ಕೊರೋನಾ ಸೋಂಕಿಗೆ ಮತ್ತೊಂದು ಬಲಿ| ಜಿಲ್ಲೆಯಲ್ಲಿ ಈ ವರೆಗೂ ಒಂಬತ್ತು ಸಾವು| ಜಿಲ್ಲಾಸ್ಪತ್ರೆಯಿಂದ 38 ಜನ ಬಿಡುಗಡೆ| ಹೂಗುಚ್ಛ, ಹಣ್ಣು ನೀಡಿ ಬೀಳ್ಕೊಟ್ಟ ವೈದ್ಯರು, ಆಸ್ಪತ್ರೆ ಸಿಬ್ಬಂದಿ| ಇದುವರೆಗೆ 232 ಜನ ಗುಣಮುಖರಾಗಿ ಬಿಡುಗಡೆ|
ಬಳ್ಳಾರಿ(ಜೂ. 27): ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ 9ನೇ ಸಾವು ಸಂಭವಿಸಿದೆ. ರಕ್ತದಲ್ಲಿ ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದ ನಗರದ ರೇಡಿಯೋಪಾರ್ಕ್ ಪ್ರದೇಶದ 65 ವರ್ಷದ ಮಹಿಳೆಯನ್ನು ಇಲ್ಲಿನ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು ಬಳಿಕ ಗಂಟಲುದ್ರವ ಪಡೆದು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಪಾಸಿಟೀವ್ ಇರುವುದು ದೃಢಗೊಂಡಿದೆ.
ಒಂದೇ ದಿನ 47 ಪ್ರಕರಣ:
ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ 47 ಹೊಸ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿದ್ದು ಈ ಪೈಕಿ ಜಿಂದಾಲ್‌ನ 21 ಜನರಿಗೆ ಸೋಂಕು ಇರುವುದು ಖಚಿತವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈವರೆಗೆ ಜಿಂದಾಲ್‌ನ 356 ಜನರಿಗೆ ಸೋಂಕು ಹಬ್ಬಿದಂತಾಗಿದೆ. ಇಂದು ಪತ್ತೆಯಾದ ಸೋಂಕಿತರ ಪೈಕಿ ಸಂಡೂರಿನ 11 ವರ್ಷದ ಬಾಲಕನಿದ್ದು, ಅತಿ ಹೆಚ್ಚು ವಯಸ್ಸಿನ ಹಡಗಲಿಯ 73 ವರ್ಷದ ವೃದ್ಧರಿದ್ದಾರೆ. ಹೊಸಪೇಟೆಯ 5, ಸಂಡೂರು 22, ಹಡಗಲಿ 2, ಹಗರಿಬೊಮ್ಮನಹಳ್ಳಿ 5, ಹರಪನಹಳ್ಳಿ 2, ಬಳ್ಳಾರಿ 6, ಆದೋನಿ (ಆಂಧ್ರಪ್ರದೇಶ) 1, ಸಿರುಗುಪ್ಪ 1, ಸಿಂಧನೂರು (ರಾಯಚೂರು ಜಿಲ್ಲೆ) 1, ಕರ್ನೂಲ್ (ಆಂಧ್ರಪ್ರದೇಶ)1, ಲಿಂಗಸೂಗೂರು (ರಾಯಚೂರು ಜಿಲ್ಲೆ) 1 ಪ್ರಕರಣ ಪತ್ತೆಯಾಗಿದೆ. ಜಿಂದಾಲ್‌ನ ಪ್ರಕರಣಗಳ ಪೈಕಿ ಬಹುತೇಕವು ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರವು. ಉಳಿದವು ಐಎಲ್‌ಐ, ಮಹಾರಾಷ್ಟ್ರದಿಂದ ಬಂದ ಟ್ರಾವೆಲ್ ಹಿಸ್ಟ್ರಿ, ದುರ್ಬಲವರ್ಗ (ಟಿಬಿ)ದಿಂದ ಕೂಡಿವೆ. ಇನ್ನು ಅನೇಕ ಪ್ರಕರಣಗಳ ಟ್ರಾವೆಲ್ ಹಿಸ್ಟ್ರಿ ಕಲೆ ಹಾಕಲಾಗುತ್ತಿದೆ.
