ಚಾಮರಾಜನಗರ ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ 11 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ಜಿಲ್ಲೆಯಲ್ಲಿ ಪಟ್ಟು 20 ಪ್ರಕರಣ ದಾಖಲಾಗಿವೆ. ಈ ಪೈಕಿ ಗುಂಡ್ಲುಪೇಟೆ ಪಟ್ಟಣದಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾಗಿವೆ.
ಚಾಮರಾಜನಗರ(ಜೂ.27): ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ 11 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ಜಿಲ್ಲೆಯಲ್ಲಿ ಪಟ್ಟು 20 ಪ್ರಕರಣ ದಾಖಲಾಗಿವೆ. ಈ ಪೈಕಿ ಗುಂಡ್ಲುಪೇಟೆ ಪಟ್ಟಣದಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾಗಿವೆ.
ನಿನ್ನೆ ಗುಂಡ್ಲುಪೇಟೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಸೇರಿ 9 ಮಂದಿಗೆ ಕೊರೋನಾ ಕಾಣಿಸಿಕೊಂಡಿದೆ. ಚಾಮರಾಜನಗರ ಮತ್ತು ಕೊಳ್ಳೇಗಾಲದಲ್ಲಿ ತಲಾ ಒಂದು ಪ್ರಕರಣ ದಾಖಲಾಗಿವೆ.
undefined
ಚಾಮರಾಜನಗರದ ಚೆಸ್ಕಾಂನ 40 ವರ್ಷದ ಸಿಬ್ಬಂದಿಗೆ ವೈರಸ್ ಕಾಣಿಸಿಕೊಂಡಿದ್ದು, ಈಗಾಗಲೇ ಶಂಕರಪುರ ಬಡಾವಣೆಯ 5 ನೇ ಕ್ರಾಸನ್ನು ಸೀಲ್‌ಡೌನ್ ಮಾಡಲಾಗಿದ್ದು 100 ಮೀ.ನ್ನು ಬಫರ್ ಜೋನ್ ಆಗಿ ಮಾಡಲಾಗಿದೆ. ಗುಂಡ್ಲುಪೇಟೆಯಲ್ಲಿ 16 ಮಂದಿ, ಚಾಮರಾಜನಗರದಲ್ಲಿ 2 ಹಾಗೂ ಕೊಳ್ಳೇಗಾಲದಲ್ಲಿ 1 ಪ್ರಕರಣ ದಾಖಲಾಗಿವೆ. ಅಲ್ಲದೇ ಇದರಲ್ಲಿ ಒಬ್ಬ ಗುಣಮುಖನಾಗಿದ್ದಾನೆ.
ಚಾಲಕರಿಂದ ಹೆಚ್ಚಾಯ್ತು:
ಚಾಮರಾಜನಗರ ಜಿಲ್ಲೆಯಲ್ಲಿ ಎರಡನೇ ಸೋಂಕಿತ ವ್ಯಕ್ತಿ ಕಾಣಿಸಿಕೊಂಡ 8 ದಿನಕ್ಕೆ ಸೋಂಕಿತರ ಸಂಖ್ಯೆ 20 ಕ್ಕೇರಿದೆ. ಗುಂಡ್ಲುಪೇಟೆ ಕೊರೊನಾ ಹಾಟ್‌ಸ್ಪಾಟಾಗುತ್ತಿದೆ. ಸೋಂಕಿತ 20 ಮಂದಿಯಲ್ಲಿ ಓರ್ವ ಕೆಎಸ್‌ಆರ್‌ಟಿಸಿ ಚಾಲಕ ಸೇರಿದಂತೆ ಒಟ್ಟು ಐವರು ಚಾಲಕರಿಗೆ ಸೋಂಕು ತಗುಲಿಸಿಕೊಂಡಿದೆ. ಈ ಐವರಿಂದಲೇ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಮೂರಂಕಿ ದಾಟುವ ಸಾಧ್ಯತೆ ಇದೆ.
ಪುಣಜನೂರು ಚೆಕ್‌ಪೋಸ್ಟ್ ಹಾದು ತಮಿಳುನಾಡಿಗೆ ತೆರಳಿ ಮೂವರು ಇಬ್ಬರು ಸೋಂಕು ಹೊತ್ತು ತಂದಿದ್ದರೆ. ಕೆಎಸ್‌ಆರ್‌ಟಿಸಿ ಚಾಲಕ ಬೆಂಗಳೂರು- ಕೊಳ್ಳೇಗಾಲ ಮಾರ್ಗ ಕರ್ತವ್ಯ ನಿರ್ವಹಿಸುತ್ತಿದ್ದರು. ಗಂಟಲು ದ್ರವ ನೀಡಿದ ಬಳಿಕ 2 ದಿನ ಇವರು ಕರ್ತವ್ಯ ನಿರ್ವಹಿಸಿದ್ದು ಇವರೇ ಕಂಡಕ್ಟರ್ ಕೂಡ ಆಗಿರುವುದರಿಂದ ಇವರ ಸಹೋದ್ಯೋಗಿ ಹಾಗೂ ಪ್ರಯಾಣಿಕರಿಗೆ ಸೋಂಕು ರವಾನಿಸಿರುವ ಆತಂಕ ದಟ್ಟವಾಗಿದೆ. ಜಿಲ್ಲೆಯಲ್ಲಿ 8 ಕಂಟೇನ್ಮೆಂಟ್ ವಲಯಗಳಾಗಿದೆ.