ಸಿದ್ದರಾಮಯ್ಯಗೆ ವಿರೋಧ : 6 ಕಾಂಗ್ರೆಸಿಗರ ಅಮಾನತು?

Kannadaprabha News   | Asianet News
Published : Mar 07, 2021, 07:42 AM IST
ಸಿದ್ದರಾಮಯ್ಯಗೆ ವಿರೋಧ : 6 ಕಾಂಗ್ರೆಸಿಗರ ಅಮಾನತು?

ಸಾರಾಂಶ

ಸಿದ್ದರಾಮಯ್ಯ ವಿರುದ್ಧವಾಗಿ ನಿಂತ 6 ಕಾಂಗ್ರೆಸ್ ಮುಖಂಡರನ್ನ ಇದೀಗ ಪಕ್ಷದಿಂದ ಅಮಾನತು ಮಾಡಲಾಗಿದೆ ಎನ್ನಲಾಗುತ್ತಿದೆ. 

ಮೈಸೂರು (ಮಾ.07): ಮೈಸೂರು ಮೇಯರ್‌ ಚುನಾವಣೆ ಮೈತ್ರಿ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ್ದ ಶಾಸಕ ತನ್ವೀರ್‌ ಸೇಠ್‌ ಬೆಂಬಲಿಗರು ಎನ್ನಲಾದ ಆರು ಮಂದಿಯನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎನ್ನಲಾಗಿದೆ. 

ಆದರೆ ಇದನ್ನು ನಗರಾಧ್ಯಕ್ಷ ಆರ್‌.ಮೂರ್ತಿ ಅವರು ನಿರಾಕರಿಸಿದ್ದಾರೆ. ಎನ್‌.ಆರ್‌.ಕ್ಷೇತ್ರದ ಶಾಹಿದ್‌, ಎಂ.ಎನ್‌.ಲೋಕೇಶ್‌, ಹಬೀಬ್‌, ಅಣ್ಣು ಸೇರಿ ಆರು ಮಂದಿಯನ್ನು ಅಮಾನತುಗೊಳಿಸಲಾಗಿದೆ ಎಂಬ ವದಂತಿ ಹರಿದಾಡುತ್ತಿದೆ. 

ರಾಸಲೀಲೆ ಸಿ.ಡಿ: ಕೋರ್ಟ್‌ ಮೊರೆ ಹೋದ ಮತ್ತೆ 6 ಸಚಿವರು, ಸರ್ಕಾರದ ವಿರುದ್ಧ ಸಿದ್ದು ಗುಡುಗು ..

ಆದರೆ ಆರ್‌.ಮೂರ್ತಿ ಸ್ಪಷ್ಟನೆ ನೀಡಿ, ಯಾರನ್ನೂ ಅಮಾನತು ಮಾಡಿಲ್ಲ ಎಂದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಮೇಯರ್‌ ಸ್ಥಾನವನ್ನು ಕಾಂಗ್ರೆಸ್‌ಗೆ ನೀಡಿದರೆ ಮಾತ್ರ ಮೈತ್ರಿ ಎಂದು ಆದೇಶಿಸಿದ್ದರು. 

ಆದರೆ, ಮೇಯರ್‌ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದಕ್ಕೆ ತನ್ವೀರ್‌ ವಿರುದ್ಧ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದರು. ಈ ಹಿನ್ನೆಲೆಯಲ್ಲಿ ತನ್ವೀರ್‌ ಬೆಂಬಲಿಗರು ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು.

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು