Davanagere Road Accident: ಜಗಳೂರು ಬಳಿ ಭೀಕರ ಅಪಘಾತ: 7 ಮಂದಿ ಸಾವು

Suvarna News   | Asianet News
Published : Jan 14, 2022, 07:49 AM ISTUpdated : Jan 14, 2022, 09:33 AM IST
Davanagere Road Accident: ಜಗಳೂರು ಬಳಿ ಭೀಕರ ಅಪಘಾತ: 7 ಮಂದಿ ಸಾವು

ಸಾರಾಂಶ

*  ಭೀಕರ ರಸ್ತೆ ದುರಂತ ಏಳು ಜನರ ಸಾವು *  ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕಾನನಕಟ್ಟೆ ಗ್ರಾಮದ ಬಳಿ ನಡೆದ ಘಟನೆ *  ಬೆಂಗಳೂರಿನಿಂದ ಹೊಸಪೇಟೆಗೆ ಸಂಚರಿಸುತ್ತಿದ್ದ ಇನ್ನೋವಾ ಕಾರು  

ದಾವಣಗೆರೆ(ಜ.14):  ರಾಜ್ಯದಲ್ಲಿ(Karnataka) ಮಕರ ಸಂಕ್ರಾಂತಿ(Makar Sankranti) ಹಬ್ಬದ ದಿನದಂದೇ ಜವರಾಯ ತನ್ನ ಅಟ್ಟಹಾಸ ಮೆರೆದಿದ್ದಾನೆ. ಹೌದು, ಇಂಡಿಕಾ ಕಾರೊಂದು(Innova Car) ರೋಡ್‌ ಡಿವೈಡರ್‌ಗೆ ಡಿಕ್ಕಿ(Collision) ಹೊಡೆದ ಪರಿಣಾಮ ಏಳು ಜನ ಸಾವನ್ನಪ್ಪಿದ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಕಾನನಕಟ್ಟೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ  ಇಂದು(ಶುಕ್ರವಾರ) ಬೆಳಗಿನ ಜಾವ 4 ಗಂಟೆ ಸುಮಾರಿಗೆ ನಡೆದಿದೆ.  

"

ದುರ್ಘಟನೆಯಲ್ಲಿ ಮೃತಪಟ್ಟವರೆಲ್ಲರೂ(Death) ಪುರುಷರಾಗಿದ್ದು ಗುರುತು ಪತ್ತೆಯಾಗಿಲ್ಲ. ಸಾವನ್ನಪ್ಪಿದರೆಲ್ಲರೂ ಯಾದಗಿರಿ(Yadgir) ಜಿಲ್ಲೆಯ ಶಾಹಾಪುರ ನಿವಾಸಿಗಳಾಗಿದ್ದು ಬೆಂಗಳೂರಿನಿಂದ(Bengaluru) ಹೊಸಪೇಟೆ(Hosapete) ಕಡೆ ಹೋಗುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. 

Bengaluru Accident: 2 ಕಾರು, ಬೈಕ್‌ ಮೇಲೆ ಲಾರಿ ಪಲ್ಟಿ: 6 ಜನರ ಸಾವು

ಇಂಡಿಕಾ ಕಾರು ರೋಡ್‌ ಡಿವೈಡರ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಆರು ಜನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಓರ್ವ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ದಾವಣಗೆರೆ ಎಸ್ಪಿ ಸಿಬಿ ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಸಲಾಗುತ್ತಿದೆ.

 

PREV
Read more Articles on
click me!

Recommended Stories

ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