ಬೆಳಗಾವಿಯಿಂದ ಉತ್ತರ ಕನ್ನಡ ಜಿಲ್ಲೆಗೆ ಬಂತು 6 ಸಾವಿರ ಕೋವಿಶೀಲ್ಡ್ ಲಸಿಕೆ

By Govindaraj SFirst Published Jan 17, 2023, 3:00 AM IST
Highlights

ಜಿಲ್ಲೆಯಲ್ಲಿ ಕಳೆದ 6 ತಿಂಗಳಿನಿಂದ ಸರಕಾರಿ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ ಲಭ್ಯವಾಗಿರಲಿಲ್ಲ. ಜನರು ಆಸ್ಪತ್ರೆಗೆ ತೆರಳಿ ಡೋಸ್ ಕೇಳಿದರೂ ಬೂಸ್ಟರ್ ಡೋಸ್ ದೊರಕುತ್ತಿರಲಿಲ್ಲ. ಆದರೆ, ಇದೀಗ ಸುಮಾರು 6 ಸಾವಿರ ಬೂಸ್ಟರ್ ಡೋಸ್‌ಗಳನ್ನು ತರಿಸಲಾಗಿದ್ದು, ಜನರು ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗೆ ತೆರಳಿ ಡೋಸ್‌ಗಳನ್ನು ಪಡೆಯಲು ಕೋರಲಾಗಿದೆ. 

ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ಜ.17): ಜಿಲ್ಲೆಯಲ್ಲಿ ಕಳೆದ 6 ತಿಂಗಳಿನಿಂದ ಸರಕಾರಿ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ ಲಭ್ಯವಾಗಿರಲಿಲ್ಲ. ಜನರು ಆಸ್ಪತ್ರೆಗೆ ತೆರಳಿ ಡೋಸ್ ಕೇಳಿದರೂ ಬೂಸ್ಟರ್ ಡೋಸ್ ದೊರಕುತ್ತಿರಲಿಲ್ಲ. ಆದರೆ, ಇದೀಗ ಸುಮಾರು 6 ಸಾವಿರ ಬೂಸ್ಟರ್ ಡೋಸ್‌ಗಳನ್ನು ತರಿಸಲಾಗಿದ್ದು, ಜನರು ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗೆ ತೆರಳಿ ಡೋಸ್‌ಗಳನ್ನು ಪಡೆಯಲು ಕೋರಲಾಗಿದೆ. ಹೌದು! ಉತ್ತರ ಕ‌ನ್ನಡ ಜಿಲ್ಲೆಯಲ್ಲಿ ಕಳೆದ 6 ತಿಂಗಳಿಂದ ಬೂಸ್ಟರ್ ಡೋಸ್‌ಗಳ ಕೊರತೆಯಿತ್ತು. ಕೊರೊನಾ ಕಾಟ ಎದುರಾದ ಸಂದರ್ಭದಲ್ಲಿ ಒಂದನೇ ಹಾಗೂ ಎರಡನೇ ಡೋಸ್‌ಗಳನ್ನು ಪಡೆದಿದ್ದರು. 

ಆರೋಗ್ಯ ಇಲಾಖೆ ಕೂಡಾ ಮೊದಲ ಡೋಸ್ 11 ಲಕ್ಷ ಜನರಿಗೆ ನೀಡುವ ಮೂಲಕ ಶೇ. 100ರಷ್ಟು ಸಾಧನೆ ಮಾಡಿತ್ತು. ಎರಡನೇ ಡೋಸ್ ಕೂಡಾ ಸುಮಾರು ಶೇ.95ರಿಂದ 97ರಷ್ಟು ಜನರಿಗೆ ನೀಡಲಾಗಿತ್ತು. ಆದರೆ, ಬೂಸ್ಟರ್ ಡೋಸ್ ಈವರೆಗೆ 11 ಲಕ್ಷ ಜನರ ಪೈಕಿ ಕೇವಲ 3 ಲಕ್ಷ ಜನರಿಗೆ ಮಾತ್ರ ನೀಡಲಾಗಿದೆ. ಜನರ ನಿರ್ಲಕ್ಷ್ಯವೂ ಇದಕ್ಕೆ ಪ್ರಮುಖ ಕಾರಣವಾಗಿದೆ. ಕೊರೊನಾ ಹೆಸರು ಕೇಳೋವಾಗ ಡೋಸ್ ಪಡೆದುಕೊಳ್ಳಲು ಜನರಿಗೆ ನೆನಪಾಗೋ ಕಾರಣ ಕಳೆದ 6 ತಿಂಗಳಿನಿಂದ ಜನರ ಬೇಡಿಕೆಯಿರದ ಆಸ್ಪತ್ರೆಗಳಲ್ಲೂ ಬೂಸ್ಟರ್ ಡೋಸ್‌ಗಳ ಕೊರತೆಯಿತ್ತು. ಆದರೆ, ಇದೀಗ ಮತ್ತೆ ಜನರು ಆಸ್ಪತ್ರೆಗಳಿಗೆ ಬಂದು ಡೋಸ್ ದೊರೆಯದೆ ಹಿಂತಿರುತ್ತಿದ್ದ ಕಾರಣ ಮತ್ತೆ ಆರೋಗ್ಯ ಇಲಾಖೆ ಮತ್ತೆ 6 ಸಾವಿರ ಡೋಸ್‌ಗಳನ್ನು ತರಿಸಿಕೊಂಡಿದೆ. 

