ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಪ್ರತಿ ಸಂಘಕ್ಕೆ 10 ಲಕ್ಷದವರೆಗೂ ಹಾಗೂ ರೈತರಿಗೆ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡಲಾಗುವುದು, ಬಡವರು ಬ್ಯಾಂಕಿಗೆ ಮೋಸ ಮಾಡುವುದಿಲ್ಲ, ಇದಕ್ಕೆ ಸಾಕ್ಷಿ ಡಿಸಿಸಿ ಬ್ಯಾಂಕ್ ಉದಾಹರಣೆಯಾಗಿದೆ ಎಂದು ಶಾಸಕ ರಮೇಶ್ ಕುಮಾರ್ ಹೇಳಿದರು.
ಶ್ರೀನಿವಾಸಪುರ (ಸೆ.15): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಪ್ರತಿ ಸಂಘಕ್ಕೆ 10 ಲಕ್ಷದವರೆಗೂ ಹಾಗೂ ರೈತರಿಗೆ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡಲಾಗುವುದು, ಬಡವರು ಬ್ಯಾಂಕಿಗೆ ಮೋಸ ಮಾಡುವುದಿಲ್ಲ, ಇದಕ್ಕೆ ಸಾಕ್ಷಿ ಡಿಸಿಸಿ ಬ್ಯಾಂಕ್ ಉದಾಹರಣೆಯಾಗಿದೆ ಎಂದು ಶಾಸಕ ರಮೇಶ್ ಕುಮಾರ್ ಹೇಳಿದರು. ತಾಲೂಕಿನ ಗೌನಿಪಲ್ಲಿ ಬಸ್ ನಿಲ್ದಾಣದಲ್ಲಿ ಬುಧವಾರ ಗೌನಿಪಲ್ಲಿ ದೊಡ್ಡ ಪ್ರಮಾಣದ ವ್ಯವಸಾಯ ಸೇವ ಸಹಕಾರ ಸಂಘದ ವತಿಯಿಂದ ಮಹಿಳೆಯರ ಸಬಲೀಕರಣಕ್ಕಾಗಿ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಬ್ಯಾಂಕ್ ವತಿಯಿಂದ ಮಹಿಳೆಯರನ್ನು ಅತಿ ಗೌರವಯುತವಾಗಿ ಶೂನ್ಯ ಬಡ್ಡಿಯಲ್ಲಿ ಸಾಲವನ್ನು ನೀಡುತ್ತಾ ಬರುತ್ತಿದೆ.
ಅದೇ ಗೌರವಯುತವಾಗಿ ಮಹಿಳೆಯರು ತಾವು ಪಡೆದುಕೊಂಡಿರುವ ಸಾಲವನ್ನು ಮರುಪಾವತಿಸುತ್ತಿರುವುದು ಹೆಗ್ಗಳಿಕೆಯ ವಿಚಾರ ಎಂದರು. ಕೇಂದ್ರ ಸರ್ಕಾರವು ರೈತರ ಕೊಳವೆ ಬಾವಿಗೆ ಮುಂದಿನ ದಿನಗಳಲ್ಲಿ ಮೀಟರ್ ಅಳವಡಿಸುವ ಯೋಜನೆಯನ್ನು ಹಮ್ಮಿಕೊಳ್ಳುತ್ತಿರುವುದಕ್ಕೆ ಮುಂದಾಗುತ್ತಿದೆ, ಧರ್ಮಗಳ ನಡೆವೆ ಬೆಂಕಿ ಹಚ್ಚಿರುವುದೇ ದೊಡ್ಡ ಸಾಧನೆಯಾಗಿದೆ, ದೇಶಕ್ಕೆ ದರಿದ್ರ ಬರಲಿಲ್ಲ. ದರಿದ್ರದವರು ದೇಶಕ್ಕೆ ಬಂದಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. ಕೇಂದ್ರ ಸರ್ಕಾರ ಮಹಿಳೆಗೆ ಒಂದು ನೀತಿ, ಹಿಂದುಗಳಿಗೆ ಒಂದು ನೀತಿ, ಮುಸ್ಲಿಂರಿಗೆ ಒಂದು ನೀತಿ, ದಲಿತರಿಗೆ ಒಂದು ನೀತಿ, ಮೇಲ್ಜಾತಿಗೆ ಒಂದು ನೀತಿ, ಹಣವಂತರಿಗೆ ಒಂದು ನೀತಿ, ಬಡವರಿಗೊಂದು ನೀತಿ ಎಂದು ಟೀಕಿಸಿದರು.