ಅಯ್ಯಯ್ಯೋ: SSLC ಪರೀಕ್ಷಾ ಕೇಂದ್ರದಲ್ಲಿ ಕೊರೋನಾ ಸೋಂಕಿತ ಪೇದೆ ಕಾರ್ಯನಿರ್ವಹಣೆ
600 ಗಡಿದಾಟಿದ ಸೋಂಕಿತರು:
ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 600 ಗಡಿದಾಟಿದೆ. ಶುಕ್ರವಾರವರೆಗೆ ಒಟ್ಟು 610 ಜನರಿಗೆ ವೈರಸ್ ಹಬ್ಬಿರುವುದು ದೃಢಪಟ್ಟಿದೆ. ಈವರೆಗೆ 232 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು 369 ಪ್ರಕರಣಗಳು ಸಕ್ರಿಯವಾಗಿವೆ. ಶುಕ್ರವಾರ 217 ಜನರಿಗೆ ಗಂಟಲುದ್ರವ ಪಡೆದು ಪರೀಕ್ಷೆಗೆ ಕಳಿಸಲಾಗಿದೆ. ಇನ್ನು 332 ಜನರ ವೈದ್ಯಕೀಯ ವರದಿ ಬರಬೇಕಾಗಿದೆ. ಜಿಲ್ಲೆಯಲ್ಲಿ ಒಟ್ಟು 660 ಜನರು 28 ದಿನಗಳ ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ್ದಾರೆ. ಮನೆಯ ಕ್ವಾರಂಟೈನ್‌ನಲ್ಲಿ 1700 ಜನರಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಬ್ಯಾಂಕ್ ಸಿಬ್ಬಂದಿಗೆ ಕೊರೋನಾ:
ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಸಿಂಡಿಕೇಟ್ ಬ್ಯಾಂಕ್ ಸಹಾಯಕ ವ್ಯವಸ್ಥಾಪಕರಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗೆ ಸೀಲ್‌ಡೌನ್ ಮಾಡಲಾಗಿದೆ. ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕರು ಪ್ರಾಥಮಿಕ ಸಂಪರ್ಕಿತರ ಮಾಹಿತಿ ಪಡೆಯಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಕಂಪ್ಲಿ ಠಾಣೆಯ 31 ವರ್ಷದ ಪೊಲೀಸ್ ಪೇದೆಗೆ ಕೊರೋನಾ ಕಾಣಿಸಿಕೊಂಡಿದೆ. ಈತ ಹಗರಿಬೊಮ್ಮನಹಳ್ಳಿ ತಾಲೂಕಿನ ಕೃಷ್ಣಾಪುರ ಗ್ರಾಮದ ಈ ಪೇದೆ, ಕಂಪ್ಲಿ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಕೆಮ್ಮು, ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಜೆ ಹಾಕಿ ಸ್ವಗ್ರಾಮಕ್ಕೆ ತೆರಳಿದ್ದರು. ಜೂ.23ರಂದು ಹಗರಿಬೊಮ್ಮನಹಳ್ಳಿ ಆಸ್ಪತ್ರೆಯಲ್ಲಿ ಗಂಟಲುದ್ರವ ಪರೀಕ್ಷೆ ನಡೆಸಲಾಗಿದ್ದು, ಜೂ.25 ರಂದು ಬಂದ ವೈದ್ಯಕೀಯ ವರದಿಯಲ್ಲಿ ಪಾಸಿಟಿವ್ ಇರುವುದು ಖಚಿತವಾಗಿದೆ.
