ರಾಜಾಪುರ ಡ್ಯಾಮ್ ಹಾಗೂ ದೂದಗಂಗಾ ನದಿಯಲ್ಲಿ ನೀರಿನ ಪ್ರಮಾಣದಲ್ಲಿನ ಏರಿಕೆ| ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ| ಹಿಪ್ಪರಗಿ ಜಲಾಶಯಕ್ಕೆ ಶುಕ್ರವಾರ 55,800 ಕ್ಯುಸೆಕ್ ನೀರು ಹರಿದು ಬಂದಿದೆ|
ಬಾಗಲಕೋಟೆ(ಜೂ.20): ಮಹಾರಾಷ್ಟ್ರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ನದಿ ಪಾತ್ರದಲ್ಲಿ ನೀರಿನ ಸಂಗ್ರಹ ಹೆಚ್ಚಾಗುತ್ತಿದ್ದು, ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿಯೂ ಗಣನೀಯ ಏರಿಕೆ ಕಂಡಿದೆ.
ರಾಜಾಪುರ ಡ್ಯಾಮ್ ಹಾಗೂ ದೂದಗಂಗಾ ನದಿಯಲ್ಲಿ ನೀರಿನ ಪ್ರಮಾಣದಲ್ಲಿನ ಏರಿಕೆಯಿಂದ ಕೃಷ್ಣಾ ನದಿಯಲ್ಲಿ ಸಹಜವಾಗಿ ನೀರಿನ ಹರಿವು ಹೆಚ್ಚಾಗುತ್ತಿದ್ದು ಹಿಪ್ಪರಗಿ ಜಲಾಶಯಕ್ಕೆ ಶುಕ್ರವಾರ 55,800 ಕ್ಯುಸೆಕ್ ನೀರು ಹರಿದು ಬಂದಿದೆ.
ಬಾಗಲಕೋಟೆ: ನವ ವಿವಾಹಿತನಿಗೆ ಕೊರೋನಾ ದೃಢ: ಮದುವೆಗೆ ಬಂದಿದ್ದವರಲ್ಲಿ ಹೆಚ್ಚಿದ ಆತಂಕ
ಮಹಾರಾಷ್ಟ್ರದಿಂದ ಜಿಲ್ಲೆಯ ಕೃಷ್ಣಾ ನದಿಗೆ 63200 ಕ್ಯುಸೆಕ್ ನೀರು ಹರಿದು ಬಂದಿದ್ದು, ಹಿಪ್ಪರಗಿ ಜಲಾಶಯಕ್ಕೆ ಹರಿದು ಬಂದ ನೀರಿನ ಪ್ರಮಾಣದಷ್ಟೆನೀರನ್ನು ಹೊರಗೆ ಬಿಡಲಾಗುತ್ತಿರುವುದರಿಂದ ಜಮಖಂಡಿ, ತೇರದಾಳ, ರಬಕವಿ-ಬನಹಟ್ಟಿ ಸೇರಿದಂತೆ ಇತರ ನದಿ ತೀರದ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.