣಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದಿವೆ. ಮುಗ್ಧರು, ವಿಧವೆಯರನ್ನೇ ಗುರಿ ಮಾಡಿಕೊಂಡು ನಡೆಸಲಾಗುತ್ತಿರುವ ಈ ಭ್ರಷ್ಟಾಚಾರದಲ್ಲಿ ವರ್ತಕರ ಜೊತೆ ಸೈಬರ್‌ ಸೆಂಟರ್‌ನವರು, ಸಾಮಾನ್ಯ ಸೇವಾ ಕೇಂದ್ರ(ಸಿಎಸ್‌ಸಿ) ಸಿಬ್ಬಂದಿ, ಕೃಷಿ, ತೋಟಗಾರಿಕೆ, ಕಂದಾಯ ಮತ್ತಿತರ ಇಲಾಖೆಯ ಕೆಳ ಹಂತದ ಅಧಿಕಾರಿಗಳು ಕೈಜೋಡಿಸಿರುವ ಶಂಕೆ ವ್ಯಕ್ತವಾಗಿದೆ. ಕಳೆದ ವರ್ಷವೂ ಈ ದಂಧೆ ಎಗ್ಗಿಲ್ಲದೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಮೋದಿ ಎದುರಿಗೆ ಸಿಎಂ ಬೊಮ್ಮಾಯಿ ನಾಯಿಮರಿ: ಸಿದ್ದು ಹೇಳಿಕೆ, ಬಿಜೆಪಿ ಕಿಡಿ

ರಾಗಿ ಮಾರಾಟ ಮಾಡಲು ಎಫ್‌ಐಡಿ ತೆಗೆದುಕೊಳ್ಳಲು ಹೋದರೆ, ‘ನಿಮ್ಮ ಪಹಣಿ ಬೇರೆಯವರ ಎಫ್‌ಐಡಿಗೆ ಲಿಂಕ್‌ ಆಗಿದೆ. ನಿಮ್ಮ ರಾಗಿ ಮಾರಾಟಕ್ಕೆ ಅವಕಾಶವಿಲ್ಲ’ ಎಂದು ಹೇಳಿ ಹಿಂದಕ್ಕೆ ಕಳುಹಿಸಲಾಗುತ್ತಿದೆ. ಪರಿಣಾಮ ಬಡ ರೈತರು ತಾವು ಬೆಳೆದ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಮಾರಲಾಗದೆ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ. ರೈತರ ಪಹಣಿಗಳಿಗೆ ‘ಫ್ರೂಟ್ಸ್‌’ (ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ) ತಂತ್ರಾಂಶದಲ್ಲಿ ನಕಲಿ ಎಫ್‌ಐಡಿ ಸೃಷ್ಟಿಸಿ ಹಣ ದೋಚಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಏನಿದು ಹಗರಣ?: ಖರೀದಿ ಕೇಂದ್ರಗಳಲ್ಲಿ ದೊಡ್ಡ ರೈತರಿಗೆ ರಾಗಿ ಮಾರಲು ಅವಕಾಶವಿಲ್ಲ. ಸಣ್ಣ ರೈತರಿಗೆ ಮಾತ್ರ 20 ಕ್ವಿಂಟಲ್‌ವರೆಗೂ ರಾಗಿ ಮಾರಾಟದ ಅವಕಾಶವಿದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ ರಾಗಿಗೆ 2000 ರು. ದರ ಇದ್ದರೆ, ಖರೀದಿ ಕೇಂದ್ರಗಳಲ್ಲಿ 3,578 ರು. ನೀಡಲಾಗುತ್ತದೆ. ಈ ಹಣ ನೇರವಾಗಿ ರೈತರ ಬ್ಯಾಂಕ್‌ ಖಾತೆಗೆ ಸಂದಾಯವಾಗುತ್ತದೆ. ಹೀಗಾಗಿ ದೊಡ್ಡ ರೈತರಿಂದ ರಾಗಿ ಖರೀದಿಸುವ ವ್ಯಾಪಾರಿಗಳು, ಅದನ್ನು ಸಣ್ಣ ರೈತರ ಹೆಸರಿನಲ್ಲಿ ಮಾರಾಟ ಮಾಡಲು ನಕಲಿ ದಾಖಲೆ ಸೃಷ್ಟಿಸುತ್ತಿದ್ದು, ಇದರಲ್ಲಿ ಅಧಿಕಾರಿ ವರ್ಗವೂ ಪಾಲ್ಗೊಂಡಿದೆ. ತನ್ಮೂಲಕ ರಾಗಿ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿ ಭಾರೀ ಹಣ ಸಂಪಾದಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

click me!