ಜಿಲ್ಲಾಸ್ಪತ್ರೆಯಿಂದ 38 ಜನ ಬಿಡುಗಡೆ
ಬಿಡುಗಡೆಯಾದವರ ವಿವರ:
ಪಿ-7400 ಬಳ್ಳಾರಿಯ ನೇತಾಜಿ ನಗರ 21 ವರ್ಷದ ಯುವಕ, ಪಿ-6696 ಆಂಧ್ರಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯ 4 ವರ್ಷದ ಬಾಲಕ, ಪಿ-6468 ತೋರಣಗಲ್ಲು ನಿವಾಸಿ 44 ವರ್ಷದ ವ್ಯಕ್ತಿ, ಪಿ-7838 ಸಂಡೂರು ತಾಲೂಕಿನ ಬಸಾಪುರ 21 ವರ್ಷದ ಯುವಕ, ಪಿ-8382 ಅನಂತಪುರದ ರಾಯದುರ್ಗದ 28 ವರ್ಷದ ಮಹಿಳೆ, ಪಿ-6508 ತೋರಣಗಲ್ಲು 43 ವರ್ಷದ ಮಹಿಳೆ, ಪಿ-6479 ತೋರಣಗಲ್ಲು 35 ವರ್ಷದ ವ್ಯಕ್ತಿ, ಪಿ-6507 ತೋರಣಗಲ್ಲು 55 ವರ್ಷದ ವ್ಯಕ್ತಿ, ಪಿ-7410 ಹೊಸಪೇಟೆಯ ಎಸ್.ಆರ್. ನಗರ 23 ವರ್ಷದ ಯುವತಿ, ಪಿ-7415 ಕುರೇಕುಪ್ಪ 35 ವರ್ಷದ ಮಹಿಳೆ, ಪಿ-5374 ತೋರಣಗಲ್ಲು 10 ವರ್ಷದ ಬಾಲಕ, ಪಿ-7426 ಬಳ್ಳಾರಿಯ ಡಿ.ಎಚ್. ಪ್ರದೇಶದ 27 ವರ್ಷದ ವ್ಯಕ್ತಿ, ಪಿ-6417 ಬಳ್ಳಾರಿಯ ನೆಹರು ಕಾಲೋನಿಯ 50 ವರ್ಷದ ಮಹಿಳೆ, ಪಿ-6471 ಕೊಟ್ಟೂರಿನ ಕೋಗಳಿ 61 ವರ್ಷದ ವ್ಯಕ್ತಿ, ಪಿ-6992 ಬಳ್ಳಾರಿಯ ವಿಶಾಲನಗರ 65 ವರ್ಷದ ಮಹಿಳೆ, ಪಿ-7968 ಬಳ್ಳಾರಿ ಅನಂತಪುರ ರಸ್ತೆ ನಿವಾಸಿ 28 ವರ್ಷದ ಮಹಿಳೆ, ಪಿ-7985 ತೋರಣಗಲ್ಲು 41 ವರ್ಷದ ಮಹಿಳೆ, ಪಿ-7984 ಬಳ್ಳಾರಿಯ ದೇವಿನಗರ 1ನೇ ಕ್ರಾಸ್ 41 ವರ್ಷದ ವ್ಯಕ್ತಿ, ಪಿ-7988 ಹೊಸಪೇಟೆ ಸತ್ಯನಗರ ನಿವಾಸಿಯ 36 ವರ್ಷದ ವ್ಯಕ್ತಿ, ಪಿ-7985 ತೋರಣಗಲ್ಲು 30 ವರ್ಷದ ವ್ಯಕ್ತಿ, ಪಿ-7966 ಬಳ್ಳಾರಿ ಡಿ.