ಹಾವೇರಿ ಜಿಲ್ಲೆಯಲ್ಲಿ ಈ ವರೆಗೆ 275 ಕೋವಿಡ್-19 ಪಾಸಿಟಿವ್ ಪ್ರಕರಣ ದೃಢ| ಈ ಪೈಕಿ 116 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ| ಶುಕ್ರವಾರ ಒಬ್ಬರು ಸೇರಿದಂತೆ ಈವರೆಗೆ ಮೂವರ ಸಾವು| 156 ಪ್ರಕರಣಗಳು ಸಕ್ರಿಯ|
ಹಾವೇರಿ(ಜು.11): ಕಂದಾಯ ಇಲಾಖೆಯ ನೌಕರ, ಆಶಾ ಕಾರ್ಯಕರ್ತೆ ಸೇರಿ ಶುಕ್ರವಾರ ಜಿಲ್ಲೆಯ 45 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಈ ವರೆಗೆ 275 ಕೋವಿಡ್-19 ಪಾಸಿಟಿವ್ ಪ್ರಕರಣ ದೃಢಗೊಂಡಿವೆ. ಈ ಪೈಕಿ 116 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಹೊಂದಿದ್ದಾರೆ. ಶುಕ್ರವಾರ ಒಬ್ಬರು ಸೇರಿದಂತೆ ಈವರೆಗೆ ಮೂವರು ಮೃತಪಟ್ಟಿದ್ದಾರೆ. 156 ಪ್ರಕರಣಗಳು ಸಕ್ರಿಯವಾಗಿವೆ ಎಂದು ತಿಳಿಸಿದ್ದಾರೆ.
ಶುಕ್ರವಾರ ದೃಢಪಟ್ಟ ಪ್ರಕರಣಗಳ ಪೈಕಿ ಹಾವೇರಿ ತಾಲೂಕಿನ 21, ಶಿಗ್ಗಾಂವಿ ತಾಲೂಕಿನ 9, ಸವಣೂರ ತಾಲೂಕಿನ 5, ರಾಣಿಬೆನ್ನೂರು ತಾಲೂಕಿನ 6 ಹಾಗೂ ಹಾನಗಲ್ಲ ತಾಲೂಕಿನ 4 ಪ್ರಕರಣಗಳು ಒಳಗೊಂಡಿವೆ. ರಾಣಿಬೆನ್ನೂರ ತಾಲೂಕಿನ ಕೋಣನತಂಬಿಗೆ ಗ್ರಾಮದ 50 ವರ್ಷದ ಮಹಿಳೆ ಜು. 8ರಂದು ಜ್ವರವಿದ್ದ ಕಾರಣ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಐಎಲ್‌ಐ ಕಾರಣ ಚಿಕಿತ್ಸೆ ಪಡೆಯುತ್ತಿದ್ದು, ಶುಕ್ರವಾರ ಮೃತಪಟ್ಟಿದ್ದಾರೆ. ಈಕೆಯ ಸ್ವಾ್ಯಬ್ ವರದಿ ಸಂಗ್ರಹಿಸಿದ್ದು ವರದಿ ನಿರೀಕ್ಷಿಸಲಾಗುತ್ತಿದೆ.
ಕೊರೋನಾ ನಿಯಂತ್ರಣಕ್ಕೆ ನಿತ್ಯ 18 ಗಂಟೆ ಲಾಕ್‌ಡೌನ್
ಶಿಗ್ಗಾಂವಿಯ ಜಯನಗರ ಕಂಟೈನ್‌ಮೆಂಟ್ ಜೋನ್‌ನಲ್ಲಿ ಜು. 6ರಂದು ನಿಧನಹೊಂದಿದ್ದ 82 ವರ್ಷದ ವ್ಯಕ್ತಿಯ ಲ್ಯಾಬ್ ವರದಿ ಬಂದಿದ್ದು, ಪಾಸಿಟಿವ್ ಎಂದು ದೃಢಪಟ್ಟಿದೆ. ಮೃತ 82 ವರ್ಷದ ವ್ಯಕ್ತಿ ಪಿ-19,992ರ ಸೋಂಕಿತನ ಸಂಪರ್ಕಿತರಾಗಿದ್ದಾರೆ. ಮೃತರ ಸಂಸ್ಕಾರ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಕೋವಿಡ್ ನಿಯಮಾವಳಿಯಂತೆ ಸಂಸ್ಕಾರ ನೆರವೇರಿಸಲಾಗಿತ್ತು.
