ಒಂದೇ ಕುಟುಂಬದ 6 ಮಂದಿ ಆತ್ಮಹತ್ಯೆ!

By Kannadaprabha News  |  First Published Jun 29, 2021, 7:57 AM IST
  • ನಾಲ್ವರು ಮಕ್ಕಳೊಂದಿಗೆ ಪತಿ ಮತ್ತು ಪತ್ನಿ ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆ 
  • ಖಾಸಗಿ ಸಾಲಬಾಧೆಯೇ ಇದಕ್ಕೆ ಕಾರಣ ಎನ್ನುವ ಶಂಕೆ
  • ಅನುಮಾನ ಹಿನ್ನೆಲೆಯಲ್ಲಿ ಪೊಲೀಸರಿಂದ ತನಿಖೆ 

 ಶಹಾಪುರ (ಜೂ.29):  ನಾಲ್ವರು ಮಕ್ಕಳೊಂದಿಗೆ ಪತಿ ಮತ್ತು ಪತ್ನಿ ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ತಾಲೂಕಿನ ದೋರನಹಳ್ಳಿಯಲ್ಲಿ ಭಾನುವಾರ ನಡೆದಿದೆ. ಖಾಸಗಿ ಸಾಲಬಾಧೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದ್ದರೂ ಅನುಮಾನಾಸ್ಪದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ.

ದೋರನಹಳ್ಳಿ ಗ್ರಾಮದ ಭೀಮರಾಯ ಸುರಪುರ(45), ಪತ್ನಿ ಶಾಂತಮ್ಮ(36), ಮಕ್ಕಳಾದ ಶ್ರೀದೇವಿ(13), ಸುಮಿತ್ರ (12) ಶಿವರಾಜ್‌ (9) ಹಾಗೂ ಲಕ್ಷ್ಮೀ (4) ಮೃತಪಟ್ಟವರು. ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ತಮ್ಮ ತಾಯಿ ಶರಣಮ್ಮನ ಹೆಸರಲ್ಲಿರುವ 7 ಎಕರೆ ಜಮೀನನಲ್ಲಿ ಶೆಡ್‌ ಕಟ್ಟಿಕೊಂಡು ಅಲ್ಲೇ ಉಳುಮೆ ಮಾಡಿಕೊಂಡು, ಹೊಲದಲ್ಲಿ ಸ್ವಂತ ಕೃಷಿ ಹೊಂಡ ನಿರ್ಮಿಸಿದ್ದರು. 

Tap to resize

Latest Videos

undefined

ಶಿರಸಿ: ಕೊರೋನಾಗೆ ಅಳಿಯ ಬಲಿ, ವಿಷ ಸೇವಿಸಿ ಮಾವ ಆತ್ಮಹತ್ಯೆ ...

ಅದೇ ಕೃಷಿ ಹೊಂಡದಲ್ಲಿ ಇವರ ಮೃತದೇಹಗಳು ಪತ್ತೆಯಾಗಿವೆ. ಭೀಮರಾಯನ ಹಿರಿಯ ಪುತ್ರಿ ಚಂದ್ರಕಲಾಗೆ ಎರಡು ತಿಂಗಳ ಮದುವೆ ಮಾಡಲಾಗಿತ್ತು. ಪತಿಯ ಮನೆಯಲ್ಲಿದ್ದ ಚಂದ್ರಕಲಾಗೆ ತಂದೆ-ತಾಯಿ ಹಾಗೂ ತಂಗಿಯಂದಿರ ದುರ್ಮರಣ ಭಾರಿ ಆಘಾತ ಮೂಡಿಸಿದೆ.

click me!