ನರ್ಸಿಂಗ್‌ ಕಾಲೇಜಿನ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್‌

Kannadaprabha News   | Asianet News
Published : Feb 04, 2021, 08:12 AM ISTUpdated : Feb 04, 2021, 08:44 AM IST
ನರ್ಸಿಂಗ್‌ ಕಾಲೇಜಿನ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್‌

ಸಾರಾಂಶ

ನರ್ಸಿಂಗ್ ಕಾಲೇಜಿನಲ್ಲಿ ಕಲಿಯುತ್ತಿರುವ ಹೆಚ್ಚು ವಿದ್ಯಾರ್ಥಿಗಳ ಕೊರೋನಾ ಪರೀಕ್ಷೆಯು ಪಾಸಿಟಿವ್ ಬಂದಿದೆ. ಇದರಿಂದ ಹೆಚ್ಚು ಆತಂಕ ಸೃಷ್ಟಿಯಾಗಿದೆ. 

ಮಂಗಳೂರು (ಫೆ.04):  ಇನ್ನೇನು ಕೊರೋನಾ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ ಎಂದು ಜನತೆ ನಿಟ್ಟಿಸಿರುವ ಬಿಡುತ್ತಿರುವ ವೇಳೆಯೇ ಮಂಗಳೂರಿನ ಹೊರವಲಯದಲ್ಲಿರುವ ಉಳ್ಳಾಲದ ಖಾಸಗಿ ನರ್ಸಿಂಗ್‌ ಕಾಲೇಜಿನ 49 ವಿದ್ಯಾರ್ಥಿಗಳಿಗೆ ಒಂದೇ ಬಾರಿಗೆ ಕೊರೋನಾ ಪಾಸಿಟಿವ್‌ ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಇವರೆಲ್ಲರೂ ಕೇರಳ ಮೂಲದವರು. ಪ್ರಸ್ತುತ ಇಡೀ ಕಾಲೇಜು ಮತ್ತು ಹಾಸ್ಟೆಲ್‌ನ್ನು ಸೀಲ್‌ಡೌನ್‌ ಮಾಡಲಾಗಿದ್ದು, ವಿದ್ಯಾರ್ಥಿಗಳ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ.

ಈ ನರ್ಸಿಂಗ್‌ ಕಾಲೇಜಿನಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ಸೇರಿ 120 ಮಂದಿ ಇದ್ದಾರೆ. ಕೆಲ ದಿನಗಳ ಹಿಂದೆ 6 ವಿದ್ಯಾರ್ಥಿಗಳಿಗೆ ಸೋಂಕಿನ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಿದಾಗ ಜ.29ರಂದು ಪಾಸಿಟಿವ್‌ ದೃಢಪಟ್ಟಿತ್ತು. ತಕ್ಷಣ ಆರೋಗ್ಯ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಎಲ್ಲ 120 ಮಂದಿಯ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಇದುವರೆಗೆ 49 ಮಂದಿಗೆ ಸೋಂಕು ಖಚಿತವಾಗಿದ್ದು, ಇನ್ನೂ ಹಲವು ವರದಿಗಳು ಬರಲು ಬಾಕಿಯಿದೆ.

ಗಾಯಾಳು ವಿದ್ಯಾರ್ಥಿನಿಗೆ 1 ಲಕ್ಷ ಪರಿಹಾರದ ಚೆಕ್‌ ನೀಡಿದ ಸಚಿವ ಸುರೇಶ್‌ ಕುಮಾರ್‌

ಎಲ್ಲ ಸೋಂಕಿತರಿಗೂ ಸಂಸ್ಥೆಯಲ್ಲಿಯೇ ಐಸೋಲೇಶನ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರಲ್ಲದ ಇತರರನ್ನು ಪ್ರಾಥಮಿಕ ಸಂಪರ್ಕ ಎಂದು ಪರಿಗಣಿಸಲಾಗಿದ್ದು, ಅವರನ್ನೂ ಪ್ರತ್ಯೇಕವಾಗಿ ಅದೇ ಕಟ್ಟಡದಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳ ನಿದೇಶನದಂತೆ ಶಿಕ್ಷಣ ಸಂಸ್ಥೆಯನ್ನು ಫೆ.19ರವರೆಗೆ ಸೀಲ್‌ ಡೌನ್‌ ಮಾಡಲಾಗಿದೆ.

PREV
click me!

Recommended Stories

ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ
ಉಡುಪಿ: 2 ಗಂಟೆ ಕಾದರೂ ಬರಲಿಲ್ಲ 108 ಆಂಬುಲೆನ್ಸ್‌, ಗೂಡ್ಸ್ ಟೆಂಪೋದಲ್ಲಿ ಸಾಗಿಸಿ ವೃದ್ಧನ ರಕ್ಷಣೆ!