
ನೆಲಮಂಗಲ (ಅ.16) : ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಹೋಗಿ ಬಿಜೆಪಿ ಸರ್ಕಾರ ಬರಲು ಕಾರಣ ನಾನು ಎಂದು ನೆಲಮಂಗಲದ ಮಾಜಿ ಶಾಸಕ ಎಂವಿ ನಾಗರಾಜು ಹೇಳಿಕೆ ನೀಡಿದರು.
ಅವರು ತಾಲೂಕು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಡಾ.ಸುಧಾಕರ್, ಎಂಟಿಬಿ ನಾಗರಾಜು ಬಿಜೆಪಿಗೆ ಬರಲು ನಾನು ಕಾರಣ ಎಲ್ಲಾರನ್ನು ಸಂಪರ್ಕಿಸಿ ಪಕ್ಷ ಅಧಿಕಾರಕ್ಕೆ ತರಲು ಪ್ರಯತ್ನ ಪರೋಕ್ಷವಾಗಿ ರಾಜ್ಯಮಟ್ಟದ ಬಿಜೆಪಿ ಮುಖಂಡರಿಗೆ ಟಾಂಗ್ ನೀಡಿದ ಮಾಜಿ ಶಾಸಕ ಕಾಂಗ್ರೆಸ್ ತೊರೆದು ಬಂದವರಿಗೆ ಸಚಿವ ಸ್ಥಾನ ಚುನಾವಣೆಯಲ್ಲಿ ಗೆದ್ದು ಎಲ್ಲರಿಗೆ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದ್ದು ಅದು ಹಾಗಿದೆ ಯಡಿಯೂರಪ್ಪ ನವರು ಸಹ ಎಲ್ಲ ಭರವಸೆ ನೀಡಿದರು.
'ಎರಡೂ ರಾಷ್ಟ್ರೀಯ ಪಕ್ಷಗಳಿಗೂ ಜೆಡಿಎಸ್‌ನದ್ದೇ ಭಯ’ .
ಇನ್ನೂ ಕಾಂಗ್ರೆಸ್‌ನ ಐದು ಶಾಸಕರು ಬಿಜೆಪಿ ಪಕ್ಷ ಸೇರಲು ರೆಡಿ ಇದ್ದಾರೆ. ನನ್ನ ಸಂಪರ್ಕದಲ್ಲಿ 5 ಜನ ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪನವರು ಈಗ ಬೇಡ ಎಂದಿದ್ದಾರೆ ಮುಂದೆ ನೋಡುವ ಎಂದ ನೆಲಮಂಗಲ ಮಾಜಿ ಶಾಸಕ ಎಂವಿ.ನಾಗರಾಜು ಈ ಉಪ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಬಾರಿ ಬಹುಮತದಿಂದ ಗೆಲುವು ಸಾಧಿಸಲಿದ್ದೇವೆ. ನೆ.ಯೋ.ಪ್ರಾ ಅಧ್ಯಕ್ಷ ಮಲ್ಲಯ್ಯ, ಹಾಗೂ ಮುಖಂಡರು ಇದ್ದರು.