ತುಮಕೂರು ಗ್ರಾಮಾಂತರದ ಹೆಗ್ಗೆರೆ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಸುಮಾರು 500ಕ್ಕೂ ಹೆಚ್ಚು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಶಾಸಕ ಡಿ.ಸಿ.ಗೌರಿಶಂಕರ್ ಅವರ ನೇತೃತ್ವದಲ್ಲಿ ಜೆಡಿಎಸ್‌ಗೆ ಸೇರ್ಪಡೆಯಾದರು.
ತುಮಕೂರು : ತುಮಕೂರು ಗ್ರಾಮಾಂತರದ ಹೆಗ್ಗೆರೆ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಸುಮಾರು 500ಕ್ಕೂ ಹೆಚ್ಚು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಶಾಸಕ ಡಿ.ಸಿ.ಗೌರಿಶಂಕರ್ ಅವರ ನೇತೃತ್ವದಲ್ಲಿ ಜೆಡಿಎಸ್‌ಗೆ ಸೇರ್ಪಡೆಯಾದರು.
ತುಮಕೂರು ಗ್ರಾಮಾಂತರದ ಹೆಗ್ಗೆರೆ ಗ್ರಾಮದ ಮುಖಂಡರಾದ ಶೆಟ್ಟಪ್ಪನ ಪಾಳ್ಯದ ತಿಗಳ ಜನಾಂಗದ ಗ್ರಾಮ ಪಂಚಾಯತಿ ಸದಸ್ಯ ಎಚ್.ಕೆ. ಬಸವರಾಜು ಬಸವಣ್ಣ, ಚಿಕ್ಕಸಿದ್ದಯ್ಯ, ಶೆಟ್ಟಪ್ಪ, ಚಿಕ್ಕಣ್ಣ, ಕೆಂಪಣ್ಣ, ಸುರೇಶ್, ರಮೇಶ್, ಪುಟ್ಟರಾಜು, ಕೃಷ್ಣಮೂರ್ತಿ, ರವಿಕುಮಾರ್, ಸಿದ್ದರಾಜು, ಶ್ರೀನಿವಾಸ್, ಮಂಜುನಾಥ್, ರಾಜಣ್ಣ, ರಾಜು, ಪೇಪರ್ ವೆಂಕಟೇಶ್, ಅಭಿಷೇಕ್, ಜೆಸಿಬಿ ಮಂಜುನಾಥ್, ಆಟೋ ಮಂಜುನಾಥ್, ಪ್ರಸಾದ್, ಲೋಕೇಶ್, ದಿಲೀಪ್, ಶರತ್, ಸಚಿನ್, ಹನುಮಂತ ರಾಯಪ್ಪ, ನಾಗರಾಜು, ಆಂಜನಪ್ಪ, ಕಾಂಟ್ರಾಕ್ಟರ್ ಹನುಮಂತಪ್ಪ, ಕುಮಾರ್, ತ್ಯಾಗರಾಜು, ಯಶೋಧಮ್ಮ, ಶೋಭಾ, ರಾಧಾ, ಮಂಜುಳಾ, ತಾಯಮ್ಮ, ವೀರಶೈವ ಸಮಾಜದ ರುದ್ರಪ್ಪ, ವೈಷ್ಣವ ಸಮಾಜದ ಕೃಷ್ಣಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ರಾಜಶೇಖರಯ್ಯ, ಎಸ್‌ಟಿ ಜನಾಂಗದ ಗ್ರಾಮ ಪಂಚಾಯತಿ ಮಾಜಿ ಸದಸ್ಯ ನರಸಿಂಹಮೂರ್ತಿ, ವಿಶ್ವನಾಥ್, ಯೋಗ ನರಸಿಂಹ, ಯೋಗೇಶ್, ದೊಡ್ಡಯ್ಯ, ಹೊಸ ಬಡಾವಣೆಯ ರಾಜು ಮತ್ತು ಸ್ನೇಹಿತರು, ಮುಸ್ಲಿಂ ಯುವಕ ಜುನೇದ್ ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಜನ ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಹೆಗ್ಗೆರೆ ಜಿಲ್ಲಾ ಪಂಚಾಯಿತಿ ಜೆಡಿಎಸ್ ಉಸ್ತುವಾರಿ ಹಾಲನೂರು ಅನಂತ್‌ಕುಮಾರ್, ಕುಮಾರ್, ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಅಜಾಂ ಪಾಷಾ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಜೈ ಕೀರ್ತಿ, ವಿಶಾಲ ರೇವಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಮುಖಂಡರು ಇದ್ದರು.
JDS ಅಲ್ಪ ಸಂಖ್ಯಾತರ ಸಮಾವೇಶ
ತುಮಕೂರು : ಜಿಲ್ಲೆಯಲ್ಲಿ March 12 ರಿಂದ 20ವರೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಪ್ರವಾಸ ಕೈಗೊಂಡು, ಅಲ್ಪಸಂಖ್ಯಾತರ ಸಮಾವೇಶ ನಡೆಸುವ ಹಿನ್ನೆಲೆಯಲ್ಲಿ ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ತನ್ವೀರ್ ಅವರ ನೇತೃತ್ವದಲ್ಲಿ ಸಭೆ ನಡೆಯಿತು.
ಜಿಲ್ಲಾಅಧ್ಯಕ್ಷ ಆರ್.ಸಿ.ಆಂಜನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಚ್‌ರ್ 12 ರಿಂದ 20ರವರೆಗೆ ನಡೆಯುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರ ಜಿಲ್ಲಾ ಪ್ರವಾಸದ ಜೊತೆಗೆ, ವಿವಿಧ ತಾಲೂಕುಗಳ ಪದಾಧಿಕಾರಿಗಳ ನೇಮಕ ಪತ್ರ ವಿತರಣೆ ಕಾರ್ಯಕ್ರಮವನ್ನು ಸಹ ಇದೇ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಆರ್.ಸಿ.ಆಂಜನಪ್ಪ, ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸೂಚನೆಯಂತೆ ರಾಜ್ಯಾಧ್ಯಕ್ಷರಾದ ಸಿ.ಎಂ.ಇಬ್ರಾಹಿಂ ಅವರು ಹೆಚ್ಚಿನ ಒತ್ತು ನೀಡಿದ್ದಾರೆ. ಹಾಗಾಗಿಯೇ ಮಾಚ್‌ರ್ 12 ರಿಂದ 20ವರೆಗೆ ತುಮಕೂರು ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡಿ, ಅಲ್ಪಸಂಖ್ಯಾತ ಮತದಾರರನ್ನು ಸಂಘಟಿಸಲಿದ್ದಾರೆ ಎಂದರು.
ಮಾಚ್‌ರ್ 12 ರಂದು ತುಮಕೂರು ನಗರ ಮತ್ತು ಗ್ರಾಮಾಂತರ, ಮಾಚ್‌ರ್ 13ರಂದು ಕುಣಿಗಲ್ ಮತ್ತು ಮಧುಗಿರಿ, ಮಾ.14 ರಂದು ತುರುವೇಕೆರೆ ಮತ್ತು ಚಿಕ್ಕನಾಯಕನಹಳ್ಳಿ, ಮಾಚ್‌ರ್ 19ರಂದು ತಿಪಟೂರು ಮತ್ತು ಶಿರಾ ಹಾಗೂ ಮಾಚ್‌ರ್ 20 ರಂದು ಗುಬ್ಬಿ ಮತ್ತು ಕೊರಟಗೆರೆಯಲ್ಲಿ ಅಲ್ಪಸಂಖ್ಯಾತ ಮತದಾರರ ಸಮಾವೇಶ ನಡೆಯಲಿದೆ. ಇದರ ಜೊತೆಗೆ ಮಾಚ್‌ರ್ 08ರಂದು ತಿಪಟೂರಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರ ಸಹ ಆಗಮಿಸಲಿದೆ. ಇದರಿಂದ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಸಾಧಿಸಲು ಬೇಕಾದ ಎಲ್ಲಾ ತಯಾರಿಯನ್ನು ನಮ್ಮ ನಾಯಕರು ಮಾಡಿದ್ದಾರೆ ಎಂದು ಆರ್.ಸಿ.ಆಂಜನಪ್ಪ ತಿಳಿಸಿದರು.
ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ತನ್ವೀರ್ ಮಾತನಾಡಿ, ನಮ್ಮ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರ ಸಮಾವೇಶ ನಡೆಸಲು ಆಯಾಯ ತಾಲೂಕು ಅಧ್ಯಕ್ಷರಿಗೆ ಜವಾಬ್ದಾರಿ ನೀಡಲಾಗಿದೆ. ಅಲ್ಲದೆ ಹಲವಾರು ಪದಾಧಿಕಾರಿಗಳನ್ನು ನೇಮಕ ಮಾಡಿ, ಅವರಿಗೆ ಸಮ್ಮೇಳನಗಳ ಯಶಸ್ವಿಗೆ ದುಡಿಯುವಂತೆ ಮನವಿ ಮಾಡಲಾಗಿದೆ. ಎಲ್ಲರೂ ಒಗ್ಗೂಡಿ ಈ ಬಾರಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವಂತೆ ಮಾಡಲು ಶ್ರಮಿಸುವುದಾಗಿ ತಿಳಿಸಿದರು.