23 ಸಾವಿರ ಮೀನುಗಾರರಿಗೆ 60 ಕೋಟಿ ರು. ಸಾಲಮನ್ನಾ ಬಿಡುಗಡೆ: ಕೋಟ

By Kannadaprabha News  |  First Published Apr 25, 2020, 7:39 AM IST

ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಮೀನುಗಾರರ ಸಾಲಮನ್ನಾ ಯೋಜನೆಯಡಿ 23 ಸಾವಿರ ಜನ ಫಲಾನುಭವಿಗಳಿಗೆ 60 ಕೋಟಿ ರು.ಗಳನ್ನು ಹಣಕಾಸು ಇಲಾಖೆ ಶುಕ್ರವಾರ ಬಿಡುಗಡೆ ಮಾಡಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.


ಉಡುಪಿ(ಏ.25): ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಮೀನುಗಾರರ ಸಾಲಮನ್ನಾ ಯೋಜನೆಯಡಿ 23 ಸಾವಿರ ಜನ ಫಲಾನುಭವಿಗಳಿಗೆ 60 ಕೋಟಿ ರು.ಗಳನ್ನು ಹಣಕಾಸು ಇಲಾಖೆ ಶುಕ್ರವಾರ ಬಿಡುಗಡೆ ಮಾಡಿದೆ, ಈ ಹಣವನ್ನು ಸಾಲಗಾರರ ಖಾತೆಗೆ ಜಮೆ ಮಾಡಲು ತುರ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊರೋನದ ಸಂಕಷ್ಟದ ದಿನಗಳಲ್ಲಿಯೂ ಮೀನುಗಾರರ ಹಿತರಕ್ಷಣೆಗಾಗಿ ಹಣ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ ರಾಜ್ಯದ ಸಮಸ್ತ ಮೀನುಗಾರರ ಪರವಾಗಿ ಸಚಿವ ಕೋಟ ಅವರು ಕೃತಜ್ಞತೆಗಳನ್ನು ತಿಳಿಸಿದ್ದಾರೆ.

Latest Videos

undefined

ಯಶ್ಪಾಲ್‌ ಸುವರ್ಣ ಸ್ವಾಗತ

ಕೊರೊನಾ ಮಹಾಮಾರಿಯಿಂದ ತೀವ್ರ ಸಂಕಷ್ಟದಲ್ಲಿರುವ ಮೀನುಗಾರರಿಗೆ ರಾಜ್ಯ ಸರ್ಕಾರ ಸಕಾಲದಲ್ಲಿ ಸಾಲಮನ್ನಾದ ಮೊತ್ತವನ್ನು ಬಿಡುಗಡೆಗೊಳಿಸಿದ್ದಕ್ಕೆ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್‌ ಅಧ್ಯಕ್ಷ ಯಶ್ಪಾಲ್‌ ಸುವರ್ಣ ಅಭಿನಂದನೆ ಸಲ್ಲಿಸಿದ್ದಾರೆ.

ಲಾಕ್ ಡೌನ್ ಇನ್ನೊಂದು ಮುಖ; ಆಹಾರ ಸಿಗದೇ ಪ್ರಾಣಿಗಳ ಪರದಾಟ

ಇದಕ್ಕೆ ಕಾರಣಕರ್ತರಾದ ಮುಖ್ಯಮಂತ್ರಿ ಯಡಿಯೂರಪ್ಪ, ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿಯ ಸಂಸದರಿಗೆ, ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಮತ್ತು ಎಲ್ಲ ಶಾಸಕರಿಗೆ ಯಶ್ಪಾಲ್‌ ಕೃತಜ್ಞತೆ ಸಲ್ಲಿಸಿದ್ದಾರೆ.

click me!