ರೌಡಿ ಸೈಕಲ್‌ ರವಿಯ ಐವರು ಸಹಚರರ ಬಂಧನ

Published : Oct 02, 2019, 08:15 AM IST
ರೌಡಿ ಸೈಕಲ್‌ ರವಿಯ ಐವರು ಸಹಚರರ ಬಂಧನ

ಸಾರಾಂಶ

ದರೋಡೆಗೆ ಸಂಚು ರೂಪಿಸುತ್ತಿದ್ದ ರೌಡಿ ಸೈಕಲ್‌ ರವಿಯ ಐವರು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.  

ಬೆಂಗಳೂರು[ಅ.02]: ದರೋಡೆಗೆ ಸಂಚು ರೂಪಿಸುತ್ತಿದ್ದ ರೌಡಿ ಸೈಕಲ್‌ ರವಿಯ ಐವರು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಜಕ್ಕೂರು ಲೇಔಟ್‌ ನಿವಾಸಿಗಳಾದ ಗಂಗಾಧರ ಅಲಿಯಾಸ್‌ ಕರಿ(30), ಶಿವಕುಮಾರ್‌(30), ಅರ್ಜುನ್‌(30), ಮಂಜುನಾಥ್‌ ಅಲಿಯಾಸ್‌ ಪುಳಿ(31), ನರೇಶ್‌(29) ಬಂಧಿತರು.

ಆರೋಪಿಗಳಿಂದ ಕಾರು, ಚಾಕು, ದೊಣ್ಣೆ ಹಾಗೂ ಖಾರದ ಪುಡಿ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆರೋಪಿಗಳು ಅಮೃತಹಳ್ಳಿ ಪೊಲೀಸ್‌ ಠಾಣಾ ಸರಹದ್ದಿನ ಲುಂಬಿಣಿ ಗಾರ್ಡನ್‌ ಬಳಿಯ ಸರ್ವೀಸ್ ರಸ್ತೆಯಲ್ಲಿ ಸಾರ್ವಜನಿಕರಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ದರೋಡೆ ಮಾಡಲು ಸಂಚು ರೂಪಿಸಿದ್ದರು. ಈ ವೇಳೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

PREV
click me!

Recommended Stories

ಲಕ್ಕುಂಡಿ ಉತ್ಖನನ ಸ್ಥಳದಲ್ಲಿ ನಾಗರ ಹಾವು ಆಯ್ತು, ಈಗ ದಿಢೀರ್ ಕೋತಿಗಳ ಸೈನ್ಯವೇ ಪ್ರತ್ಯಕ್ಷ!
ಮೈಷುಗರ್ ಕಾರ್ಖಾನೆ ಅವ್ಯವಹಾರ, ಮಹಾರಾಷ್ಟ್ರದ ಅಧಿಕಾರಿಯ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆಗೆ ಕರ್ನಾಟಕ ಆದೇಶ