ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ: 6 ಮಂದಿ ದುರ್ಮರಣ

Published : Dec 04, 2018, 08:25 AM ISTUpdated : Dec 04, 2018, 08:31 AM IST
ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ: 6 ಮಂದಿ ದುರ್ಮರಣ

ಸಾರಾಂಶ

ಬೆಳ್ಳಂಬೆಳಗ್ಗೆ ಬೆಳಗಾವಿ ಜಿಲ್ಲೆಯಲ್ಲಿ ಕಾರು ಮತ್ತು ಲಾರಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. 

ಬೆಳಗಾವಿ, [ಡಿ.04]: ಲಾರಿ ಮತ್ತು  ಬೊಲೆರೋ ಕಾರು ನಡುವೆ ಡಿಕ್ಕಿಯಾಗಿ ಆರು ಮಂದಿ ಮೃತಪಟ್ಟ ದುರ್ಘಟನೆ ಇಂದು [ಮಂಗಳವಾರ] ಬೆಳಗ್ಗೆ ಬೆಳಗಾವಿ ಜಿಲ್ಲೆಯ ಗೋಕಾಕ್​ ತಾಲೂಕಿನ ಹೀರೆನಂದಿ ಗ್ರಾಮದಲ್ಲಿ ನಡೆದಿದೆ.

ಸಂಬಂಧಿಕರೋರ್ವರ ಅಂತ್ಯಕ್ರಿಯೆ ಮುಗಿಸಿ ವಾಪಸ್​ ಹೋಗುತ್ತಿದ್ದ ವೇಳೆ ಹಿರೇನಂದಿ ಗ್ರಾಮದ ಬಳಿ ಕಬ್ಬು ತುಂಬಿದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಪರಣಾಮ ಕಾರಿನಲ್ಲಿದ್ದ ಆರೂ ಮಂದಿ ಸಾವನ್ನಪ್ಪಿದ್ದಾರೆ. 

ಗೋಕಾಕ್​ ತಾಲೂಕಿನ ಯರಗವಿ ನಿವಾಸಿಗಳಾದ ಯಲ್ಲವ್ವ (60), ನೀಲವ್ವ (40), ಅನಸೂಯಾ ನಾಯ್ಕರ್​ (28), ಪಾರವ್ವಾ ಖಂಡ್ರಿ (30), ಭೀಮಸೇನಪ್ಪ ಪೂಜಾರಿ ( 28), ಮಹಾದೇವ (30)  ಮೃತಪಟ್ಟಿದ್ದು, 8 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಗೋಕಾಕ್​ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಕೂಲಿ ಕಾರ್ಮಿಕರ ಕೈಗೆ ಸಿಕ್ತು ಲಕ್ಷಾಂತರ ಮೌಲ್ಯದ ಚಿನ್ನದ ನಿಧಿ: ಮುಂದೇನಾಯ್ತು ಗೊತ್ತಾ?
ಕೋಟ್ಯಂತರ ರೂ. ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಮಾರಾಟ: ಬೆಳಗಾವಿಯ 80ರ ಕಿಲಾಡಿ ಅಜ್ಜಿ ಅಂದರ್​