ಹೊಸ ವರ್ಷಕ್ಕೆ ರಾತ್ರಿ 2ರವರೆಗೆ ಮೆಟ್ರೋ ಸಂಚಾರ

By Kannadaprabha NewsFirst Published Dec 27, 2019, 8:22 AM IST
Highlights

ಬೆಂಗಳೂರಿನಲ್ಲಿ ಹೊಸ ವರ್ಷದಂದು ಮದ್ಯರಾತ್ರಿ 2 ಗಂಟೆಯವರೆಗೂ ಕೂಡ ಮೆಟ್ರೋ ರೈಲು ಸಂಚಾರ ಮಾಡಲಿದೆ. ಆದರೆ ಮದ್ಯಪಾನ ಮಾಡಿದವರಿಗೆ ರೈಲಿನಲ್ಲಿ ಸಂಚರಿಸಲು ಅವಕಾಶ ಇರುವುದಿಲ್ಲ 

ಬೆಂಗಳೂರು [ಡಿ.27]:  ಹೊಸ ವರ್ಷಾಚರಣೆ ವೇಳೆ ಡಿ.31ರ ಮಂಗಳವಾರ ತಡ ರಾತ್ರಿ ಎರಡು ಗಂಟೆಯವರೆಗೂ ಮೆಟ್ರೋ ರೈಲು ಸಂಚಾರವನ್ನು ವಿಸ್ತರಿಸುವ ಸಾಧ್ಯತೆಗಳಿವೆ.

ಹೊಸ ವರ್ಷಾಚರಣೆಗಾಗಿ ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್‌ ರಸ್ತೆಗೆ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಆಗಮಿಸಲಿದ್ದಾರೆ. ಇದರಿಂದ ಆರಾಮಾಗಿ ತಮ್ಮ ಮನೆಗಳಿಗೆ ತಲುಪಲು ಅವಕಾಶವಾಗುವಂತೆ ಮೆಟ್ರೋ ರೈಲು ಸಂಚಾರವನ್ನು ವಿಸ್ತರಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಮದ್ಯಪಾನಕ್ಕೆ ಅವಕಾಶವಿಲ್ಲ:

ಮೆಟ್ರೋ ರೈಲಿನಲ್ಲಿ ಮದ್ಯಪಾನ ಮಾಡಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ಇರುವುದಿಲ್ಲ. ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುವ ಇತರೆ ಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂಬ ಕಾರಣದಿಂದ ಮದ್ಯಪಾನ ಮಾಡುವ ಪ್ರಯಾಣಿಕರಿಗೆ ಅವಕಾಶ ಇಲ್ಲ ಎಂದು ಬಿಎಂಆರ್‌ಸಿಎಲ್‌ ನಿಯಮಗಳಲ್ಲಿ ತಿಳಿಸಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ನಿಯಮವನ್ನು ಡಿಸೆಂಬರ್‌ 31ರ ರಾತ್ರಿಯಿಂದ ಕಟ್ಟು ನಿಟ್ಟಾಗಿ ಜಾರಿಗೆ ಮುಂದಾಗಿದೆ. ಮದ್ಯಪಾನ ಮಾಡಿ ಸಹಪ್ರಯಾಣಿಕರಿಗೆ ತೊಂದರೆಯುಂಟು ಮಾಡಿದರೆ ಅಂತಹ ಪ್ರಯಾಣಿಕರನ್ನು ಹೊರಕ್ಕೆ ಕಳುಹಿಸಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ.

click me!