ಮಾಸ್ಕ್‌ ಧರಿಸದವರಿಗೆ ಬಿತ್ತು 5.65 ಲಕ್ಷ ದಂಡ: ಮೊದಲ ದಿನವೇ 2788 ಕೇಸ್‌

By Kannadaprabha NewsFirst Published Oct 3, 2020, 7:11 AM IST
Highlights

ಕೊರೋನಾ ನಿಯಂತ್ರಣ: ಸಾವಿರ ರು. ದಂಡ ಜಾರಿಯಾದ ಮೊದಲ ದಿನವೇ 2788 ಕೇಸ್‌ ದಾಖಲು|5 ಲಕ್ಷಕ್ಕೂ ಹೆಚ್ಚು ದಂಡ ವಸೂಲಿ| ಮಾಸ್ಕ್‌ ಧರಿಸದವರಿಂದ 5,03,950 ರು.| ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಂದ 61,250 ಸೇರಿ 5.65 ಲಕ್ಷ ದಂಡ| 

ಬೆಂಗಳೂರು(ಅ.03): ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸಂಚರಿಸುವವರಿಗೆ ಒಂದು ಸಾವಿರ ರು. ದಂಡ ವಿಧಿಸುವ ಆದೇಶ ಜಾರಿಯಾದ ಮೊದಲ ದಿನವೇ 5.65 ಲಕ್ಷ ದಂಡ ವಸೂಲು ಮಾಡಲಾಗಿದೆ.

ಮಾಸ್ಕ್‌ ಧರಿಸದ 2,485 ಮಂದಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ 303 ಜನರ ವಿರುದ್ಧ ಒಟ್ಟು 2,788 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಮಾಸ್ಕ್‌ ಧರಿಸದವರಿಂದ 5,03,950 ರು. ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಂದ 61,250 ಸೇರಿ 5.65 ಲಕ್ಷ ದಂಡ ಪಡೆಯಲಾಗಿದೆ.

ಕರ್ನಾಟಕದಲ್ಲಿ ಕೊರೋನಾ: ಇಲ್ಲಿದೆ ಶುಕ್ರವಾರದ ಅಂಕಿ-ಸಂಖ್ಯೆ

ಒಂದು ಸಾವಿರ ರು. ದಂಡ ವಿಧಿಸುವ ಆದೇಶ ಶುಕ್ರವಾರದ ಮಧ್ಯಾಹ್ನದ ಬಳಿಕ ಅನುಷ್ಠಾನ ಮಾಡಿರುವುದರಿಂದ ಸಂಪೂರ್ಣವಾಗಿ ಪ್ರತಿಯೊಬ್ಬರಿಗೂ ಒಂದು ಸಾವಿರ ದಂಡ ವಿಧಿಸಿಲ್ಲ. 200, 300, 500 ರು. ಗಳ ವಿಧಿಸಲಾಗಿದೆ. ಹೀಗಾಗಿ, 5.65 ಲಕ್ಷ ರು.ಗಳಾಗಿದೆ. ಇಲ್ಲವಾದಲ್ಲಿ 2,788 ಪ್ರಕರಣಗಳಿಂದ 27.88 ಲಕ್ಷ ರು. ದಂಡ ಪಾವತಿಯಾಗಬೇಕಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌, ನಮ್ಮ ಉದ್ದೇಶ ಜನರಿಗೆ ದಂಡ ವಿಧಿಸುವುದಲ್ಲ. ಪ್ರತಿಯೊಬ್ಬರೂ ಮಾಸ್ಕ್‌ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೋನಾ ನಿಯಂತ್ರಣ ಮಾಡುವುದಾಗಿದೆ. ಈಗಾಗಲೇ ಸಾಕಷ್ಟು ಬಾರಿ ಮಾಸ್ಕ್‌ ಧರಿಸುವಂತೆ ಜಾಗೃತಿ ಮೂಡಿಸಲಾಗಿದೆ. ಅಂತಿಮವಾಗಿ ಹೆಚ್ಚು ದಂಡ ವಿಧಿಸುವ ನಿಯಮ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
 

click me!