ತುಮಕೂರಲ್ಲಿ 50 ಸಾವಿರ ಮನೆಗಳಿಗೆ ಮಂತ್ರಾಕ್ಷತೆ ಹಂಚಿಕೆ

By Kannadaprabha News  |  First Published Jan 16, 2024, 10:35 AM IST

ಶ್ರೀರಾಮನ ಪ್ರತಿಷ್ಠಾಪನಾ ದಿನದ ಹಿನ್ನೆಲೆ ತುಮಕೂರು ಜಿಲ್ಲೆಯ 50 ಸಾವಿರ ಮನೆಗಳಿಗೆ ಅಕ್ಷತೆ ಹಂಚಲಾಗಿದೆ ಎಂದು ಸಂಸದ ಜಿ.ಎಸ್. ಬಸವರಾಜು ತಿಳಿಸಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಮನೆ ಮನೆಯಲ್ಲೂ 5 ದಿನ ದೀಪ ಹಚ್ಚಲಾಗುವುದು, ಕನಿಷ್ಠ 20 ಸಾವಿರ ಮನೆಯಲ್ಲಿ ದೀಪ ಬೆಳಗಲಾಗುವುದು ಎಂದರು.


  ತುಮಕೂರು :  ಶ್ರೀರಾಮನ ಪ್ರತಿಷ್ಠಾಪನಾ ದಿನದ ಹಿನ್ನೆಲೆ ತುಮಕೂರು ಜಿಲ್ಲೆಯ 50 ಸಾವಿರ ಮನೆಗಳಿಗೆ ಅಕ್ಷತೆ ಹಂಚಲಾಗಿದೆ ಎಂದು ಸಂಸದ ಜಿ.ಎಸ್. ಬಸವರಾಜು ತಿಳಿಸಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಮನೆ ಮನೆಯಲ್ಲೂ 5 ದಿನ ದೀಪ ಹಚ್ಚಲಾಗುವುದು, ಕನಿಷ್ಠ 20 ಸಾವಿರ ಮನೆಯಲ್ಲಿ ದೀಪ ಬೆಳಗಲಾಗುವುದು ಎಂದರು.

ಸಿದ್ದರಾಮಯ್ಯ ಅಯೋಧ್ಯೆಗೆ ಹೋಗುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗಳು ಯಾವಾಗ ಬೇಕಾದರೂ ಮಾತು ಬದಲಿಸುತ್ತಾರೆ. ಸಿದ್ದರಾಮಯ್ಯ ಹೆಸರಿನಲ್ಲಿ ರಾಮನ ಹೆಸರಿಟ್ಟುಕೊಂಡಿದ್ದಾರೆ. ರಾಜಕೀಯ ಗಿಮಿಕ್ ಹಾಗೂ ಅವರ ಪಕ್ಷಕ್ಕೆ ಚ್ಯುತಿ ಬಾರದಂತೆ ಮಾತನಾಡುತ್ತಾರೆ. ವೈಯಕ್ತಿಕವಾಗಿ ಸಿದ್ದರಾಮಯ್ಯ ಒಳ್ಳೆಯ ಮನುಷ್ಯ. ಅವರ ಪಕ್ಷದ ದೃಷ್ಟಿಯಿಂದ ಮಾತನಾಡಿದ್ದಾರೆ ಎಂದರು.

Tap to resize

Latest Videos

undefined

ಕಾರ್ಯಯಕ್ರಮದಿಂದ ಹೊರಗುಳಿಯುವ ಕಾಂಗ್ರೆಸ್ ಹೈ ಕಮಾಂಡ್ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ಅವರಲ್ಲೇ ಭಿನ್ನಾಭಿಪ್ರಾಯ ಬಂದಿದೆ. ಶ್ರೀರಾಮನು, ಯಾವ ಪಕ್ಷಕ್ಕೂ ಸೇರಿದವನಲ್ಲ, ರಾಮಾಯಾಣ, ಮಹಾಭಾರತ ನಮ್ಮ ದೇಶದ ಎರಡು ಕಣ್ಣು. ಇವುಗಳ ವಿರುದ್ಧ ಮಾತನಾಡಿದರೆ ನಮಗೆ ತೊಂದರೆಯಾಗುತ್ತದೆ ಎಂಬುದನ್ನು ಕಾಂಗ್ರೆಸ್ ನ ಹಿರಿಯ ಮುಖಂಡರೇ ನನ್ನ ಹತ್ತಿರ ಹೇಳಿದ್ದಾರೆ ಎಂದರು.