ಸೋಂಕಿತರ ವಿವರ:
ಹಾವೇರಿ ನಗರದ ಗುತ್ತಲ ರಸ್ತೆಯ ಪಿ-24736ರ ಸಂಪರ್ಕಿತೆ 30 ವರ್ಷದ ಮಹಿಳೆ, ಅಶ್ವಿನಿ ನಗರದ ಪಿ-19943ರ ಸಂಪರ್ಕಿತೆ 38 ವರ್ಷದ ಮಹಿಳೆ, ಶಿವಬಸವನಗರ 44 ವರ್ಷದ ಪುರುಷನ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಅಶ್ವಿನಿನಗರದ ಪಿ-25372ರ ಸಂಪರ್ಕಿತರಾದ 28 ವರ್ಷದ ಪುರುಷ, 66 ವರ್ಷದ ಪುರುಷ, 22 ವರ್ಷದ ಪುರುಷ, 55 ವರ್ಷದ ಮಹಿಳೆ, ಕಲ್ಲುಮಂಟಪ ಓಣಿಯ 26 ವರ್ಷದ ಮಹಿಳೆಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಪಿ-16598ರ ಸಂಪರ್ಕಿತರಾದ ಕನವಳ್ಳಿಯ 28 ವರ್ಷದ ಮಹಿಳೆ, 67 ವರ್ಷದ ಮಹಿಳೆ, 60 ವರ್ಷದ ಪುರುಷ, ಪಿ-18104ರ ಸಂಪರ್ಕಿತರಾದ 50 ವರ್ಷದ ಮಹಿಳೆ, ಪಿ-16598ರ ಸಂಪರ್ಕಿತರಾದ 29 ವರ್ಷದ ಮಹಿಳೆ, ಪಿ-23227ರ ಸಂಪರ್ಕಿತೆ 65 ವರ್ಷದ ಮಹಿಳೆ, ಪಿ-16598ರ ಸಂಪರ್ಕಿತೆ 48 ವರ್ಷ ಮಹಿಳೆ, 60 ವರ್ಷದ ಪುರುಷ, 35 ವರ್ಷದ ಪುರುಷ, ಪಿ-18104ರ ಸಂಪರ್ಕಿತ 50 ವರ್ಷದ ಪುರುಷ, 20 ವರ್ಷದ ಯುವಕ, ಪಿ-23227ರ ಸಂಪರ್ಕಿತರಾದ 26 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಪಿ-30694ರ ಸಂಪರ್ಕಿತ ಶಿಗ್ಗಾಂವಿ ತಾಲೂಕಿನ ಬಂಕಾಪುರ ಚೌಡಿಕೂಟದ 36 ವರ್ಷದ ಪುರುಷ, ಪಿ-30694ರ ಸಂಪರ್ಕಿತ ಶಿಗ್ಗಾಂವಿ ಅಂಬೇಡ್ಕರ ನಗರದ 50 ವರ್ಷದ ಮಹಿಳೆ, ಪಿ-19933ರ ಸಂಪರ್ಕಿತರಾದ ಜಯನಗರ ಬಡಾವಣೆಯ 45 ವರ್ಷದ ಪುರುಷ, ವಿನಾಯಕ ನಗರದ ನಿವಾಸಿ 59 ವರ್ಷದ ಪುರುಷನ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಶಿಗ್ಗಾಂವಿ ಜಯನಗರ ಕಂಟೈನ್‌ಮೆಂಟ್ ಪ್ರದೇಶದ 82 ವರ್ಷದ ಪುರುಷ ಜು. 6ರಂದು ಸ್ವ ಗೃಹದಲ್ಲಿ ಮೃತಪಟ್ಟಿದ್ದು ಈತನ ಮಾದರಿಯನ್ನು ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಜು.10 ರಂದು ಈತನ ಪಾಸಿಟಿವ್ ವರದಿ ಬಂದಿರುತ್ತದೆ. ಸಂಸ್ಕಾರದ ಸಂದರ್ಭದಲ್ಲಿ ಕೋವಿಡ್ ನಿಯಮಾವಳಿ ಅನುಸರಿಸಲಾಗಿದೆ.
ಹಾನಗಲ್ಲ ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಗದಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತನ ಸಂಪರ್ಕದ ಕಾರಣ ಹಾನಗಲ್ಲ ನಗರದದ ದ್ವಿತೀಯ ದರ್ಜೆ ಗುಮಾಸ್ತ 32 ವರ್ಷದ ಪುರುಷನ ಸಂಪರ್ಕಿತರಾದ 43 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ನಿಯಮಾನುಸಾರ ಸೋಂಕಿತರ ನಿವಾಸ ಇರುವ ಪ್ರದೇಶದ 100 ಮೀಟರ್ ಪ್ರದೇಶವನ್ನು ಕಂಟೈನ್‌ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. ನಗರ ಪ್ರದೇಶದ 200 ಪ್ರದೇಶವನ್ನು ಹಾಗೂ ಸೋಂಕಿತರ ಗ್ರಾಮವಾದ ಕನವಳ್ಳಿ, ಮನ್ನಂಗಿ, ಮಾದಾಪೂರ, ನಿಟ್ಟೂರು, ದೇವಗೊಂಡನಕಟ್ಟೆ, ಆಡೂರ ಗ್ರಾಮಗಳನ್ನು ಸಂಪೂರ್ಣವಾಗಿ ಬಫರ್ ಜೋನ್ ಆಗಿ ಘೋಷಿಸಲಾಗಿದೆ.