ಚಾಮರಾಜನಗರ (ಜು.18): ಮಾರುತಿ ಓಮ್ನಿ ಹರಿದು ಏಳು ಕುರಿಗಳು ಸಾವಿಗೀಡಾಗಿದ್ದು, ಆರು ಕುರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೋಕಿನ ಹೊನ್ನೇಮರದ ದೊಡ್ಡಿಯಲ್ಲಿಂದು ಘಟನೆ ನಡೆದಿದೆ.
ಚಾಲಕನ ಅಜಾಗರುಕತೆ ಹಾಗು ಅತಿವೇಗದ ಚಾಲನೆಯಿಂದಾಗಿ ಈ ದುರ್ಘಟನೆ ಸಂಭವಿಸಿದೆ.
ಸೋಲಾರ್ ವಿದ್ಯುತ್ ಸ್ಪರ್ಷಿಸಿ ಕಾಡಾನೆ ಮರಿ ಸಾವು
ಕುರಿಗಳು ಸಾಗುತ್ತಿದ್ದ ವೇಳೆ ಕುರಿ ಮಂದೆ ಮೇಲೆ ಮಾರುತಿ ಓಮ್ನಿ ಕಾರು ಹರಿದಿದೆ. ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಮಾರುತಿ ಓಮ್ನಿ ಅತ್ಯಂತ ವೇಗವಾಗಿ ಕುರಿಗಳ ಮೇಲೆ ಹರಿದು ಸಾವನ್ನಪ್ಪಿವೆ.
ವಾಹನ ಮಾಲೀಕನಿಂದ ಕುರಿಗಳ ಮಾಲೀಕನಿಗೆ 40 ಸಾವಿರ ರು. ಪರಿಹಾರ ನೀಡಲಾಗಿದೆ.