ಶನಿವಾರದ ಶಾಕ್, ಕರ್ನಾಟಕ  2798 ಕೇಸ್, ಬೆಂಗಳೂರು ಅಬ್ಬಬ್ಬಾ!

Published : Jul 11, 2020, 09:24 PM IST
ಶನಿವಾರದ ಶಾಕ್, ಕರ್ನಾಟಕ  2798 ಕೇಸ್, ಬೆಂಗಳೂರು ಅಬ್ಬಬ್ಬಾ!

ಸಾರಾಂಶ

ಶನಿವಾರ ಸಹ ಕೊರೋನಾ ದಾಖಲೆ/ ರಾಜ್ಯದಲ್ಲಿ ಒಟ್ಟು 2798  ಪ್ರಕರಣಗಳು/ ಬೆಂಗಳೂರಿನಲ್ಲಿ 1533 ಜನರಲ್ಲಿ ಸೋಂಕು ದೃಢ/ ಲಾಕ್ ಡೌನ್ ಹೆಜ್ಜೆ ಇಟ್ಟ ಸರ್ಕಾರ

ಬೆಂಗಳೂರು, (ಜು.10): ರಾಜ್ಯದಲ್ಲಿ ಕೋವಿಡ್ ಕಂಟಕ ಮುಂದುವರಿದಿದೆ. ಇಂದು (ಶನಿವಾರ)  ರಾಜ್ಯದಲ್ಲಿ 2798 ಜನರಿಗೆ ಕೋವಿಡ್ 19 ಸೋಕು ದೃಢವಾಗಿದ್ದು ಬೆಂಗಳೂರಿನ ಲೆಕ್ಕ 1533.

ಇಂದಿನ ಹೊಸ 2798 ಸೋಂಕು ಪ್ರಕರಣಗಳಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 36, 216ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 70 ಮಂದಿ ಕೊರೋನಾ ಮಾಹಾಮಾರಿಗೆ ಬಲಿಯಾಗಿದ್ದು, ರಾಜ್ಯದಲ್ಲಿ ಸಾವಿನ ಸಂಖ್ಯೆ 613 ಕ್ಕೇರಿದೆ. 

ಒಂದು ವಾರ ಕಾಲ ಕಂಪ್ಲೀಟ್ ಲಾಕ್‌ಡೌನ್; ಸರ್ಕಾರದ ಅಧಿಕೃತ ಆದೇಶ

ಇನ್ನು ರಾಜ್ಯದಲ್ಲಿ ಚೇತರಿಕೆಯ ಪ್ರಮಾಣ ಕೂಡ ಉತ್ತಮವಾಗಿದ್ದು, ಶನಿವಾರ 880 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 504 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲಾವಾರು ಶನಿವಾರದ ಲೆಕ್ಕ
ಬೆಂಗಳೂರು ನಗರ 1533, ದಕ್ಷಿಣ ಕನ್ನಡ 186, ಉಡುಪಿ 90, ಮೈಸೂರು 83 , ತುಮಕೂರು 78, ಧಾರವಾಡ 77, ಯಾದಗಿರಿ74, ದಾವಣಗೆರೆ 72 , ಕಲಬುರಗಿ 65 , ಬಳ್ಳಾರಿ 65, ಬೀದರ್, 63, ವಿಜಯಪುರ 48, ಉತ್ತರ ಕನ್ನಡ 40, ಗದಗ 40, ಬಾಗಲಕೋಟೆ 37, ಹಾಸನ 34, ರಾಮನಗರ 30, ಶಿವಮೊಗ್ಗ 26, ಮಂಡ್ಯ 23, ಕೊಪ್ಪಳ 23, ಚಿಕ್ಕಬಳ್ಳಾಪುರ 20, ಚಾಮರಾಜನಗರ 17, ಹಾವೇರಿ 16, ರಾಯಚೂರು 14, ಕೋಲಾರ 12, ಕೊಡಗು12,  ಚಿತ್ರದುರ್ಗ 9, ಬೆಂಗಳೂರು ಗ್ರಾಮಾಂತರ 5, ಬೆಳಗಾವಿ 3, ಚಿಕ್ಕಮಗಳೂರು  3 ಪಾಸಿಟಿವ್ ಕೇಸುಗಳು ಬಂದಿವೆ.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC