ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. 10 ಜಿಲ್ಲೆಗಳಿಂದ ಈಗಾಗಲೇ ಸಾವಿರಾರು ಪೊಲೀಸರು ಕರಾವಳಿಗೆ ತಲುಪಿದ್ದಾರೆ.
ಮಂಗಳೂರು(ಜ.15): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. 10 ಜಿಲ್ಲೆಗಳಿಂದ ಈಗಾಗಲೇ ಸಾವಿರಾರು ಪೊಲೀಸರು ಕರಾವಳಿಗೆ ತಲುಪಿದ್ದಾರೆ.
undefined
1 ಎಡಿಜಿಪಿ, 1 ಐಜಿಪಿ, 11 ಎಸ್ಪಿ, 18 ಎಎಸ್ಪಿ, 100 ಜನ ಡಿವೈಎಸ್ಪಿ, 300 ಜನ ಇನ್ಸ್ಪೆಕ್ಟರ್, 500 ಪಿ.ಎಸ್.ಐ ಸೇರಿದಂತೆ 3000 ಪೊಲೀಸರ ನಿಯೋಜನೆ ಮಾಡಲಾಗಿದೆ.
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಹೊರತು ಪಡಿಸಿ 3 ಸಾವಿರ ಪೊಲೀಸರು ಮಂಗಳೂರಿಗೆ ತಲುಪಿದ್ದಾರೆ. ಒಟ್ಟು 5 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.
ಇಂದು ಸಿಎಎ ವಿರೋಧಿಸಿ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದ್ದು, ಮಂಗಳೂರು ರೈಲ್ವೇ ನಿಲ್ದಾಣಗಳಲ್ಲಿ ತಪಾಸಣೆ ಹೆಚ್ಚಿಸಲಾಗಿದೆ. ಹೆಚ್ಚಿನ ಭದ್ರತಾ ಸಿಬ್ಬಂದಿಪ್ರತಿಭಟನಾ ಸ್ಥಳಕ್ಕೆ ಬೆಳಗ್ಗೆ 10 ಗಂಟೆಗೆ ತೆರಳಲಿದ್ದಾರೆ. ವಾಹನಗಳ ಸಂಚಾರ ಮಾರ್ಗ ಬದಲಾವಣೆ ಹಿನ್ನಲೆಯಲ್ಲಿ ಪ್ರತಿಭಟನಕಾರರು ಪ್ರತಿಭಟನಾ ಸ್ಥಳಕ್ಕೆ 9 ಗಂಟೆ ಒಳಗೆ ಆಗಮಿಸಲು ಆರಂಭಿಸಿದ್ದಾರೆ.