ಎಚ್. ನಿವಾಸಿಯ 24 ವರ್ಷದ ಯುವಕ, ಪಿ-7996 ಬಳ್ಳಾರಿ 44 ವರ್ಷದ ವ್ಯಕ್ತಿ, ಪಿ-7963 ಹೊಸಪೇಟೆ ತಾಲೂಕಿನ ಕಮಲಾಪುರದ 35 ವರ್ಷದ ಮಹಿಳೆ, ಪಿ-6486 ಸಿರುಗುಪ್ಪ ತಾಲೂಕಿನ 21 ವರ್ಷದ ಯುವಕ, ಪಿ-6695 ಕುರುಗೋಡು ತಾಲೂಕಿನ 32 ವರ್ಷದ ಮಹಿಳೆ, ಪಿ-9066 ಮರಿಯಮ್ಮನಹಳ್ಳಿಯ 25 ವರ್ಷದ ಯುವತಿ, ಪಿ-7842 ತೋರಣಗಲ್ಲು 24 ವರ್ಷದ ಯುವತಿ, ಪಿ-7837 ಹೊಸಪೇಟೆ ಭುವನಹಳ್ಳಿಯ 28 ವರ್ಷದ ಮಹಿಳೆ, ಪಿ-5374 ತೋರಣಗಲ್ಲು ಜೆಎಸ್‌ಡಬ್ಲ್ಯೂ ಜಿಂದಾಲ್‌ನ 12 ವರ್ಷದ ಬಾಲಕಿ, ಪಿ-6441 ಸಂಡೂರಿನ 9 ವರ್ಷದ ಬಾಲಕಿ, ಪಿ-6690 ತೋರಣಗಲ್ಲುವಿನ ಜಿಂದಾಲ್ ಟೌನ್‌ಶಿಪ್ ಕಂಟೈನ್ಮೆಂಟ್ ಜೋನ್ 11 ವರ್ಷದ ಬಾಲಕ, ಪಿ-6998 ಬಳ್ಳಾರಿ ನೆಹರು ಕಾಲೋನಿಯ 6 ವರ್ಷದ ಹೆಣ್ಣು ಮಗು, ಪಿ-7412 ಹೊಸಪೇಟೆಯ ಎಸ್.ಆರ್. ನಗರದ 7 ತಿಂಗಳ ಗಂಡು ಮಗು, ಪಿ-7442 ಕೊಟ್ಟೂರಿನ ಕೋಗಳಿ 9 ವರ್ಷದ ಬಾಲಕಿ, ಪಿ-7709 ಹಡಗಲಿ ತಾಲೂಕಿನ 10 ವರ್ಷದ ಬಾಲಕಿ, ಪಿ-7729 ಕೊಟ್ಟೂರಿನ ಕೋಗಳಿಯ 7 ವರ್ಷದ ಬಾಲಕ, ಪಿ-7722 ಬಳ್ಳಾರಿ ಬಂಡಿಮೋಟ್ ಪ್ರದೇಶದ 8 ವರ್ಷದ ಬಾಲಕ ಹಾಗೂ ಪಿ-7723 ಅದೇ ಪ್ರದೇಶದ 10 ವರ್ಷದ ಬಾಲಕಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎನ್. ಬಸರೆಡ್ಡಿ, ಗುಣಮುಖರಾಗಿ ಮನೆಯತ್ತ ತೆರಳಲು ಸಿದ್ಧರಾಗಿ ನಿಂತಿದ್ದವರಿಗೆ ಹೂಗುಚ್ಛ, ಹಣ್ಣು-ಹಂಪಲು ನೀಡಿ ಚಪ್ಪಾಳೆ ತಟ್ಟಿಅಭಿನಂದಿಸಿದರು. ಕಂದಾಯ ಇಲಾಖೆ ವತಿಯಿಂದ ಮಾಸ್ಕ್ ಮತ್ತು ಸ್ಯಾನಿಟೈಜರ್ ನೀಡಿ ತಮ್ಮ ಊರುಗಳಿಗೆ ಕಳುಹಿಸಿಕೊಡಲಾಯಿತು.
ಕೋವಿಡ್ ನೋಡಲ್ ಅಧಿಕಾರಿ ಡಾ. ದೈವಿಕ್, ಹಿರಿಯ ತಜ್ಞರಾದ ಡಾ. ಪ್ರಕಾಶ್ ಭಾಗವತಿ, ಡಾ. ಉದಯ್ ಶಂಕರ್, ಡಾ. ಮಧು ಜುಮ್ಲ, ಶುಶ್ರೂಷಕಾ ಅಧೀಕ್ಷಕಿ ಶಾಂತಾಬಾಯಿ, ಡಾ. ಚಿತ್ರಶೇಖರ ಸೇರಿದಂತೆ ಲ್ಯಾಬ್ ಟೆಕ್ನಿಷಿಯನ್ಸ್, ಎಕ್ಸ್-ರೇ, ಡಿ-ಗ್ರೂಪ್ ಸಿಬ್ಬಂದಿ ಹಾಗೂ ಆಸ್ಪತ್ರೆಯ ಇತರ ಸಿಬ್ಬಂದಿ ಇದ್ದರು.