ಸವದತ್ತಿ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಹೇಳಿಲ್ಲ: ಸತೀಶ್ ಜಾರಕಿಹೊಳಿ

ಅಲ್ಲದೇ, ಜನರು ಕೂಡಾ ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಿಗೆ ತೆರಳಿ ಡೋಸ್ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಕೋರಿದ್ದಾರೆ. ಬೂಸ್ಟರ್ ಪೂರೈಕೆ ಮಾಡುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲೆಗೆ ಆರೋಗ್ಯ ಇಲಾಖೆ 6 ಸಾವಿರ ಡೋಸ್ ಕೋವಿಶೀಲ್ಡ್ ವ್ಯಾಕ್ಸಿನ್‌ಗಳನ್ನು ಬೆಳಗಾವಿಯಿಂದ ತರಿಸಲಾಗಿದೆ. ಈವರೆಗೆ ಬೂಸ್ಟರ್ ಡೋಸ್ 3 ಲಕ್ಷ ಜನರಿಗೆ ಮಾತ್ರ ನೀಡಲಾಗಿದ್ದರಿಂದ ಜನರ ಬೇಡಿಕೆಯ ಅನುಗುಣವಾಗಿ ಎಲ್ಲೆಡೆ ನೀಡಲು ವ್ಯವಸ್ಥೆ ಮಾಡಲಾಗುತ್ತದೆ. ಕಳೆದ ಬಾರಿ ಮತ್ತೆ ಕೊರೊನಾ ವೇವ್ ವಿಚಾರ ಬಂದಾಗ ವ್ಯಾಕ್ಸಿನ್ ತರಿಸಲಾಗಿತ್ತು. ಆ ಬಳಿಕ ಮತ್ತೆ ಜನರು ವ್ಯಾಕ್ಸಿನ್ ಪಡೆಯೋದು ನಿಲ್ಲಿಸಿದ್ದರು. ಬೇಡಿಕೆ ಇರದ ಕಾರಣ ಸಾಕಷ್ಟು ಸಮಯಗಳಿಂದ ಜಿಲ್ಲೆಯಲ್ಲಿ ಡೋಸ್ ಸಂಗ್ರಹವೂ ಇರಲಿಲ್ಲ. 

ಕರ್ನಾಟಕದಲ್ಲಿ ಪ್ರಧಾನಿ ಮೋದಿ ಮ್ಯಾಜಿಕ್ ನಡೆಯಲ್ಲ: ಸತೀಶ್ ಜಾರಕಿಹೊಳಿ

ಇದೀಗ ಬೂಸ್ಟರ್ ಡೋಸ್ ಬಂದಿದ್ದು, ಎಲ್ಲರಿಗೂ ಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲೆಯ ಸರಕಾರಿ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ ವಿತರಣೆಗೆ ತಯಾರಿರಲಿದ್ದು, ಜನರು ಯಾವುದೇ ಸಮಯದಲ್ಲೂ ತೆರಳಿ ವ್ಯಾಕ್ಸಿನ್ ಪಡೆಯಬಹುದಾಗಿದೆ. ಒಟ್ಟಿನಲ್ಲಿ ಜನರನ್ನು ಕೊರೊನಾ ಕಾಟದಿಂದ ಸುರಕ್ಷಿತಗೊಳಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಮತ್ತೆ ಬೂಸ್ಟರ್ ಡೋಸ್ ತರಿಸಲಾಗಿದೆ. ಜನರು ನಿರ್ಲಕ್ಷ್ಯ ಮಾಡುವ ಬದಲು ಡೋಸ್‌ಗಳನ್ನು ಪಡೆದುಕೊಂಡು ಸೋಂಕಿನಿಂದ ತಮ್ಮನ್ನು ಹಾಗೂ ತಮ್ಮ ಕುಟುಂಬವನ್ನು ರಕ್ಷಿಸಬೇಕಿದೆ.

click me!