ಮುದ್ದಹನುಮೇಗೌಡ ಕಾಂಗ್ರೆಸ್ ನತ್ತ ಮುಖ ಮಾಡುವ ವಿಚಾರದ ಬಗ್ಗೆ ನಾನೇನು ಮಾತನಾಡುವುದಿಲ್ಲ. ಆತ ಒಳ್ಲೆಯ ಮನುಷ್ಯ, ಆಸೆ ಬುರುಕ ಎಂದರು.

ಪಕ್ಷದಲ್ಲಿ 10 ಜನರು ಆಕಾಂಕ್ಷಿಗಳಿದ್ದಾರೆ. ಯಾರಿಗೆ ಕೊಡುತ್ತಾರೆ ಎಂಬುದು ಗೊತ್ತಿಲ್ಲ, ಮಾಧುಸ್ವಾಮಿ ಒಬ್ಬರು ಆಕಾಂಕ್ಷಿ. ಮಾಧುಸ್ವಾಮಿಗೆ ಬೆಂಬಲ‌ ವಿಚಾರ‌ ಕಾದು ನೋಡಿ ಎಂದರು.

ನಾವು ಪಕ್ಷದ ಪರವಾಗಿ ಕೆಲಸ ಮಾಡಬೇಕು‌. ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಮಾಡುತ್ತೇವೆ. ವಿ. ಸೋಮಣ್ಣ ನಿನ್ನೆ ನನ್ನ ಜೊತೆಗೆ ಇದ್ದರು. ತುಮಕೂರಿನಲ್ಲಿ ನಿಂತರೆ ಹೇಗೆ ಅಂತ ಕೇಳಿದರು. ತುಮಕೂರು ಬಿಜೆಪಿ ಪರವಾಗಿದೆ. ಯಾರು ನಿಂತರೂ ಗೆಲ್ಲಬಹುದು. ಸೆಷನ್ ಸಂದರ್ಭದಲ್ಲಿ ಅಮಿತ್ ಶಾ ಅರ್ಧಗಂಟೆ ಸಮಯ ನೀಡಿದ್ದಾರೆ. ತುಮಕೂರು ವಿಚಾರವಾಗಿ 20 ನಿಮಿಷ ಮಾತನಾಡುವುದಾಗಿ ತಿಳಿಸಿದ್ದಾರೆ ಎಂದರು.

ತುಮಕೂರು ಜಿಲ್ಲೆಗೆ ರಕ್ತ ಕೊಟ್ಟರೂ ಕೊಡುತ್ತೇನೆ, ನೀರು ಕೊಡಲ್ಲ ಅಂತ ದೇವೇಗೌಡರು ಹೇಳಿದ್ದರು. ಅದೇ ಟ್ರಂಪ್ ಕಾರ್ಡ್ ಆಯ್ತು, ಅದನ್ನು ಗೌಡರ ಮನೆ ಬಾಗಿಲಿಗೆ ಅಂಟಿಸಿದೆ. ಓದ್ಕೊಂಡು ವೋಟ್ ಕೊಟ್ಟರು ಎಂದರು.

ಸೋಮಣ್ಣ ತುಮಕೂರಿಗೆ ಬಂದರೆ ನೂರಕ್ಕೆ ನೂರು ಗೆಲ್ಲುತ್ತಾರೆ, ಮಾಧುಸ್ವಾಮಿ ಬಗ್ಗೆ ಹೇಳುವುದಕ್ಕೆ ಆಗುವುದಿಲ್ಲ ಎಂದ ಅವರು, ತುಮಕೂರಿಗೆ ಶೋಭಾ ಕರಂದ್ಲಾಜೆ ಬಂದರೂ ಬರಬಹುದು. ದೇವೇಗೌಡರಿಗೆ ಅವರದ್ದೇ ಆದ ಶಕ್ತಿಯಿದೆ. ಅವರು ಚಾಣಾಕ್ಷರಿದ್ದಾರೆ. ದೇವೇಗೌಡರ ವಿರುದ್ಧ ವೈಯಕ್ತಿಕವಾಗಿ ಮಾತನಾಡಿಲ್ಲ ಎಂದರು.

ನರೇಂದ್ರ ಮೋದಿಯವರ ಮುಖ ನೋಡಿಕೊಂಡು ಒಂದು ಕತ್ತೆಯನ್ನು ನಿಲ್ಲಿಸಿದರೂ ವೋಟ್ ಹಾಕುತ್ತಾರೆ.ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್- ಬಿಜೆಪಿ ಎರಡು ಸೇರಿ ರಾಜ್ಯದಲ್ಲಿ 25 ಕ್ಷೇತ್ರಗಳನ್ನು ಗೆಲ್ಲಬಹುದು ಎಂದರು.

click me!