ಕೋಲಾರ ಜಿಲ್ಲೆಯಲ್ಲಿ ಶುರುವಾಗಿದೆ ರಾಜಕೀಯ ಗುದ್ದಾಟ: ಚುನಾವಣೆ ಟಿಕೆಟ್‌ಗಾಗಿ ಕಸರತ್ತು
ಭಿಕ್ಷುಕರು ಒಂದು ಹೊತ್ತಿನ ಅನ್ನಕಾಗಿ ಬೇರೊಬ್ಬರ ಮನೆ ಬಳಿ ಬೇಡಬಾರದು ಎಂದು ಸಿದ್ದರಾಮಯ್ಯ ಉಚಿತ ಅಕ್ಕಿಯ ಯೋಜನೆಯನ್ನು ಜಾರಿ ಮಾಡಿದರು. ಇದರ ಸಲುವಾಗಿ ಭಿಕ್ಷುಕರೇ ಕಾಣದಂತಾಗಿದೆ, ಸ್ತ್ರೀ ಶಕ್ತಿ ಸಂಘಗಳಿಗೆ 30 ಸಾವಿರದಿಂದ 50 ಸಾವಿರದವರೆಗೆ ಶೂನ್ಯ ಬಡ್ಡಿಯಲ್ಲಿ ಹಾಗು ರೈತರಿಗೆ 3 ಲಕ್ಷದ ವರೆಗೆ ರಡ್ಡಿ ರಹಿತ ಸಾಲ ಯೋಜನೆಯನ್ನು ಸಿದ್ದರಾಮಯ್ಯ ಜಾರಿಗೆ ತಂದಿದ್ದು ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಸ್ತ್ರೀ ಶಕ್ತಿ ಸಂಘಗಳ ಸದಸ್ಯರಿಗೆ ತಲಾ 1 ಲಕ್ಷ ಹಾಗೂ ರೈತರಿಗೆ 5 ಲಕ್ಷದ ವರೆಗೆ ಬಡ್ಡಿ ರಹಿತ ಸಾಲವನ್ನು ನೀಡಲಾಗುವುದು ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೌವಿಂದೇಗೌಡ ಮಾತನಾಡಿ, ಬಡವರಾರಯರು ಮೋಸಗಾರರಲ್ಲ, ಬಡವರು ಈ ಸಮಾಜದಲ್ಲಿ ಬದುಕಬೇಕು ಎನ್ನುವ ದೃಷ್ಟಿಯಿಂದ ಇದುವರೆಗೂ ಸಂಘಗಳಿಗೆ 50 ಸಾವಿರ ರೂಗಳು ನೀಡಲಾಗುತ್ತಿತ್ತು, ಶಾಸಕರು ಹಾಗು ಸಂಘಗಳ ಸದಸ್ಯರು 1 ಲಕ್ಷ ರೂ ಸಾಲವನ್ನು ನೀಡುವದಕ್ಕೆ ಒತ್ತಡ ತರುತ್ತಿದ್ದು, 1 ಲಕ್ಷ ನೀಡಲು ಈಗಾಗಲೇ ಕೆಲ ದಾಖಲೆಗಳನ್ನು ಸಂಘದ ಸದಸ್ಯರು ನೀಡಿದರೆ 50 ಸಾವಿರ ತನಕ ಬಡ್ಡಿ ರಹಿತ ಸಾಲ ಮತ್ತು ಉಳಿದ 50 ಸಾವಿರ ಸಾಲಕ್ಕೆ ಶೇ 4% ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು ಎಂದರು. ಇದುವರೆಗೂ 2 ಜಿಲ್ಲೆಗಳಲ್ಲಿ 6 ಲಕ್ಷ 13 ಸಾವಿರ ಮಹಿಳೆಯರಿಗೆ ಸಾಲವನ್ನು ನೀಡಿದ್ದೇವೆ. ಇದು ನಿಲ್ಲುವ ಪ್ರಶ್ನೆಯೇ ಇಲ್ಲ ಎಂದರಲ್ಲದೆ ಎರಡು ಜಿಲ್ಲೆಗಳ ನೊಂದವರ ಕಷ್ಟಗಳನ್ನು ಪರಿಹಾರ ಮಾಡುವದೇ ನಮ್ಮ ಗುರಿ. ಮುಂದಿನ ದಿನಗಳಲ್ಲಿ ಡಿಸಿಸಿ ಬ್ಯಾಂಕ್ ಬಡವರ ಬ್ಯಾಂಕ್ ಆಗಬೇಕು. ವಿಶೇಷವಾಗಿ ಯಾವುದೇ ಕಟ್ಟಕಡೆಯೇ ವ್ಯಕ್ತಿ ಸಾಲ ಬೇಕು ಎನ್ನುವ ಪರಿಸ್ಥಿತಿ ಇದ್ದಾಗ ಸಾಲ ಕೊಡುವ ವ್ಯವಸ್ಥೆ ಆಗಬೇಕೆನ್ನುವುದೇ ನಮ್ಮ ಉದ್ದೇಶ ಎಂದರು.
Kolar: ಯೋಗಾಭ್ಯಾಸ ದಿನನಿತ್ಯ ಬದುಕಿನ ಭಾಗವಾಗಲಿ: ಸಂಸದ ಮುನಿಸ್ವಾಮಿ
ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ವೀರ ಸಂಘಯ್ಯ, ಮುಖಂಡ ಹಾಗು ಚಿಂತಕ ಮಾವಳ್ಳಿ ಶಂಕರ್, ಜಿ.ಪಂ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್, ಹಿರಿಯ ಪತ್ರಕರ್ತ ಇಂದು ದರ ಹೊನ್ನಾಪುರ, ಮುಖಂಡರಾದ ಸಿ.ಎಂ.ಮುನಿಯಪ್ಪ, ವೆಂಕಟೇಶ್, ಶಿವಪ್ರಸಾದ್, ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ವೆಂಕಟರೆಡ್ಡಿ, ಎಸ್.ವಿ.ಸುದಾಕರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಅಶೋಕ್, ಕೋಲಾರ ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅಂಬರೀಶ್, ವಕೀಲ ಶ್ರೀಕೃಷ್ಣ, ಗೌನಿಪಲ್ಲಿ ದೊಡ್ಡ ಪ್ರಮಾಣದ ವ್ಯವಸಾಯ ಸೇವ ಸಹಕಾರದ ಅಧ್ಯಕ್ಷ ಶಂಕರ್‌ಪ್ರಸಾದ್, ಟಿಎಪಿಸಿಎಂಎಸ್ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಸಂಜಯ್‌ರೆಡ್ಡಿ, ಗೌನಿಪಲ್ಲಿ ರಮೇಶ್ ಇದ್ದರು.